ದೇಶ-ವಿದೇಶಿ ಪ್ರವಾಸಿಗರಿಗೆ ಆದ್ಯತೆ ಕೊಡಿ

ಬಾದಾಮಿ ಪಟ್ಟಣದಲ್ಲಿ ಆಧುನೀಕರಣಗೊಂಡ ಹೋಟೇಲ್ ಬಾದಾಮಿ ಕೋರ್ಟ್‌ನ್ನು  ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು. ಸಚಿವ ಭೈರತಿ ಸುರೇಶ, ಶಿವರಾಜ ತಂಗಡಗಿ, ಹೊಳಬಸು ಶೆಟ್ಟರ ಇತರರಿದ್ದರು.
ಬಾದಾಮಿ ಪಟ್ಟಣದಲ್ಲಿ ಆಧುನೀಕರಣಗೊಂಡ ಹೋಟೇಲ್ ಬಾದಾಮಿ ಕೋರ್ಟ್‌ನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು. ಸಚಿವ ಭೈರತಿ ಸುರೇಶ, ಶಿವರಾಜ ತಂಗಡಗಿ, ಹೊಳಬಸು ಶೆಟ್ಟರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಎಂ ಸಿದ್ದರಾಮಯ್ಯ ಸಲಹೆ
  • ಬಾದಾಮಿ ಕೋರ್ಟ್ ಉದ್ಘಾಟನೆ
  • ಶ್ರೀಜೀತ ರೆಸಾರ್ಟ್ ನಿರ್ಮಾಣಕ್ಕೆ ಭೂಮಿಪೂಜೆ
ಬಾಗಲಕೋಟೆ : ಹೋಟೆಲ್ ಉದ್ಯಮ ನಡೆಸುವುದು ಅಷ್ಟು ಸುಲಭವಲ್ಲ. ಐತಿಹಾಸಿಕ ಪ್ರವಾಸಿ ತಾಣ ಬಾದಾಮಿಯಲ್ಲಿ ಉದ್ಯಮಿ ಹೊಳಬಸು ಶೆಟ್ಟರ ನೇತೃತ್ವದ ಹೋಟೆಲ್ ಬಾದಾಮಿ ಕೋರ್ಟ್ ಮತ್ತು ನಿರ್ಮಾಣವಾಗಲಿರುವ ಶ್ರೀಜೀತ ರೆಸಾರ್ಟ್‌ನವರು ಇಲ್ಲಿಗೆ ಬರುವ ದೇಶ-ವಿದೇಶಿ ಪ್ರವಾಸಿಗರಿಗೆ ವಿಶೇಷ ಆತಿಥ್ಯ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ಪಟ್ಟಣದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಆಧುನೀಕರಣಗೊಂಡ ಹೋಟೆಲ್ ಬಾದಾಮಿ ಕೋರ್ಟ್ ಉದ್ಘಾಟನೆ ಹಾಗೂ ಶ್ರೀಜೀತ ರೆಸಾರ್ಟ್ ನಿರ್ಮಾಣಕ್ಕೆ ಭಾನುವಾರ ಸಂಜೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ, ಸಚಿವನಾಗಿದ್ದಾಗ ಹಾಗೂ ಬಾದಾಮಿ ಕ್ಷೇತ್ರದ ಶಾಸಕನಾಗಿದ್ದಾಗ ಹಲವಾರು ಬಾರಿ ಈ ಹೋಟೆಲ್‌ಗೆ ಬಂದು, ವಿಶ್ರಾಂತಿ ಪಡೆದು ಹೋಗಿದ್ದೇನೆ. ಕಳೆದ 2020ರಲ್ಲಿ ಹೊಳಬಸು ಶೆಟ್ಟರ ಅವರು ಈ ಹೋಟೆಲ್ ಮುನ್ನಡೆಸುವ ಜವಾಬ್ದಾರಿ ಪಡೆದಿದ್ದು, ಇದೀಗ ದೇಶ-ವಿದೇಶಿ ಪ್ರವಾಸಿಗರಿಗೆ ಆತಿಥ್ಯ ನೀಡಲು ವಿಶೇಷವಾಗಿ ನವೀಕರಿಸಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮನೆಯ ವಾತಾವರಣದ ವಿಶ್ರಾಂತಿಯ ನೆಲೆಯಾಗಿ ರೂಪುಗೊಳ್ಳಲಿ ಎಂದರು.
ಉದ್ಯಮಿ, ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ ಮಾತನಾಡಿ, ಕಳೆದ 2020ರಲ್ಲಿ ಹೋಟೆಲ್ ಬಾದಾಮಿ ಕೋರ್ಟ್ ಪಡೆದು ಮುನ್ನಡೆಸಲಾಗುತ್ತಿದೆ. ಇದೀಗ, ಹೋಟೆಲ್ ಬಾದಾಮಿ ಕೋರ್ಟ್ ಪಡೆದುಕೊಂಡೆ, ಶ್ರೀಜೀತ ರೆಸಾರ್ಟ್ ನಿರ್ಮಿಸುತ್ತಿದ್ದು, 24 ಕೊಠಡಿ ಇರಲಿವೆ. ಪ್ರವಾಸಿಗರಿಗೆ ವಿಶೇಷ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಿರ್ಮಾಣಮಾಡಲಾಗುತ್ತಿದೆ. ಈ ಕಾರ್ಯಕ್ಕೆ ನಾಡಿನ ಅನ್ನರಾಮಯ್ಯ ಎಂದೇ ಖ್ಯಾತಿ ಪಡೆದ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿರುವುದು ನಮ್ಮ ಸೌಭಾಗ್ಯ ಎಂದರು.
ಸಚಿವರಾದ ಬೈರತಿ ಸುರೇಶ, ಶಿವರಾಜ ತಂಗಡಗಿ, ಆರ್.ಬಿ. ತಿಮ್ಮಾಪೂರ ಮುಂತಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net