ಕೊಪ್ಪಳದ ಗವಿಮಠದ ಗವಿಸಿದ್ಧೇಶ್ವರ ಶ್ರೀಗಳು ಕಲಾದಗಿಗೆ ಆಗಮಿಸುವ ಹಿನ್ನೆಲೆ ಕಲಾದಗಿಯ ಸಾಯಿಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕೃಷ್ಣಾನಂದ ಶಾಸಿಗಳು ಮಾತನಾಡಿದರು. ಮುಖಂಡರಾದ ಸಲೀಂ ಶೇಖ, ಗ್ರಾ.ಪಂ. ಉಪಾಧ್ಯಕ್ಷ ಪಕೀರಪ್ಪ ಮಾದರ, ಮುಖಂಡರಾದ ಕೆ.ಎಲ್. ಬಿಲಕೇರಿ, ಸಂಗಣ್ಣ ಮುಧೋಳ, ಸಲೀಂಶೇಖ, ಹನುಮಂತಗೌಡ ಸೈಯಪ್ಪಗೋಳ, ಶ್ರೀಧರ ವಾಘ, ಮಲ್ಲಪ್ಪಣ್ಣ ಜಮಖಂಡಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀ ಸಾಯಿ ಸಭಾಭವನ ಲೋಕಾರ್ಪಣೆಯಲ್ಲಿ ಭಾಗಿ
ಆಶೀರ್ವಚನ ಸಕಲ ಸಿದ್ಧತೆ
ಕಾರ್ಯಕ್ರಮ ಯಶಸ್ವಿಗೆ ನಿರ್ಧಾರ
ಕಲಾದಗಿ: ಗ್ರಾಮದಲ್ಲಿನ ಶ್ರೀ ಸಾಯಿ ಮಂದಿರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸಭಾ ಭವನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಡಿ. 1ರಂದು ಗ್ರಾಮಕ್ಕೆ ಕೊಪ್ಪಳದ ಗವಿಮಠದ ಗವಿಸಿದ್ಧೇಶ್ವರ ಶ್ರೀಗಳು ಆಗಮಿಸುತ್ತಿದ್ದಾರೆ ಎಂದು ಕೃಷ್ಣಾನಂದ ಶಾಸಿಗಳು ಹೇಳಿದರು.
ಇಲ್ಲಿನ ಸಾಯಿ ಮಂದಿರದಲ್ಲಿ ಮಂಗಳವಾರ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಕಲಾದಗಿಗೆ ಜನಮನಕ್ಕೆ ಹತ್ತಿರವಿರುವ, ಎಲ್ಲರೂ ಗೌರವಿಸುವ ಕೊಪ್ಪಳದ ಗವಿಮಠದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಗಮಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಆದ್ದರಿಂದ ಕಾರ್ಯಕ್ರಮದಲ್ಲಿ ಯಾವುದಕ್ಕೂ ಚ್ಯುತಿಬಾರದಂತೆ, ಬಂದವರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳೊಣ ಎಂದರು.
ಅಂದು 10.30 ಗಂಟೆಗೆ ಗ್ರಾಮಕ್ಕೆ ಆಗಮಿಸುವ ಶ್ರೀಗಳು ಗ್ರಾಮದಲ್ಲಿರುವ ವಿಶ್ವಚೇತನ ಮಹಿಳಾ ಬ್ಯಾಂಕ್‌ನ ಪೂಜೆಯಲ್ಲಿ ಪಾಲ್ಗೊಂಡು 11 ಗಂಟೆ ಹೊತ್ತಿಗೆ ಶ್ರೀ ಸಾಯಿ ಮಂದಿರದ ನೂತನ ಸಭಾಂಗಣದ ಲೊಕಾರ್ಪಣೆ ಮಾಡುವುದು. ನಂತರ ಪಕ್ಕದ ಪ್ರವಾಸಿ ಮಂದಿರದಲ್ಲಿ ನಡೆಯುವ ಸಭೆ ಕಾರ್ಯಕ್ರಮದಲ್ಲಿ ಪ್ರವಚನ ನೀಡಲಿದ್ದಾರೆ ಎಂದು ವಿವರಿಸಿದರು.