ಮುಧೋಳ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

 ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ವಿಜಯಪುರ- ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು. ಬಸವಂತ ಕಾಂಬಳೆ, ದುಂಡಪ್ಪ ಯರಗಟ್ಟಿ, ಮುತ್ತಪ್ಪ ಕೋಮಾರ, ಮಹೇಶಗೌಡ ಪಾಟೀಲ ಇದ್ದರು.
ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ವಿಜಯಪುರ- ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು. ಬಸವಂತ ಕಾಂಬಳೆ, ದುಂಡಪ್ಪ ಯರಗಟ್ಟಿ, ಮುತ್ತಪ್ಪ ಕೋಮಾರ, ಮಹೇಶಗೌಡ ಪಾಟೀಲ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಗ್ರ ಸ್ವರೂಪ ತಾಳಿದ ಕಬ್ಬಿನ ಬೆಲೆ ಸಮರ
  • ಪ್ರಮುಖ ಬೀದಿಗಳಲ್ಲಿ ಅಟೋ, ಟ್ರಾೃಕ್ಟರ್ ರ‌್ಯಾಲಿ
  • ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಮತ್ತಷ್ಟು ಕಾವು
ಮುಧೋಳ: ಬಾಕಿ ಬಿಲ್ ನೀಡಬೇಕು, ಪ್ರಸಕ್ತ ಹಂಗಾಮಿನಲ್ಲಿ ಪ್ರತಿ ಟನ್ ಗೆ 3,500 ರೂ. ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಮತ್ತಷ್ಟು ಕಾವು ಪಡೆದುಕೊಳ್ಳುತ್ತಿದೆ. ಹೋರಾಟಗಾರರು ಕರೆ ನೀಡಿದ್ದ ಮುಧೋಳ ಬಂದ್ ಗುರುವಾರ ಸಂಪೂರ್ಣ ಬೆಂಬಲ ದೊರೆಯಿತು.
ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟು ಆರಂಭವಾಗಲೇ ಇಲ್ಲ. ಔಷಧಿ, ಆಸ್ಪತ್ರೆ ಸೇರಿ ಅಗತ್ಯ ವಸ್ತುಗಳ ಬಿಟ್ಟರೇ ಬೇರೆ ಎಲ್ಲ ಸೌಲಭ್ಯಗಳು ಸಂಪೂರ್ಣ ಸ್ತಬ್ಧಗೊಂಡಿದ್ದವು. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವ್ಯಾಪಾರಸ್ಥರು ಹೋರಾಟಕ್ಕೆ ಬೆಂಬಲ ಸೂಚಿಸಿದರು. ಶಾಲಾ, ಕಾಲೇಜು, ಖಾಸಗಿ ಸಂಘ, ಸಂಸ್ಥೆಗಳು ಸೇವೆ ಸ್ಥಗಿತಗೊಂಡಿದ್ದವು. ಬಂದ್ ಪರಿಣಾಮ ಪ್ರಮುಖ ವೃತ್ತ, ಬಸ್ ನಿಲ್ದಾಣ, ರಸ್ತೆಗಳು ಖಾಲಿ ಖಾಲಿಯಾಗಿ ಜನರು ಇಲ್ಲದೇ ಬೀಕೋ ಎನ್ನುತ್ತಿದ್ದವು.
ಮುಧೋಳ ನಗರದಲ್ಲಿ ಗುರುವಾರ ಟ್ರಾೃಕ್ಟರ್ ರ‌್ಯಾಲಿ.
ಹೋರಾಟಗಾರರು ಟ್ರಾೃಕ್ಟರ್ ರ‌್ಯಾಲಿ, ಆಟೋ ರ‌್ಯಾಲಿಯನ್ನು ಸಂಗೊಳ್ಳಿ ರಾಯಣ್ಣ ಸರ್ಕಲ್‌ದಿಂದ ಮಧ್ಯಾಹ್ನ 3 ಗಂಟೆಗೆ ಆರಂಭಿಸಿದರು. ಜಡಗಣ್ಣ- ಬಾಲಣ್ಣ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ ಸರ್ಕಲ್, ಶಿವಾಜಿ ಸರ್ಕಲ್, ಗಡ್ಡದನ್ನವರ ಸರ್ಕಲ್ ಮೂಲಕ ರನ್ನ ಸರ್ಕಲ್ ತಲುಪಿ ಮುಕ್ತಾಯಗೊಂಡಿತ್ತು. ಮುಧೋಳ ಸೇರಿ ಜಿಲ್ಲೆಯ ಹಾಗೂ ವಿಜಯಪುರ ಜಿಲ್ಲೆಯ ವಿವಿಧ ಭಾಗದಿಂದ ನೂರಾರು ಟ್ಯಾಕ್ಟರ್‌ಗಳು, ಸಾವಿರಾರು ರೈತರು ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಕೂಡಾ ಹೋರಾಟಕ್ಕೆ ಸಾಥ್ ನೀಡಿದರು.
