ಮಕ್ಕಳಿಗೆ ಅಂಕಗಳಿಕೆಯೊಂದಿಗೆ ಸಂಸ್ಕಾರ ನೀಡಿ

ತೇರದಾಳ ಪಟ್ಟಣದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಹಮ್ಮಿಕೊಂಡಿದ್ದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ವನ್ನು ಜಮಖಂಡಿಯ ಓಲೆಮಠದ ಆನಂದದೇವರು ಉದ್ಘಾಟಿಸಿದರು. ಹೊಳಬಸು ಬಾಳಶೆಟ್ಟರ, ಈಶ್ವರ ಬಿದರಿ, ಶ್ರೀಶೈಲ ಮೋದಿ ಇತರರಿದ್ದರು.
ತೇರದಾಳ ಪಟ್ಟಣದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಹಮ್ಮಿಕೊಂಡಿದ್ದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ವನ್ನು ಜಮಖಂಡಿಯ ಓಲೆಮಠದ ಆನಂದದೇವರು ಉದ್ಘಾಟಿಸಿದರು. ಹೊಳಬಸು ಬಾಳಶೆಟ್ಟರ, ಈಶ್ವರ ಬಿದರಿ, ಶ್ರೀಶೈಲ ಮೋದಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಮಖಂಡಿ ಓಲೆಮಠದ ಆನಂದದೇವರು ಹೇಳಿಕೆ
  • ತಕ್ಕಡಿಗೆ ಧಾನ್ಯ ಹಾಕಿ ಉದ್ಘಾಟನೆ
ತೇರದಾಳ: ಮಕ್ಕಳಿಗೆ ಅಂಕ ಗಳಿಕೆಯ ಜೊತೆಗೆ ಸಂಸ್ಕಾರ ಕೊಡುವ ಕಾರ್ಯ ತಾಯಂದಿರು ಮಾಡಬೇಕು ಎಂದು ಜಮಖಂಡಿ ಓಲೆಮಠದ ಆನಂದದೇವರು ಹೇಳಿದರು.
ಪಟ್ಟಣದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ವತಿಯಿಂದ ಬುಧವಾರ ಹಮ್ಮಿಕೊಂಡ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಎಐ ತಂತ್ರಜ್ಞಾನದಿಂದಾಗಿ ಇಂಜನಿಯರ್, ಡಾಕ್ಟರ್ ಸೇರಿ ಉನ್ನತ ನೌಕರಿಗಳಲ್ಲಿ ಮಾನವಶಕ್ತಿ ಮತ್ತು ಬೆಡಿಕೆ ಕಡಿಮೆಯಾಗಿ ಕೊನೆಗೆ ರೈತ ಮಾತ್ರ ಉಳಿದುಕೊಳ್ಳುತ್ತಾನೆ. ಹೀಗಾಗಿ ಮಕ್ಕಳ ಕೈಯಲ್ಲಿ ಪೋನಗಳನ್ನು ಕೊಡದೆ ಸಂಸ್ಕಾರದ ಜೊತೆಗೆ ನಿಮ್ಮ ಮೂಲ ಉದ್ಯೋಗ ಕಲಿಸಬೇಕು. ಬಣಜಿಗ ಸಮಾಜವು ಧಾರ್ಮಿಕ, ಆಧ್ಯಾತ್ಮಿಕ ವಿವಿಧ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಹೊಳಬಸು ಬಾಳಶೆಟ್ಟರ ಮಾತನಾಡಿ, ನಾವು ಶಾಂತಿಪ್ರಿಯರಾಗಿದ್ದು, ನಮ್ಮ ಬಗ್ಗೆ ಪಕ್ಕದ ಜಿಲ್ಲೆಯವರು ಟೀಕೆ ಮಾಡಿದಾಗ ಶಾಂತವಾಗಿಯೇ ಉತ್ತರ ಕೊಟ್ಟಿದ್ದೇವೆ. ನಮ್ಮವರೇ ಸಿಎಂ ಆಗಿ 2ಎ ಸ್ಥಾನಮಾನ ಕೊಡುವುದರ ಮೂಲಕ ಸಮಾಜಕ್ಕೆ ಶಕ್ತಿ ತುಂಬಿದ್ದಾರೆ. ಸಮುದಾಯದವರು ಶಿಕ್ಷಣ, ಸಂಘಟನೆ ಮತ್ತು ಔದ್ಯೋಗಿಕ ವಲಯಗಳಿಗೆ ಹೆಚ್ಚಿನ ಒತ್ತು ಕೊಟ್ಟು ಉನ್ನತ ಸ್ಥಾನಗಳಿಸುವತ್ತ ಸಾಗಬೇಕೆಂದು ಕರೆ ನೀಡಿದರು.
ರಬಕವಿ-ಬನಹಟ್ಟಿ ಬಣಜಿಗ ಸಮಾಜ ಅಧ್ಯಕ್ಷ ಈಶ್ವರ ಬಿದರಿ, ಸೋಮಶೇಖರ ಕೊಟ್ರಶೆಟ್ಟಿ, ಬೀಳಗಿಯ ರಾಜು ಎಂಡಿಗೇರಿ, ತೇರದಾಳ ಘಟಕ ಅಧ್ಯಕ್ಷ ಶ್ರೀಶೈಲ ಮೋದಿ, ತಾಲೂಕು ಘಟಕ ಅಧ್ಯಕ್ಷ ಮಹೇಶ ಯಾದವಾಡ, ಮಹಿಳಾ ಅಧ್ಯಕ್ಷೆ ಸುನೀತಾ ಹಂಜಿ ಇದ್ದರು. ಸಂತೋಷ ಪಟ್ಟಣಶೆಟ್ಟಿ ಸ್ವಾಗತಿಸಿ, ಶ್ರೀನಾಥ ಶೊಟ್ಟಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net