ಹಿಪ್ಪರಗಿ ಬ್ಯಾರೇಜ್ ದುರಸ್ತಿ ಕಾರ್ಯ ಪೂರ್ಣ

 ರಬಕವಿ ಬನಹಟ್ಟಿ ಸಮೀಪದ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ. 22ರಲ್ಲಿ ನೀರು ಸೋರಿಕೆಯನ್ನು ಶನಿವಾರ ಸಂಜೆ ಹೊತ್ತಿಗೆ ಸಂಪೂರ್ಣ ದುರಸ್ತಿ ಮಾಡಿರುವುದು.
ರಬಕವಿ ಬನಹಟ್ಟಿ ಸಮೀಪದ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ. 22ರಲ್ಲಿ ನೀರು ಸೋರಿಕೆಯನ್ನು ಶನಿವಾರ ಸಂಜೆ ಹೊತ್ತಿಗೆ ಸಂಪೂರ್ಣ ದುರಸ್ತಿ ಮಾಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಗುಜರಾತ್-ಶಿವಮೊಗ್ಗ ತಾಂತ್ರಿಕ ವರ್ಗದಿಂದ ಕ್ರಮ
  • 3 ಟಿಎಂಸಿ ನೀರು ಸೋರಿಕೆ
  • ಹಿಪ್ಪರಗಿ ಬ್ಯಾರೇಜ್ ನೀರನ್ನೇ ನಂಬಿದ ಲಕ್ಷಾಂತರ ರೈತರು ಬೆಳೆ ಬೆಳೆದಿದ್ದಾರೆ
ರಬಕವಿ/ಬನಹಟ್ಟಿ : ಕಳೆದ ಹದಿಮೂರು ದಿನಗಳ ನಂತರ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ. 22ರಲ್ಲಿನ ಪ್ಲೇಟ್ (ಪೆನಲ್) ನಲ್ಲಿನ ನೀರು ಸೋರಿಕೆಯ ದುರಸ್ತಿ ಕಾರ್ಯವನ್ನು ಶನಿವಾರ ಸಂಜೆ ಪೂರ್ಣಗೊಳಿಸಲಾಗಿದೆ.
ಗುಜರಾತ್ ಹಾಗೂ ಶಿವಮೊಗ್ಗದಿಂದ ಬಂದಿದ್ದ ತಾಂತ್ರಿಕ ವರ್ಗ ಹಾಗೂ ಅನುಭವಿ ಈಜುಗಾರರ ತಂಡದಿಂದ ಶತಾಯಗತಾಯ ಪ್ರಯತ್ನದಿಂದ ತಾತ್ಕಾಲಿಕ ದುರಸ್ತಿ ಕಾರ್ಯ ಮಾಡಲಾಗಿದೆ. ಕಳೆದ 13 ದಿನಗಳಲ್ಲಿ ಹಿಪ್ಪರಗಿ ಬ್ಯಾರೇಜ್‌ನಲ್ಲಿನ ಅರ್ಧದಷ್ಟು ನೀರು ಸುಮಾರು 3 ಟಿಎಂಸಿಯಷ್ಟು ಭಾರಿ ಪ್ರಮಾಣದಲ್ಲಿ ನೀರು ಸೋರಿಕೆಯಾಗಿದೆ.
ಹಿಪ್ಪರಗಿ ಬ್ಯಾರೇಜ್ ನೀರನ್ನೇ ನಂಬಿದ ಲಕ್ಷಾಂತರ ರೈತರು ಬೆಳೆ ಬೆಳೆದಿದ್ದಾರೆ. ಇದೀಗ ಆ ಬೆಳೆಗೆ ನೀರಿನ ಅಭಾವ ಎದುರಾಗಲಿದ್ದು, ಶೀಘ್ರವೇ ಹಿಪ್ಪರಗಿ ಬ್ಯಾರೇಜ್‌ನಲ್ಲಿ ನೀರು ತುಂಬಿಸುವ ಅನಿವಾರ್ಯತೆ ಇದೆ. ಕುಡಚಿ, ಅಥಣಿ ತಾಲೂಕಿನ ಅನೇಕ ಗ್ರಾಮಗಳ ರೈತರ ಹೊಲಗದ್ದೆಗಳಲ್ಲಿ ಈಗ ಕುಳೆ ಕಬ್ಬು ಬೆಳೆಯುತ್ತಿದೆ. ಆದರೆ ಬೇಸಿಗೆ ಸಂದರ್ಭದಲ್ಲಿ ರೈತರ ಜಮೀನಿಗೆ ನೀರು ಕೊರತೆ ಬೀಳಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net