ಉತ್ತಮ ಫಲಿತಾಂಶಕ್ಕೆ ಸಂಘಟಿತ ಪ್ರಯತ್ನವೇ ಕಾರಣ

ಮುಧೋಳ ಬಸವೇಶ್ವರ ಮಹಿಳಾ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಹಾಗೂ ಬಿಇಒ ಕಾರ್ಯಾಲಯದಿಂದ ನಡೆದ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಶೇ.100 ಪಡೆದ ಶಾಲಾ ಮುಖ್ಯ ಶಿಕ್ಷಕರನ್ನು ಬಿಇಒ ಸಮೀರ ಮುಲ್ಲಾ ಸನ್ಮಾನಿಸಿದರು. ಎಸ್.ಡಿ.ನೀಲಗುಂದ, ಅಡಿವೆಪ್ಪ ಛಬ್ಬಿ, ಶ್ರೀಶೈಲ್ ಕುರಣಿ ಇತರರಿದ್ದರು.
ಮುಧೋಳ ಬಸವೇಶ್ವರ ಮಹಿಳಾ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಹಾಗೂ ಬಿಇಒ ಕಾರ್ಯಾಲಯದಿಂದ ನಡೆದ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಶೇ.100 ಪಡೆದ ಶಾಲಾ ಮುಖ್ಯ ಶಿಕ್ಷಕರನ್ನು ಬಿಇಒ ಸಮೀರ ಮುಲ್ಲಾ ಸನ್ಮಾನಿಸಿದರು. ಎಸ್.ಡಿ.ನೀಲಗುಂದ, ಅಡಿವೆಪ್ಪ ಛಬ್ಬಿ, ಶ್ರೀಶೈಲ್ ಕುರಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಇಒ ಎಸ್. ಎಂ. ಮುಲ್ಲಾ ಅಭಿಮತ
  • ಮುಖ್ಯ ಶಿಕ್ಷಕರ ಸಭೆ, ಅಭಿನಂದನಾ ಕಾರ್ಯಕ್ರಮ
ಮುಧೋಳ: ತಾಲೂಕಿನ ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕೆ, ಶಿಕ್ಷಕರ ತ್ಯಾಗ, ವಿದ್ಯಾರ್ಥಿಗಳ ನಿರಂತರ ಶ್ರಮ ಮತ್ತು ಪಾಲಕರ ಸಂಘಟಿತ ಪ್ರಯತ್ನವೇ ಮೂಲ ಕಾರಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಮುಲ್ಲಾ ಅಭಿಪ್ರಾಯಪಟ್ಟರು.
ನಗರದ ಬಾಗಲಕೋಟೆ ಬಿವಿವಿ ಸಂಘದ ಬಸವೇಶ್ವರ ಮಹಿಳಾ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮುಖ್ಯೋಪಾಧ್ಯಾಯರ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪರೀಕ್ಷಾ ಪೂರ್ವ ಸಿದ್ಧತೆ, ನಿರಂತರ ಕಲಿಕಾ ಮೌಲ್ಯಮಾಪನ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ನಡೆಸಿದ ವಿಶೇಷ ತರಗತಿಗಳು ಈ ಬಾರಿ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಗಳಿಸಲು ಸಹಕಾರಿಯಾಗಿವೆ. ಅಧಿಕಾರಿಗಳ ಮತ್ತು ಶಿಕ್ಷಕರ ನಡುವಿನ ಸಮನ್ವಯತೆಯಿಂದಾಗಿ ಜಿಲ್ಲಾ ಮಟ್ಟದಲ್ಲಿ ಮುಧೋಳ ತಾಲೂಕು ಗಮನಾರ್ಹ ಸಾಧನೆ ಮಾಡಿದೆ ಎಂದರು.
