ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಅದ್ದೂರಿ

ಬಾಗಲಕೋಟೆ ನಗರದಲ್ಲಿ ಭಾನುವಾರ ಶಹರ ಗಜಾನನ ಉತ್ಸವ ಮಂಡಳಿಯ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಬಾಗಲಕೋಟೆ ನಗರದಲ್ಲಿ ಭಾನುವಾರ ಶಹರ ಗಜಾನನ ಉತ್ಸವ ಮಂಡಳಿಯ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
Published on

ಬಾಗಲಕೋಟೆ: ಗಣೇಶ ಉತ್ಸವ ಅಂಗವಾಗಿ ಶಹರ ಗಜಾನನ ಮಂಡಳಿಯು ಸ್ಥಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆ ಮರವಣಿಗೆ ಏಳನೇ ದಿನವಾದ ಭಾನುವಾರ ಸಂಜೆ ಅದ್ದೂರಿಯಾಗಿ ಜರುಗಿತು.

ಸಂಜೆ 6 ಗಂಟೆಗೆ ವಲ್ಲಭಾಯಿ ಚೌಕ್‌ನಿಂದ ಆರಂಭವಾದ ಭವ್ಯ ಮೆರವಣಿಗೆ ಹಳೇ ಪೋಸ್ಟ್ ಆಫೀಸ್, ಕಿಲ್ಲಾ ಕೊತ್ತಲೇಶ ದೇವಸ್ಥಾನ, ಪಂಕಾ ಮಸೀದಿ, ಪೊಲೀಸ್ ಚೌಕ್, ಅಡತ ಬಜಾರ್, ಎಂ.ಜಿ.ರಸ್ತೆ, ಬಸವೇಶ್ವರ ವೃತ್ತ, ಕಾಲೇಜು ರಸ್ತೆ ಮೂಲಕ ಬೃಹತ್ ಮೆರವಣಿಗೆ ನಡೆಸಿತು. ಝಾಂಜ್ ಪತಾಕ್, ಡೋಲ್ ತಾಶ್ ಸೇರಿ ವಿವಿಧ ಕಲಾ ತಂಡಗಳು ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದವು. ಯುವಕರು ಭರ್ಜರಿ ಹೆಜ್ಜೆ ಹಾಕಿದರು. ರಸ್ತೆಯ ಇಕ್ಕೆಲಗಳಲ್ಲಿ ಮೆರವಣಿಗೆ ನೋಡಲು ಸಾರ್ವಜನಿಕರು ನೆರೆದಿದ್ದರು.

ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಶಹರ ಗಜಾನನ ಮಂಡಳಿಯು ಈ ಸಾರಿ ವಿಶೇಷ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನೂರಕ್ಕೂ ಹೆಚ್ಚು ಬಡ ಮಕ್ಕಳಿಗೆ ಸೈಕಲ್ ವಿತರಣೆ, ಮೂರು ದಿನ ಗಣಹೋಮ, ಐದು ದಿನಗಳ ಕಾಲ ಮಹಾಪ್ರಸಾದ ವಿತರಣೆ ಮಾಡುವ ಮೂಲಕ ಗಣೇಶ ಉತ್ಸವಕ್ಕೆ ಮಂಗಳ

ಹಾಡಲಾಯಿತು.

ಚರಂತಿಮಠ ಫೌಂಡೇಶನ್‌ವತಿಯಿಂದ ಅನ್ನ ಸಂತರ್ಪಣೆ

ಬಾಗಲಕೋಟೆ: ಶಹರ ಗಜಾನನ ಉತ್ಸವ ಮಂಡಳಿ ಪ್ರತಿಷ್ಠಾಪಿಸಿದ್ದ ಗಣೇಶ ಉತ್ಸವದಲ್ಲಿ ದಿ.ಚಂದ್ರಶೇಖರಯ್ಯ ವಿ. ಚರಂತಿಮಠ ಸ್ಮರಣಾರ್ಥ ಚರಂತಿಮಠದ ವಸ್ತ್ರದ ಫೌಂಡೇಶನ್ ವತಿಯಿಂದ ಭಾನುವಾರ ಅನ್ನ ಸಂತರ್ಪಣೆ ಜರುಗಿತು. ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಚರಂತಿಮಠ ಮಾತನಾಡಿ, ಗಣೇಶ ಉತ್ಸವ ನಮ್ಮ ನಾಡಿನ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸುತ್ತದೆ. ಉತ್ಸವ ಸಂದರ್ಭದಲ್ಲಿ ಸಾಮಾಜಿಕ, ಧಾರ್ಮಿಕ ಸೇವೆ ಮಾಡುತ್ತಿರುವ ಶಹರ ಗಜಾನನ ಮಂಡಳಿಯ ಕಾರ್ಯ ಮಾದರಿ ಯಾಗಿದೆ. ಈ ಮಂಡಳಿಯು ಶತ ಶತಮಾನೋತ್ಸವ ಆಚರಿಸಲಿ ಎಂದು ಹೇಳಿದರು. ಸಮಿತಿ ಅಧ್ಯಕ್ಷ ದಿನೇಶ ಬಾರ್ಸಿ, ಅಶೋಕ ಲಿಂಬಾವಳಿ, ನಾಗರಾಜ ಹದ್ಲಿ, ನಾರಾಯಣ ದೇಸಾಯಿ, ವಿಜಯ ಸುಲಾಖೆ, ಶಿವಕುಮಾರ ಮೇಲ್ನಾಡ, ಸಂಜೀವ ವಾಡ್ಕರ, ಗುರು ಅನಗವಾಡಿ, ಮೃತ್ಯುಂಜಯ ಬಳೂಲಮಠ, ಬಸವರಾಜ ಪಾತ್ರೋಟ, ಶಶಿಕಾಂತ ಪಾಟೀಲ, ಕೆ.ಟಿ.ಶೆಟ್ಟರ, ರವಿ ಬಡಿಗೇರ, ಅಶೋಕ ಮಹೇಂದ್ರಕರ, ಪ್ರಭು ಇಂಡಿ, ಸೋಮು ಅಂಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net