ಇನ್ನು ಮುಧೋಳ ತಾಲೂಕಿನಲ್ಲೂ ಸಹ ಮಳೆ ಹಾನಿ ಸಂಭವಿಸಿರುವ ವರದಿಯಾಗಿದ್ದು, 11 ಮನೆಗಳ ಪತ್ರಾಸ್, 1 ಮನೆಗೆ ಹಾನಿಯಾಗಿದೆ. ತಾಲೂಕಿನಲ್ಲಿ 13.43 ಹೆಕ್ಟರ್ ತೋಟಗಾರಿಕೆ ಮತ್ತು 1.40 ಹೆಕ್ಟರ್ ಕೃಷಿ ಸೇರಿ ಒಟ್ಟು 14.83 ಹೆಕ್ಟರ್ ಪ್ರದೇಶದ ತೋಟಗಾರಿಕೆ ಮತ್ತು ಕೃಷಿ ಬೆಳೆಗಳು ಹಾನಿಯಾಗಿವೆ. ಜೊತೆಗೆ ತಾಲೂಕಿನ ಲೋಕಾಪುರ ಪಟ್ಟಣದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಲ್ಲಿನ ಪೊಲೀಸ್ ಠಾಣೆಗೆ ಮಳೆ ನೀರು ನುಗ್ಗಿದ್ದು, ಇಡೀ ರಾತ್ರಿ ಠಾಣಾ ಸಿಬ್ಬಂದಿ ನೀರು ಹೊರಹಾಕಲು ಹರಸಾಹಸ ಪಡುವಂತಾಯಿತು. ಇದರ ಜೊತೆಗೆ ಬಾಗಲಕೋಟೆ, ಬಾದಾಮಿ ತಾಲೂಕುಗಳಲ್ಲಿ ಸಹ ಮಳೆ, ಗಾಳಿ ಅಬ್ಬರ ಆಗಿದ್ದು, ಅಲ್ಲಿ ಏನೆಲ್ಲ ಹಾನಿಯಾಗಿದೆ ಎನ್ನುವ ವರದಿ ಬರಬೇಕಿದೆ. ಜಿಲ್ಲಾದ್ಯಂತ ಮಳೆ, ಗಾಳಿಗೆ ಸಾಕಷ್ಟು ಗಿಡಮರಗಳು, ವಿದ್ಯುತ್ ಕಂಬಗಳು ಉರಳು ಬಿದ್ದಿವೆ.