ಟೀಕಿನಮಠದ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಒಂದು ತಿಂಗಳ ಕಾಲ ನಡೆದ ಚರಪಟ್ಟಾಧಿಕಾರ ಮಹೋತ್ಸವವು ಬಾಗಲಕೋಟೆ ನಗರಕ್ಕೆ ವಿಶೇಷ ಸಾಂಸ್ಕೃತಿಕ ಕಳೆ ತಂದಿದ್ದು, ಮಠಗಳ ಬೆಳವಣಿಗೆಯಲ್ಲಿ ಭಕ್ತರ ಪಾತ್ರವೂ ಸ್ವಾಮಿಗಳಷ್ಟೆ ಮಹತ್ವದ್ದಾಗಿದೆ. ಅನ್ನ ಹಾಗೂ ಜ್ಞಾನ ದಾಸೋಹದ ಕೀರ್ತಿ ಬಾಗಲಕೋಟೆ ಜನತೆಗೆ ಸಲ್ಲುತ್ತದೆ ಎಂದರು.