ಪರಿಶ್ರಮವೇ ಭವಿಷ್ಯದ ಬುನಾದಿ

ಮುಧೋಳ ತಾಲೂಕಿನ ಆಲಗುಂಡಿ ಬಿ.ಕೆ.ಗ್ರಾಮದ ಶ್ರೀ ಮಾರುತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಗುರುಪಾದ ಮಹಾಸ್ವಾಮಿಗಳು ಉದ್ಘಾಟಿಸಿದರು. ಎಚ್.ಬಿ. ಪಾಟೀಲ್, ವೈ.ಎಂ. ಪಮ್ಮಾರ್ ಎಸ್.ವಿ.ಹಿರೇಮಠ ಇತರರಿದ್ದರು.
ಮುಧೋಳ ತಾಲೂಕಿನ ಆಲಗುಂಡಿ ಬಿ.ಕೆ.ಗ್ರಾಮದ ಶ್ರೀ ಮಾರುತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಗುರುಪಾದ ಮಹಾಸ್ವಾಮಿಗಳು ಉದ್ಘಾಟಿಸಿದರು. ಎಚ್.ಬಿ. ಪಾಟೀಲ್, ವೈ.ಎಂ. ಪಮ್ಮಾರ್ ಎಸ್.ವಿ.ಹಿರೇಮಠ ಇತರರಿದ್ದರು.
Published on
ವಿದ್ಯಾರ್ಥಿ ಜೀವನವು ಬಂಗಾರದಂತಹ ಅವಕಾಶ. ಇಲ್ಲಿ ನಾವು ಹಾಕುವ ಶ್ರಮವೇ ನಮ್ಮ ಭವಿಷ್ಯದ ಬುನಾದಿ. ಶಿಸ್ತು ಮತ್ತು ಗುರಿಯಿದ್ದಾಗ ಮಾತ್ರ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಆಲಗುಂಡಿ ಬಿ.ಕೆ.ಅಡವಿ ಸಿದ್ಧೇಶ್ವರ ಮಠದ ಗುರುಪಾದ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಆಲಗುಂಡಿ ಬಿ.ಕೆ. ಗ್ರಾಮದ ಶ್ರೀ ಮಾರುತಿ ವಿದ್ಯಾವರ್ಧಕ ಸಂಸ್ಥೆಯ ಶ್ರೀ ಮಾರುತಿ ಪ್ರೌಢ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಂಸ್ಥೆ ಅಧ್ಯಕ್ಷ ಎಚ್.ಬಿ. ಪಾಟೀಲ್ ಮಾತನಾಡಿ, ಕೇವಲ ಅಂಕಗಳಿಕೆಯಷ್ಟೇ ಶಿಕ್ಷಣವಲ್ಲ. ಬದುಕಿಗೆ ಬೇಕಾದ ಸಂಸ್ಕಾರವನ್ನೂ ಕಲಿಯಬೇಕು. ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮದಿಂದ ಎದುರಿಸಿ ಎಂದು ಕಿವಿಮಾತು ಹೇಳಿದರು.
ವೈ.ಎಂ. ಪಮ್ಮಾರ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ಕೌಶಲಗಳನ್ನೂ ಮೈಗೂಡಿಸಿಕೊಳ್ಳಬೇಕು ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ಶೈಕ್ಷಣಿಕವಾಗಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ, ಬಹುಮಾನ ವಿತರಿಸಲಾಯಿತು.
ಉಪಾಧ್ಯಕ್ಷ ಟಿ.ವಿ. ಗಲ್ಬಿ, ಕಾರ್ಯದರ್ಶಿ ಈರಣ್ಣ ಖೋತ ಹಾಗೂ ಸಿಆರ್‌ಪಿ ಸುರೇಶ ಹಲಗಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮುಖ್ಯೋಪಾಧ್ಯಾಯ ಎಸ್.ವಿ. ಹಿರೇಮಠ ಸ್ವಾಗತಿಸಿದರು. ಶಿಕ್ಷಕ ಎಲ್.ಎಚ್. ಕಜ್ಜಿದೋಣಿ ನಿರೂಪಿಸಿ. ಕೊನೆಯಲ್ಲಿ ಬಿ.ವಿ. ಮೆಳ್ಳಿಗೇರಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net