ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕಲಾವಿದರಾದ ರಕ್ಷಿತ್ ಕುಲಕರ್ಣಿ, ವಿನಾಯಕ ಇನಾಮದಾರ ಮತ್ತು ಶ್ರೇಯಶ್ರೀ ಇನಾಮದಾರರಿಂದ ಶಾಸ್ತ್ರೀಯ ಸಂಗೀತ, ಭಾವಗೀತೆ, ಭಕ್ತಿಗೀತೆ ಹಾಗೂ ವಚನ ಗಾಯನ ನಡೆಯಲಿದೆ. ತಬಲಾ ವಾದನಕ್ಕೆ ವಿನಯ ಕುಲಕರ್ಣಿ ಮತ್ತು ಹಾರ್ಮೋನಿಯಂ ವಾದನಕ್ಕೆ ತ್ರಿಗುಣ ಪೂಜಾರಿ ಭಾಗವಹಿಸಲಿದ್ದಾರೆ.