26.30 ಲಕ್ಷ ರೂ. ಚಿನ್ನಾಭರಣ ವಶಕ್ಕೆ

ಬಾದಾಮಿಯ ಸಿಪಿಐ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಕಳ್ಳತನದಲ್ಲಿ ಪೊಲೀಸರು ಜಪ್ತಿ ಮಾಡಿದ ನಗದು, ಚಿನ್ನಾಭರಣದೊಂದಿಗೆ ಎಸ್‌ಪಿ ಸಿದ್ದಾರ್ಥ ಗೋಯಲ್, ಸಿಪಿಐ ಕೆ.ಬಿ. ಬನ್ನಿ, ಪಿಎಸ್‌ಐ ವಿಜಯಕುಮಾರ ರಾಠೋಡ, ಎಚ್.ಕೆ. ನರಳೆ, ಸಿಬ್ಬದಿ ಇದ್ದಾರೆ.
ಬಾದಾಮಿಯ ಸಿಪಿಐ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಕಳ್ಳತನದಲ್ಲಿ ಪೊಲೀಸರು ಜಪ್ತಿ ಮಾಡಿದ ನಗದು, ಚಿನ್ನಾಭರಣದೊಂದಿಗೆ ಎಸ್‌ಪಿ ಸಿದ್ದಾರ್ಥ ಗೋಯಲ್, ಸಿಪಿಐ ಕೆ.ಬಿ. ಬನ್ನಿ, ಪಿಎಸ್‌ಐ ವಿಜಯಕುಮಾರ ರಾಠೋಡ, ಎಚ್.ಕೆ. ನರಳೆ, ಸಿಬ್ಬದಿ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಪಿ ಸಿದ್ದಾರ್ಥ ಗೋಯಲ್ ಮಾಹಿತಿ
  • ಬ್ಯಾಂಕ್‌ಗಳ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು
  • ಇಬ್ಬರು ಕಳ್ಳರ ಬಂಧನ
ಬಾದಾಮಿ: ತಾಲೂಕಿನ ಕಾಕನೂರ ಎಸ್‌ಬಿಐ ಬ್ಯಾಂಕ್ ಹಾಗೂ ಬಾದಾಮಿಯ ವೀರಪುಲಕೇಶಿ ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ, ಅವರಿಂದ 26.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ವಶಪಡಿಸಿಕೊಳ್ಳುವಲ್ಲಿ ಬಾದಾಮಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣ ಭೇದಿಸಿರುವ ಬಗ್ಗೆ ಬಾದಾಮಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಆರೋಪಿಗಳು ಉತ್ತರ ಪ್ರದೇಶದವರಿದ್ದು, ಇವರಲ್ಲಿ ಮಹಮ್ಮದ್ ನವಾಬ ಎನ್ನುವ ಆರೋಪಿ ಮತ್ತೆ ಬ್ಯಾಂಕ್ ಕಳ್ಳತನ ಮಾಡಲು ಹುಡುಕಾಟ ನಡೆಸಿದ್ದ. ಈ ಬಗ್ಗೆ ಪೊಲೀಸರಿಗೆ ಸಂಶಯ ಮೂಡಿದ್ದರಿಂದ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಬ್ಯಾಂಕ್ ಕಳ್ಳತನ ಮಾಡಲು ಹೊಂಚು ಹಾಕುತ್ತಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ ಎಂದರು.
ಆರೋಪಿ ಮಹಮ್ಮದ್ ನವಾಬ ಈ ಹಿಂದೆ ಕಾಕನೂರ ಎಸ್‌ಬಿಐ ಬ್ಯಾಂಕ್ ಕಳ್ಳತನದಲ್ಲಿ ಭಾಗಿಯಾಗಿದ್ದ. ಹಾಗೆಯೇ ಮತ್ತೊಬ್ಬ ಆರೋಪಿ ಈಗಾಗಲೇ ಜೈಲಿನಲ್ಲಿ ಇದ್ದ ಕಮರುಲ್ಲಖಾನ್ ಎನ್ನುವವನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ಉತ್ತರ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅವರಿಂದ 26.30 ಲಕ್ಷ ರೂ. ಚಿನ್ನ ಹಾಗೂ ಹಣವನ್ನು ವಶಪಡಿಸಿಕೊಂಡು ಬಂದಿದ್ದಾರೆ ಎಂದು ಎಸ್ಪಿ ಹೇಳಿದರು.
ಕಾಕನೂರ ಎಸ್‌ಬಿಐನಲ್ಲಿ 20.61 ಲಕ್ಷ ರೂ. ಮೌಲ್ಯದ 165 ಗ್ರಾಮ್ ಚಿನ್ನದ ಆಭರಣಗಳು, 1.45 ಲಕ್ಷ ರೂ. ನಗದು ಹಾಗೂ ಕುಳಗೇರಿಯಲ್ಲಿ ವೀರಪುಲಕೇಶಿ ಬ್ಯಾಂಕ್ ಕಳ್ಳತನದಲ್ಲಿ ಭಾಗಿಯಾಗಿದ್ದ ಕಮರುಲ್‌ಖಾನ್‌ನಿಂದ 25 ಗ್ರಾಮ್ ಚಿನ್ನದ ಆಭರಣನ್ನು ಹೀಗೆ 198 ಗ್ರಾಮ್ ಚಿನ್ನದ ಆಭರಣಗಳು ಹಾಗೂ 1.55 ಲಕ್ಷ ರೂ. ನಗದು ಹಣವನ್ನು ಆರೋಪಿಗಳಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಪ್ರಕರಣ ಭೇದಿಸುವಲ್ಲಿ ಬಾದಾಮಿ ಸಿಪಿಐ ಕೆ.ಬಿ. ಬನ್ನಿ, ಪಿಎಸ್‌ಐ ವಿಜಯಕುಮಾರ ರಾಠೋಡ, ಎಚ್.ಕೆ. ನರಳೆ, ಕೆರೂರ ಠಾಣೆ ಪಿಎಸ್‌ಐ ಬಿ.ಎಂ. ರಬಕವಿ, ಗುಳೇದಗುಡ್ಡ ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ, ಇಳಕಲ್ಲ ಗ್ರಾಮೀಣ ಠಾಣೆ ಪಿಎಸ್‌ಐ ಎಂ.ಎ. ಸತ್ತಿಗೌಡರ ಹಾಗೂ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದ ಎಸ್ಪಿ ಸಿದ್ಧಾರ್ಥ ಗೋಯಲ್ ಅವರು, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿಗೆ ಬಹುಮಾನ ಘೋಷಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net