ಹೋಮಿಯೋಪಥಿಕ್ ಭವಿಷ್ಯದ ವೈದ್ಯ ವಿಜ್ಞಾನ

 ಬಾಗಲಕೋಟೆ ಬಿವಿವಿ ಸಂಘದ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಬಿಎಚ್‌ಎಂಎಸ್ ಪ್ರಥಮ ಬ್ಯಾಚಿನ ಪದವಿ ಪ್ರದಾನ ಸಮಾರಂಭದಲ್ಲಿ ಕೇಂದ್ರೀಯ ಹೋಮಿಯೋಪಥಿ ಆಯೋಗದ ನಿಕಟಪೂರ್ವ ಚೇರ್ಮನ್ ಡಾ. ಪಿನಾಕಿನ್ ತ್ರಿವೇದಿ ಪದವಿ ಪ್ರದಾನ ಮಾಡಿದರು.
ಬಾಗಲಕೋಟೆ ಬಿವಿವಿ ಸಂಘದ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಬಿಎಚ್‌ಎಂಎಸ್ ಪ್ರಥಮ ಬ್ಯಾಚಿನ ಪದವಿ ಪ್ರದಾನ ಸಮಾರಂಭದಲ್ಲಿ ಕೇಂದ್ರೀಯ ಹೋಮಿಯೋಪಥಿ ಆಯೋಗದ ನಿಕಟಪೂರ್ವ ಚೇರ್ಮನ್ ಡಾ. ಪಿನಾಕಿನ್ ತ್ರಿವೇದಿ ಪದವಿ ಪ್ರದಾನ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಿಕಟಪೂರ್ವ ಚೇರ್ಮನ್ ಡಾ. ಪಿನಾಕಿನ್ ತ್ರಿವೇದಿ ಅಭಿಮತ
  • ವೈದ್ಯಕೀಯ ಕಾಲೇಜಿನ ಪ್ರಥಮ ಪದವಿ ಪ್ರದಾನ
  • ಹೋಮಿಯೋಪಥಿ ಚಿಕಿತ್ಸಾ ವಿಧಾನವು ತನ್ನ ಸ್ವಂತ ಸ್ಥಿರತೆ ಮತ್ತು ಯೋಗ್ಯತೆ ಮೇಲೆ ಬೆಳೆಯುತ್ತಿದೆ.
ಬಾಗಲಕೋಟೆ: ವೈದ್ಯಕೀಯ ಕ್ಷೇತ್ರದಲ್ಲಿ ಹೋಮಿಯೋಪಥಿಕ್ ಭವಿಷ್ಯದ ವೈದ್ಯ ವಿಜ್ಞಾನವಾಗಲಿದ್ದು, ಜಗತ್ತಿನಲ್ಲಿ ವೈದ್ಯ ವೃತ್ತಿ ಒಂದು ಧರ್ಮ ಕಾರ್ಯವಾಗಿದೆ ಎಂದು ಭಾರತ ಸರ್ಕಾರ ಕೇಂದ್ರೀಯ ಹೋಮಿಯೋಪಥಿ ಆಯೋಗದ ನಿಕಟಪೂರ್ವ ಚೇರ್ಮನ್ ಡಾ. ಪಿನಾಕಿನ್ ತ್ರಿವೇದಿ ಹೇಳಿದರು.
ನಗರದ ಬಿವಿವಿ ಸಂಘದ ನೂತನ ಸಭಾ ಭವನದಲ್ಲಿ ಗುರುವಾರ ನಡೆದ ಬಿವಿವಿಎಸ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಬಿಎಚ್‌ಎಂಎಸ್ ಪ್ರಥಮ ಬ್ಯಾಚಿನ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು
.
