ಭಕ್ತರ ದುಶ್ಚಟ ಬೇಡಿದ ಗುರುಮಹಾಂತ ಶ್ರೀಗಳು

ಇಳಕಲ್ಲ ತಾಲೂಕಿನ ಚಿಕ್ಕಕೊಡಗಲಿ ಗ್ರಾಮದಲ್ಲಿ ಗುರುಮಹಾಂತ ಶ್ರೀಗಳು ಹೆಗಲಿಗೆ ಮಹಾಂತ ಜೋಳಿಗೆ ಹಾಕಿಕೊಂಡು ಭಕ್ತರ ದುಶ್ಚಟಗಳನ್ನು ಬೇಡಿದರು. ಶಿರೂರಿನ ಡಾ. ಬಸವಲಿಂಗ ಶ್ರೀಗಳು ಇದ್ದರು.
ಇಳಕಲ್ಲ ತಾಲೂಕಿನ ಚಿಕ್ಕಕೊಡಗಲಿ ಗ್ರಾಮದಲ್ಲಿ ಗುರುಮಹಾಂತ ಶ್ರೀಗಳು ಹೆಗಲಿಗೆ ಮಹಾಂತ ಜೋಳಿಗೆ ಹಾಕಿಕೊಂಡು ಭಕ್ತರ ದುಶ್ಚಟಗಳನ್ನು ಬೇಡಿದರು. ಶಿರೂರಿನ ಡಾ. ಬಸವಲಿಂಗ ಶ್ರೀಗಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಿಕ್ಕ ಕೊಡಗಲಿ ಗ್ರಾಮದಲ್ಲಿ ಸಂಚಾರ
  • ಆರೋಗ್ಯಯುತ ಬದುಕು ಕಟ್ಟಿಕೊಳ್ಳಿ
ಇಳಕಲ್ಲ: ಮಹಾಂತ ಜೋಳಿಗೆಯ ಶಿವಶಿಲ್ಪಿ ಡಾ. ಮಹಾಂತ ಶ್ರೀಗಳ 8ನೇ ಪುಣ್ಯಸ್ಮರಣೆ ಅಂಗವಾಗಿ ತಾಲೂಕಿನ ಚಿಕ್ಕ ಕೊಡಗಲಿ ಗ್ರಾಮದಲ್ಲಿ ಗುರುಮಹಾಂತ ಶ್ರೀಗಳು ಮಹಾಂತ ಜೋಳಿಗೆ ಹಾಕಿಕೊಂಡು ಭಕ್ತರ ದುಶ್ಚಟಗಳನ್ನು ಬೇಡಿದರು.
ಚಿಕ್ಕಕೊಡಗಲಿ ಗ್ರಾಮದಲ್ಲಿ ಭಾನುವಾರ ಮಹಾಂತ ಜೋಳಿಗೆಯೊಂದಿಗೆ ಶ್ರೀಗಳು ಸಂಚಾರ ನಡೆಸಿ ಮನೆ, ಮನೆಗೆ ತೆರಳಿ ಭಕ್ತರಿಗೆ ದುಶ್ಚಟಗಳನ್ನು ತ್ಯಜಿಸಲು ಸಲಹೆ ನೀಡಿದರು. ಅಲ್ಲದೇ ಕೆಲ ಯುವಕರು ಸ್ವ ಇಚ್ಛೆಯಿಂದ ದುಶ್ಚಟ ಬಿಡುವುದಾಗಿ ಹೇಳಿ ಮಹಾಂತ ಜೋಳಿಗೆ ಮೇಲೆ ಪ್ರಮಾಣ ಮಾಡಿ ದುಶ್ಚಟಗಳನ್ನು ಜೋಳಿಗೆಗೆ ಹಾಕಿದರು.
ಯುವಕರು ಸೇರಿ ಎಲ್ಲರೂ ಆರೋಗ್ಯಯುತ ಬದುಕು ಸಾಗಿಸಬೇಕು ಎಂದು ಗುರುಮಹಾಂತ ಶ್ರೀಗಳು ಮನವಿ ಮಾಡಿದರು. ಈ ಸಮಯದಲ್ಲಿ ಶಿರೂರಿನ ಡಾ. ಬಸವಲಿಂಗಶ್ರೀಗಳು, ವಿಜಯ ಮಹಾಂತೇಶ ತರುಣ ಸಂಘದ ಪದಾಽಕಾರಿಗಳು, ಅಕ್ಕನ ಬಳಗದ ಪದಾಽಕಾರಿಗಳು ಹಾಗೂ ಗ್ರಾಮದ ಹಿರಿಯರು, ಯುವಕರು ಭಕ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net