ತೋಟಗಾರಿಕೆಯೂ ಪೌಷ್ಠಿಕ ಭದ್ರತೆ

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ೨ನೇ ದಿನಗಳ ರಾಷ್ಟಿçÃಯ ಸಮ್ಮೇಳನವನ್ನು ಐಸಿಎಆರ್-ಎನ್‌ಸಿಆರ್ ಆನ್ ಪೊಮೊಗ್ರನೇಟ್ ನಿರ್ದೇಶಕ ಡಾ.ರಾಜೀವ್ ಅರವಿಂದ ಮರಾಠೆ ಉದ್ಘಾಟಿಸಿದರು. ವಿವಿ ಕುಲಪತಿ ಡಾ.ವಿಷ್ಣುವರ್ಧನ ಇತರರು ಇದ್ದರು.
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ೨ನೇ ದಿನಗಳ ರಾಷ್ಟಿçÃಯ ಸಮ್ಮೇಳನವನ್ನು ಐಸಿಎಆರ್-ಎನ್‌ಸಿಆರ್ ಆನ್ ಪೊಮೊಗ್ರನೇಟ್ ನಿರ್ದೇಶಕ ಡಾ.ರಾಜೀವ್ ಅರವಿಂದ ಮರಾಠೆ ಉದ್ಘಾಟಿಸಿದರು. ವಿವಿ ಕುಲಪತಿ ಡಾ.ವಿಷ್ಣುವರ್ಧನ ಇತರರು ಇದ್ದರು.
Published on

ಆಹಾರ ಧಾನ್ಯಗಳು ನಮ್ಮ ಆಹಾರ ಭದ್ರತೆ ಖಚಿತ ಪಡಿಸಿದರೆ ತೋಟಗಾರಿಕೆಯೂ ಪೌಷ್ಠಿಕ ಭದ್ರತೆ ಹಾಗೂ ಆರ್ಥಿಕ ಸಮೃದ್ಧಿಯನ್ನು ಕೊಡುತ್ತದೆ ಎಂದು ಐಸಿಎಆರ್-ಎನ್‌ಸಿಆರ್ ಆನ್ ಪೊಮೊಗ್ರನೇಟ್ ನಿರ್ದೇಶಕ ಡಾ.ರಾಜೀವ್ ಅರವಿಂದ ಮರಾಠೆ ಹೇಳಿದರು.

ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಶುಕ್ರವಾರ ಹವಾಮಾನ ಸ್ಥಿತಿಸ್ಥಾಪಕತ್ವದ ಖುಷ್ಕಿ ಮತ್ತು ಮಳೆಯಾಶ್ರಿತ ತೋಟಗಾರಿಕೆ; ಸಣ್ಣ ಹಿಡುವಳಿದಾರರ ಆರ್ಥಿಕತೆ ಮತ್ತು ಜೀವನೋಪಾಯವನ್ನು ಬಲಪಡಿಸುವುದು ಎಂಬ ಶೀರ್ಷಿಕೆ ಅಡಿಯಲ್ಲಿ ಜರುಗಿದ ರಾಷ್ಟಿçÃಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಹವಾಮಾನ ಬದಲಾವಣೆ ಇಂದಿನ ದಿನಗಳಲ್ಲಿ ಕರ್ನಾಟಕ ಮತ್ತು ಮಹಾರಾಷ್ಟçದಲ್ಲಿ ದೇಶದ ಕೃಷಿ ಪ್ರದೇಶದ ಬಹುಪಾಲು ಒಣಭೂಮಿ ಮತ್ತು ಮಳೆಯಾಶ್ರಿತ ಪ್ರದೇಶಗಳನ್ನು ಒಳಗೊಂಡಿದೆ. ಇಲ್ಲಿ ಮಳೆಯ ಪ್ರಮಾಣ ಮತ್ತು ವಿತರಣೆಯಲ್ಲಿ ಅನಿಶ್ಚಿತತೆ ಹಾಗೂ ನೀರಿನ ಲಭ್ಯತೆಯ ಕೊರತೆ ಪ್ರಮುಖ ಸವಾಲುಗಳಾಗಿವೆ. ಅದರಲ್ಲಿ ಪ್ರಮುಖವಾಗಿ ಆಹಾರ ಧಾನ್ಯ ಉತ್ಪಾದನೆ, ನೀರಿನ ಸಮರ್ಥ ನಿರ್ವಹಣೆ, ಸಾವಯವ ಕೃಷಿ ಮೌಲ್ಯವರ್ಧನೆ ಆಹಾರ ಭದ್ರತೆ, ರೈತರ ಆದಾಯವೃದ್ಧಿ ಮತ್ತು ಸುಸ್ಥಿರ ಗ್ರಾಮೀಣ ಜೀವನೋಪಾಯದಲ್ಲಿ ನಾವು ಕಾಣಬಹುದಾಗಿದೆ ಎಂದರು.
ಮಣ್ಣು ಪರೀಕ್ಷೆ, ಮಣ್ಣಿನ ಆಯ್ಕೆ ಮತ್ತು ವರ್ಗೀಕರಣದ ನಂತರ ಬೆಳೆಗಳ ಆಯ್ಕೆ ಮಾಡುವುದು ತುಂಬಾ ಸೂಕ್ತವಾಗಿದೆ. ವಿಶೇಷವಾಗಿ ದ್ರಾಕ್ಷಿ ಮತ್ತು ದಾಳಿಂಬೆ ಉತ್ಪಾದನೆಯಲ್ಲಿ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ತೋವಿವಿ ಸಂಶೋಧನಾ ನಿರ್ದೇಶಕ ಡಾ.ಬಿ.-Àಕ್ರುದ್ದೀನ ಮಾತನಾಡಿ, ವಿಜ್ಞಾನಿ, ರೈತರು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸಮೂಗಗೊಳಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ಶೇ. ೬೦ ಒಣಭೂಮಿ ಪ್ರದೇಶವಿದ್ದು ನಮ್ಮ ದೇಶದಲ್ಲಿ ೩.೨೦ ಮಿಲಿಯನ್ ಟನ್ ಹಣ್ಣು ಉತ್ಪದನೆ ಇದೆ. ಈ ವರ್ಷ ಎಲ್‌ನಿನೋ ಪರಿಣಾಮದಲ್ಲಿ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರ ರೈತರ ಮೇಲೆ ಹೆಚ್ಚು ತೀವ್ರವಾಗಿ ಬೀರುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ವಿಷ್ಣುವರ್ಧನ ಮಾತನಾಡಿದರು. ವಿಸ್ತರಣಾ ನಿರ್ದೇಶಕ ಡಾ. ವೆಂಕಟೇಶಲು, ಡಾ. ಬಾಲಾಜಿ ಕುಲಕರ್ಣಿ, ಡಾ. ಚಂದ್ರಶೇಖರ್ ಬಿರಾದಾರ, ಎನ್. ತಮ್ಮಯ್ಯ, ಡಾ. ಆನಂದ ಮಾಸ್ತಿಹೊಳಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net