ಹೋಮಿಯೋಪಥಿ ಚಿಕಿತ್ಸಾ ವಿಧಾನವು ತನ್ನ ಸ್ವಂತ ಸ್ಥಿರತೆ ಮತ್ತು ಯೋಗ್ಯತೆ ಮೇಲೆ ಬೆಳೆಯುತ್ತಿದೆ. ರೋಗಿಗಳ ಪಾಲಿಗೆ ಸಂಜೀವಿನಿಯಾಗಿದೆ. ದೊರೆತ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಮ್ಮ ಸುತ್ತಮುತ್ತಲಿನ ಜನ ಸಮುದಾಯದಲ್ಲಿ ಸಕಾರಾತ್ಮಕ ಬದಲಾವಣೆಯೊಂದಿಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಲಿ ಎಂದು ತಿಳಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಶಿಕ್ಷಣದ ಜತೆಗೆ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯಗ ಇದೊಂದು ಪವಿತ್ರ ವಿದ್ಯಾಕ್ಷೇತ್ರ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಬೀಳೂರು ಗುರುಬಸವ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಸ್ಥಾಪನೆಯಾದ ಬಿವಿವಿ ಸಂಘವು ಕ್ರಿಯಾಶೀಲ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠರ ಅವಿರತ ಶ್ರಮದಿಂದ ಈ ಭಾಗದ ಶಿಕ್ಷಣ ಹಾಗೂ ಆರೋಗ್ಯ ರಂಗದಲ್ಲಿ ಗುರುತರ ಸೇವೆ ಸಲ್ಲಿಸುತ್ತಾ ಬಂದಿದೆ. ಕೇವಲ ಒಂದು ಸಂಸ್ಕೃತ ಪಾಠಶಾಲೆಯಿಂದ ಪ್ರಾರಂಭವಾದ ಸಂಘ ಇಂದು 180 ಸಂಸ್ಥೆಗಳನ್ನು ಹೊಂದಿದೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ. 2017ರಲ್ಲಿ ಪ್ರಾರಂಭವಾದ ಹೋಮಿಯೋಪಥಿ ಮೆಡಿಕಲ್ ಕಾಲೇಜು ಇಂದು ರಾಷ್ಟ್ರದ ಹೋಮಿಯೋಪಥಿ ವೈದ್ಯಕೀಯ ಶಿಕ್ಷಣದಲ್ಲಿ ಮುಂಚೂಣಿಯಲ್ಲಿ ಇದೆ. ಇದಕ್ಕೆ ಆಡಳಿತ ಮಂಡಳಿ, ಸಿಬ್ಬಂದಿ ಕೊಡುಗೆ ಅಪಾರ. ಸಂಸ್ಥೆಯಲ್ಲಿ ಅಭ್ಯಸಿಸಿ ಪದವಿ ಪಡೆದ ತಾವುಗಳೆಲ್ಲ ಸಂಘದ ಮೂಲ ಮಂತ್ರ ಸೇವೆ- ಸಮರ್ಪಣೆ- ಸಹಾನುಭೂತಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಪ್ರಾಚಾರ್ಯ ಡಾ. ಅರುಣ ಹೂಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ. ಡಾ. ನೀತಾ ಪಾಟೀಲ, ಡಾ. ನುಶ್ರತ ಜಮಾದಾರ, ಡಾ. ರವಿ ಕೋಟೆಣ್ಣವರ, ಡಾ. ವಿಜಯಲಕ್ಷ್ಮೀ ಪಾಟೀಲ, ಡಾ. ತೃಪ್ತಿ ಶಿಂದೆ, ಡಾ. ಜಯಲಕ್ಷ್ಮೀ ಪಾಟೀಲ, ಡಾ. ಸಮೀನಾ ಇದ್ದರು.
ಸಂಸ್ಥೆ ಪ್ರಥಮ ಪದವೀಧರರಾದ ಡಾ. ಚೇತನ ಸಜ್ಜನ ಹಾಗೂ ಡಾ. ದಕ್ಷತಾ ಹೊರಟ್ಟಿ ಜ್ಞಾನ ದಾಸೋಹ ಮಾಡಿದ ಮಹಾವಿದ್ಯಾಲಯದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪ್ರಥಮ ಬ್ಯಾಚಿನ 56 ಬಿಎಚ್‌ಎಂಎಸ್ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net