ರಬಕವಿ/ಬನಹಟ್ಟಿ: ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ರಬಕವಿಯ ಖ್ಯಾತ ಜಾನಪದ ಹಾಡುಗಾರ ಶ್ರೀಕಾಂತ ಕೆಂದುಳಿಗೆ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ. ಮುಂಬೈನ ಡಾ. ರಾಧಾಕೃಷ್ಣ ಸಂಶೋಧನಾ ಕೇಂದ್ರದ ಶಿಫಾರಸಿನ ಮೇರೆಗೆ ಸೆಂಟ್ರಲ್ ಅಮೆರಿಕಾ ಯುನಿವರ್ಸಿಟಿ ಗೌರವವನ್ನು ಪ್ರದಾನಿಸಿದೆ. ಐದು ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನಪದ ಗೀತೆಗಳನ್ನು ರಚಿಸಿರುವ ಕೆಂದೂಳಿ, ಆಕಾಶವಾಣಿ ಹಾಗೂ ದೂರದರ್ಶನದಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ. ಕಳೆದ 15 ವರ್ಷಗಳಿಂದ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಭಕ್ತಿಗೀತೆಗಳ ಮೂಲಕವೂ ವಿಶಿಷ್ಟ ಗುರುತಿಸಿಕೊಂಡಿದ್ದಾರೆ. ಜನಪದ ಪರಂಪರೆಯನ್ನು ಉಳಿಸಿ, ಬೆಳೆಸುವಲ್ಲಿ ಅವರ ಕೊಡುಗೆ ಗಮನಾರ್ಹ.