ಇನ್ನು ಬಂದ್ ಇದ್ದರು ಯಾವುದೇ ರಸ್ತೆ ತಡೆಗಟ್ಟುವ ಪ್ರಯತ್ನ ಮಾಡಲಿಲ್ಲ. ಎಂದಿನಂತೆ ಬಸ್, ವಾಹನಗಳು ಸಂಚರಿಸಿದರು. ಆದರೆ ಬಂದ್ ಘೋಷಣೆ ಮೊದಲೆಯಾಗಿದ್ದರಿಂದ ಸಾರ್ವಜನಿಕರು ಮುಧೋಳ ನಗರದತ್ತ ಸುಳಿಯಲಿಲ್ಲ. ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಹೋರಾಟದ ಸಭೆ ಮುಂದುವರಿಯಿತು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಸವಂತಪ್ಪ ಕಾಂಬಳೆ ಮಾತನಾಡಿ, ಪ್ರತಿ ಟನ್‌ಗೆ 3,500 ರೂ. ನೀಡಬೇಕು, ಬಾಕಿ ಬಿಲ್ ಪಾವತಿಸಬೇಕು ಅಂತ ಗುರುವಾರ ಮಧ್ಯಾಹ್ನದ ವರೆಗೆ ಗಡವು ನೀಡಲಾಗಿತ್ತು. ಆದರೇ ಕಾರ್ಖಾನೆ ಮಾಲೀಕರು, ಅಧಿಕಾರಿಗಳು, ಸರ್ಕಾರ ನಮ್ಮ ಸ್ಪಂದನೆ ನೀಡಿಲ್ಲ. ಹೀಗಾಗಿ ಕಾರ್ಖಾನೆ ಆರಂಭಕ್ಕೆ ಅವಕಾಶ ನೀಡುವುದಿಲ್ಲ. ದರ ಘೋಷಣೆ ಮಾಡಿ ನ್ಯಾಯಯುತ ಬೆಲೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ಈರಪ್ಪ ಹಂಚನಾಳ ಮಾತನಾಡಿ, ಕಬ್ಬು ಬೆಳೆಯಲು ತಗಲುವ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಗೊಬ್ಬರ, ಇಂಧನ ಮತ್ತು ಕೃಷಿ ಕಾರ್ಮಿಕರ ಕೂಲಿ ದುಪ್ಪಟ್ಟಾಗಿದೆ. ಇಂತಹ ಸಂದರ್ಭದಲ್ಲಿ 3,300 ರೂ. ಬೆಲೆ ನಮಗೆ ಯಾವುದೇ ಕಾರಣಕ್ಕೂ ನ್ಯಾಯಯುತವಲ್ಲ. ಕನಿಷ್ಠ ಪ್ರತಿ ಟನ್‌ಗೆ 3,500 ರೂ. ನೀಡಬೇಕು. ಹೀಗೆ ನಿರ್ಲಕ್ಷೃ ಧೋರಣೆ ಸಹಿಸಲು ಸಾಧ್ಯವಿಲ್ಲ ಅಂತ ಕಿಡಿಕಾರಿದರು.
ಕಬ್ಬು ಬೆಳೆಗಾರರ ಮುಖಂಡ ದುಂಡಪ್ಪ ಯರಗಟ್ಟಿ, ಮುತ್ತಪ್ಪ ಕೊಮಾರ, ಮಹೇಶಗೌಡ ಪಾಟೀಲ, ಹನಮಂತಗೌಡ ಪಾಟೀಲ, ಬಸಪ್ಪ ಸಂಗಣ್ಣವರ, ಮಲ್ಲು ರಡ್ಯಾರಟ್ಟಿ, ನಾಗಪ್ಪ ಪೂಜಾರಿ, ರಾಚಣ್ಣ ಕಣಬೂರ, ಹಣಮಂತ ನವಾಬ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net