ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿ ವತಿಯಿಂದ ಮಂಗಳವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಗಂಗಾಧರ ಮೇಟಿ, ನಿಂಗಪ್ಪ ಬಾಳಿಕಾಯಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸರ್ಕಾರಕ್ಕೆ ಒತ್ತಾಯ
ಮಹಾಲಿಂಗಪುರ ಪಟ್ಟಣವನ್ನು ತಕ್ಷಣ ತಾಲೂಕು ಎಂದು ಘೋಷಿಸಿ
ನಾಲ್ಕು ವರ್ಷಗಳಿಂದ ಶಾಂತಿಯುತವಾಗಿ ನಡೆಯುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದೆ
ಮಹಾಲಿಂಗಪುರ : ತಾಲೂಕು ರಚನೆಗೆ ಅಗತ್ಯವಿರುವ ಎಲ್ಲ ಅರ್ಹತೆಗಳನ್ನು ಹೊಂದಿರುವ ಮಹಾಲಿಂಗಪುರ ಪಟ್ಟಣವನ್ನು ತಕ್ಷಣ ತಾಲೂಕು ಎಂದು ಘೋಷಿಸಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದ ತಾಲೂಕು ಹೋರಾಟ ವೇದಿಕೆಗೆ ಇತ್ತೀಚೆಗೆ ಭೇಟಿ ನೀಡಿ ಹೋರಾಟಗಾರರೊಂದಿಗೆ ಚರ್ಚಿಸಿದ ಬಳಿಕ ಅವರು ಮಾತನಾಡಿ, ನಾಲ್ಕು ವರ್ಷಗಳಿಂದ ಶಾಂತಿಯುತವಾಗಿ ನಡೆಯುತ್ತಿರುವ ಹೋರಾಟ ನ್ಯಾಯಸಮ್ಮತ ವಾಗಿದೆ. ಸರ್ಕಾರ ತಡಮಾಡದೆ ಕ್ರಮ ಕೈಗೊಂಡು ಮಹಾಲಿಂಗಪುರವನ್ನು ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಹೇಳಿದರು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಹೋರಾಟಗಾರರಾದ ಗಂಗಾಧರ ಮೇಟಿ ಮತ್ತು ಶಿವಲಿಂಗ ಟಿರಕಿ ಮಾತನಾಡಿ, ಮಹಾಲಿಂಗಪುರವನ್ನು ತಾಲೂಕು ಮಾಡಲು ಸಂಬಂಧಿಸಿದಂತೆ ಕಂದಾಯ ಸಚಿವರಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿದರು. ಮಹಾಲಿಂಗಪುರ ಮುಂಚೆ ಮುಧೋಳ ತಾಲೂಕಿನಲ್ಲಿದ್ದು, ಆ ತಾಲೂಕು ಯಾವುದೇ ವಿಭಜನೆ ಕಂಡಿಲ್ಲ. ಆದ್ದರಿಂದ ತಾಲೂಕು ರಚನೆಗೆ ಅಡ್ಡಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಹಾಗೂ ಜನಪ್ರತಿನಿಧಿಗಳು ನಿಜಾಂಶವನ್ನು ಮನಗಂಡು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ಸಮಿತಿಯ ನಿಯೋಗವು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ಎಚ್ಚರಿಸಿದರು.
ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ನಿಂಗಪ್ಪ ಬಾಳಿಕಾಯಿ, ಹನಮಂತ ಜಮಾದಾರ, ವಿರೇಶ ಆಸಂಗಿ, ರಫಿಕ್ ಮಾಲದಾರ, ರಾಜೇಂದ್ರ ಮಿರ್ಜಿ, ಮಹಾಲಿಂಗಪ್ಪ ಅವರಾದಿ, ಈಶ್ವರ ಮುರಗೋಡ, ಸಿದ್ದು ಶಿರೋಳ ಮುಂತಾದವರು ಇದ್ದರು.