ಸಮನ್ವಯತೆಯಿಂದ ಜವಾಬ್ದಾರಿ ನಿಭಾಯಿಸಿ

ಮುಧೋಳ ತಾಲೂಕಾಡಳಿತ ಕಚೇರಿಯಲ್ಲಿ ನಡೆದ ವಿಪತ್ತು ನಿರ್ವಹಣಾ ಸಭೆಯಲ್ಲಿ ಡಾ.ಚಿಕ್ಕಪ್ಪನಾಯಕ ಮಾತನಾಡಿದರು. ತಾಪಂ ಇಒ ಮಲ್ಲಿಕಾರ್ಜುನ ಅಂಬಿಗೇರ, ರಮೇಶ ನಿಡೋಣಿ, ಡಾ.ಬಿ.ವಿ.ಪಾಟೀಲ, ಡಾ.ಗೋವಿಂದ ರಾಠೋಡ, ರಾಘವೇಂದ್ರ ಕಳ್ಳಿಮನಿ ಇತರರಿದ್ದರು.
ಮುಧೋಳ ತಾಲೂಕಾಡಳಿತ ಕಚೇರಿಯಲ್ಲಿ ನಡೆದ ವಿಪತ್ತು ನಿರ್ವಹಣಾ ಸಭೆಯಲ್ಲಿ ಡಾ.ಚಿಕ್ಕಪ್ಪನಾಯಕ ಮಾತನಾಡಿದರು. ತಾಪಂ ಇಒ ಮಲ್ಲಿಕಾರ್ಜುನ ಅಂಬಿಗೇರ, ರಮೇಶ ನಿಡೋಣಿ, ಡಾ.ಬಿ.ವಿ.ಪಾಟೀಲ, ಡಾ.ಗೋವಿಂದ ರಾಠೋಡ, ರಾಘವೇಂದ್ರ ಕಳ್ಳಿಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಡಾ.ಚಿಕ್ಕಪ್ಪನಾಯಕ ಸೂಚನೆ
  • ತಾಲೂಕು ಮಟ್ಟದ ವಿಪತ್ತು ನಿರ್ವಹಣೆ ಸಭೆ
ಮುಧೋಳ: ಮಳೆಗಾಲ ಆರಂಭಗೊಳ್ಳುತ್ತಿದ್ದು, ಅಧಿಕಾರಿಗಳು ಮುಂಜಾಗ್ರತೆ ಕ್ರಮ ವಹಿಸಿ ಎಂದು ತಹಸೀಲ್ದಾರ್ ಡಾ.ಚಿಕ್ಕಪ್ಪನಾಯಕ ಸೂಚನೆ ನೀಡಿದರು.]
ನಗರದ ತಾಲೂಕಾಡಳಿತ ಕಚೇರಿಯಲ್ಲಿ ತಾಲೂಕು ಮಟ್ಟದ ವಿಪತ್ತು ನಿರ್ವಹಣೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆ-ಕಾಲೇಜ್, ಅಂಗನವಾಡಿ ಕೇಂದ್ರಗಳು ಆರಂಭವಾಗುತ್ತಿದ್ದು, ಶಿಥಿಲಾವಸ್ಥೆಯ ಕಟ್ಟಡಗಳ ಕುರಿತು ಎಚ್ಚರ ವಹಿಸಬೇಕು. ಜನ-ಜಾನುವಾರುವಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಕ್ವಾರಿಗಳಲ್ಲಿ ಅಪಘಾತಗಳಾಗುತ್ತಿದ್ದು, ಅವುಗಳಿಗೆ ನೋಟಿಸ್ ಜಾರಿ ಮಾಡಬೇಕು. ಎಲ್ಲರೂ ಸಮನ್ವಯತೆಯಿಂದ ಜವಾಬ್ದಾರಿ ನಿಭಾಯಿಸಬೇಕು. ಗ್ರಾಪಂ ಮಟ್ಟದಲ್ಲಿ ಪಿಡಿಒ, ಗ್ರಾಮ ಆಡಳಿತಾಧಿಕಾರಿ, ಆಶಾ, ಆರೋಗ್ಯ ಇಲಾಖೆ, ಶಿಕ್ಷಕರು ಜಾಗೃತಿ ವಹಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಕ್ರಮ ಅನಿವಾರ್ಯ ಎಂದರು.
ತಾಪಂ ಇಒ ಮಲ್ಲಿಕಾರ್ಜುನ ಅಂಬಿಗೇರ, ರಮೇಶ ನಿಡೋಣಿ, ಡಾ.ಬಿ.ವಿ.ಪಾಟೀಲ, ಡಾ.ಗೋವಿಂದ ರಾಠೋಡ, ರಾಘವೇಂದ್ರ ಕಳ್ಳಿಮನಿ, ಎಚ್.ಬಿ.ಪಾಟೀಲ, ಎಚ್.ಎ.ಡೋಣಿ, ಎಸ್.ಜಿ.ಕುರಣಿ, ಪೌರಾಯುಕ್ತ ಗೋಪಾಲ ಕಾಸೆ, ಶಶಿ ಬಿಳ್ಳೂರ ಹಾಗೂ ಪಿಡಿಒಗಳು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net