ಇಳಕಲ್ಲದ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ರಡ್ಡಿ ಸಮಾಜದ ಮುಖಂಡರಾದ ಎಂ.ಆರ್. ಪಾಟೀಲ, ಪ್ರಶಾಂತ ಪಾಟೀಲ ಚಂದ್ರಶೇಖರ ಮಾಕಾಪೂರ, ಡಾ. ಸಿದ್ದನಗೌಡ ಪಾಟೀಲ, ವಿಜಯಕುಮಾರ ಗೌಡರ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಎಂ.ಆರ್. ಪಾಟೀಲ ಅಭಿಮತ
ಹೇಮರಡ್ಡಿ ಮಲ್ಲಮ್ಮ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ
ಸಹನೆ, ಭಕ್ತಿ, ಸ್ತ್ರೀ ಶಕ್ತಿಯ ಪ್ರತೀಕ
ಇಳಕಲ್ಲ : ಹೇಮರಡ್ಡಿ ಮಲ್ಲಮ್ಮ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಅವರು ಸಹನೆ, ಭಕ್ತಿ, ಸ್ತ್ರೀ ಶಕ್ತಿಯ ಪ್ರತೀಕ ಎಂದು ಎಂ.ಆರ್. ಪಾಟೀಲ ಹೇಳಿದರು.
ಇಲ್ಲಿನ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿ, ಮಲ್ಲಮ್ಮ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಜಯಿಸಿ ಶ್ರೀಶೈಲ ಮಲ್ಲಿಕಾರ್ಜುನನ ಮೇಲಿನ ಅಪಾರ ಭಕ್ತಿಯಿಂದ ಸಮಾಜಕ್ಕೆ ಆದರ್ಶ ಮಾರ್ಗ ತೋರಿದ್ದಾರೆ ಎಂದು ಹೇಳಿದರು.
ರಡ್ಡಿ ಸಮಾಜದ ಮುಖಂಡ ಪ್ರಶಾಂತ ಪಾಟೀಲ ಮಾತನಾಡಿ, ಮಲ್ಲಮ್ಮನವರ ತತ್ವಗಳು ಹಾಗೂ ಸನ್ಮಾರ್ಗಗಳನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ರೆಡ್ಡಿ ಸಮಾಜದ ಮುಖಂಡರಾದ ಚಂದ್ರಶೇಖರ ಮಾಕಾಪೂರ, ಡಾ. ಸಿದ್ದನಗೌಡ ಪಾಟೀಲ, ವಿಜಯಕುಮಾರ ಗೌಡರ, ಹನಮಂತ ಗೌಡರ, ಮಲ್ಲು ಗೌಡರ, ವಿಜಯ ಗೌಡರ, ಮಹಾಂತೇಶ ಗೌಡರ, ಶರಣು ತೊಣಸ್ಯಾಳ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮಹಾಂತೇಶ ಕಲ್ಮಠ ಸೇರಿ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.