ಬಿಆರ್‌ಸಿಒ ಅಡಿವೆಪ್ಪ ಛಬ್ಬಿ ಮಾತನಾಡಿ, ಶೈಕ್ಷಣಿಕ ಗುರಿ ತಲುಪುವಲ್ಲಿ ಶಿಕ್ಷಕರು ತೋರಿದ ಬದ್ಧತೆಯನ್ನು ಶ್ಲಾಘನೀಯ. ತಾಲೂಕು ಸಂಪನ್ಮೂಲ ಕೇಂದ್ರದ ಮೂಲಕ ಒದಗಿಸಲಾದ ಶೈಕ್ಷಣಿಕ ನೆರವು ಮತ್ತು ಮಾರ್ಗದರ್ಶನ ಶಿಕ್ಷಕರು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಐತಿಹಾಸಿಕ ಲಿತಾಂಶವು ಮುಂದಿನ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ಹೊಸ ಬದಲಾವಣೆ ತರಲು ಪ್ರೇರಣೆಯಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಸಂಗಮೇಶ ನೀಲಗುಂದ ಅವರು, ತಾಲೂಕಿನ ಲಿತಾಂಶ ಸುಧಾರಣೆಗಾಗಿ ಹಮ್ಮಿಕೊಂಡಿದ್ದ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಕುರಿತು ವಿವರಿಸಿದರು. ತಾಲೂಕಿನಾದ್ಯಂತ ಶೇ.100ರಷ್ಟು ಫಲಿತಾಂಶ ದಾಖಲಿಸಿದ 22 ಶಾಲೆಗಳ ಮುಖ್ಯೋಪಾಧ್ಯಾಯರನ್ನು ಇಲಾಖೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಮುಖ್ಯ ಶಿಕ್ಷಕರು ತಮ್ಮ ಅನಿಸಿಕೆ ಹಂಚಿಕೊಂಡು, ಇಲಾಖೆಯ ಸಮಯೋಚಿತ ಮಾರ್ಗದರ್ಶನ ಮತ್ತು ಸಹೋದ್ಯೋಗಿಗಳ ತಂಡದ ಕೆಲಸವೇ ಉತ್ತಮ ಫಲಿತಾಂಶದ ಗುಟ್ಟು ಎಂದು ಭಾವುಕರಾದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಶೈಲ್ ಕುರಣಿ, ಪ್ರಾಚಾರ್ಯ ಎಂ.ಎ.ಮೋರೆ ಮಾತನಾಡಿದರು.
ಹನಮಂತ ಅರಕೇರಿ, ಮುಖ್ಯೋಪಾಧ್ಯಾಯ ಎಸ್.ಎಸ್.ಕಟ್ಟಿಮನಿ, ವಿಜಯಲಕ್ಷ್ಮೀ ಹಸರಡ್ಡಿ, ಎನ್.ಎಂ.ಜಂಗಾಲಿ, ಡಾ.ವೆಂಕಟೇಶ ಗುಡೆಪ್ಪನವರ, ಮಂಜುನಾಥ ಬರಗಿ, ಚಂದ್ರಶೇಖರ ನಾಗವಂದ, ವಿ.ಆರ್.ಹಂಚನಾಳ ಸೇರಿ ಇತರರಿದ್ದರು.
"

ಈ ವರ್ಷ ತಾಲೂಕಿನಲ್ಲಿ ದಾಖಲಾದ ಶೇ.94.31ರಷ್ಟು ಫಲಿತಾಂಶವು ನಿಜಕ್ಕೂ ಹೆಮ್ಮೆ ತರುವಂತದ್ದು. ಸುಮಾರು 5,300 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ತಾಲೂಕಿನ 22 ಪ್ರೌಢಶಾಲೆಗಳ ನೂರಕ್ಕೆ ನೂರರಷ್ಟು ಸಾಧನೆಗೆ ಶಿಕ್ಷಕರ ನಿರಂತರ ಪರಿಶ್ರಮವೇ ಕಾರಣ. ನಿರಂತರ ಕಾರ್ಯಾಗಾರಗಳು ಹಾಗೂ ವಿಶೇಷ ಸಭೆಗಳು ನೀಡಿವೆ.

ಎಸ್.ಎಂ. ಮುಲ್ಲಾ, ಬಿಇಒ ಮುಧೋಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net