20ರಂದು ಜಗದಾಳದಲ್ಲಿ ಉದ್ಯಾನೋತ್ಸವ

ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸಭಾ ಭವನದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಬಾಗಲಕೋಟೆ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಶಾಂತಪ್ಪ ತಿರಕಣ್ಣವರ ಮಾತನಾಡಿದರು. ಡಾ. ಸತೀಶ ಪಾಟೀಲ, ಸದಾಶಿವ ಬಂಗಿ, ದಾನಪ್ಪ ಆಸಂಗಿ ಇತರರಿದ್ದರು.
ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸಭಾ ಭವನದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಬಾಗಲಕೋಟೆ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಶಾಂತಪ್ಪ ತಿರಕಣ್ಣವರ ಮಾತನಾಡಿದರು. ಡಾ. ಸತೀಶ ಪಾಟೀಲ, ಸದಾಶಿವ ಬಂಗಿ, ದಾನಪ್ಪ ಆಸಂಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹಾ ವಿದ್ಯಾಲಯದ ಡೀನ್ ಶಾಂತಪ್ಪ ತಿರಕಣ್ಣವರ ಮಾಹಿತಿ
  • ತೋಟಗಾರಿಕೆ ಪ್ರದರ್ಶನ, ನೂತನ ತಂತ್ರಜ್ಞಾನ ಪರಿಚಯ
ರಬಕವಿ/ಬನಹಟ್ಟಿ: ಜಿಲ್ಲೆಯ ತೋಟಗಾರಿಕೆ ಮಹಾವಿದ್ಯಾಲಯದ ಬಿಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರ ಅಂಗವಾಗಿ ಉದ್ಯಾನೋತ್ಸವ ಘೋಷ ವಾಕ್ಯದೊಂದಿಗೆ ವಸ್ತು ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ ಮೇ 20ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಹಾವಿದ್ಯಾಲಯದ ಡೀನ್ ಶಾಂತಪ್ಪ ತಿರಕಣ್ಣವರ ಹೇಳಿದರು.
ತಾಲೂಕಿನ ಜಗದಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸಭಾ ಭವನದಲ್ಲಿ ಸೋಮವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 12 ವಾರಗಳಿಂದ ವಿದ್ಯಾರ್ಥಿಗಳು ಗ್ರಾಮೀಣ ವಾಸ್ತವಿಕ ಪರಿಸರದಲ್ಲಿ ಕೃಷಿ ಪದ್ಧತಿ, ಬೆಳೆ ನಿರ್ವಹಣೆ, ರೈತರ ಸವಾಲುಗಳು ಹಾಗೂ ಸ್ವಉದ್ಯೋಗದ ಅವಕಾಶಗಳ ಕುರಿತು ಪ್ರಾಯೋಗಿಕ ಅನುಭವ ಪಡೆದಿದ್ದಾರೆ ಎಂದು ತಿಳಿಸಿದರು.
ಈ ಶಿಬಿರವು ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲ, ನಾಯಕತ್ವ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ವೃದ್ಧಿಸುವುದಾಗಿ ಹೇಳಿದರು.
ತೋಟಗಾರಿಕೆ ವಸ್ತು ಪ್ರದರ್ಶನ, ನೂತನ ಕೃಷಿ ತಂತ್ರಜ್ಞಾನಗಳ ಪರಿಚಯ, ಪುಷ್ಪಕೃಷಿ, ಅಂತರ ಬೆಳೆ, ಕೀಟ-ರೋಗ ನಿರ್ವಹಣೆ, ಜಲಾನಯನ ಅಭಿವೃದ್ಧಿ ಹಾಗೂ ರೈತರು, ಗ್ರಾಹಕರೊಂದಿಗೆ ನೇರ ಸಂವಾದ ಕಾರ್ಯಕ್ರಮಗಳು ನಡೆಯಲಿವೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಗ್ರ ಕೃಷಿ ಮಾಹಿತಿ ಪಡೆಯುವಂತೆ ಮನವಿ ಮಾಡಿದರು.
ಮರೆಗುದ್ದಿ ಅಡವಿ ಸಿದ್ಧೇಶ್ವರ ಮಠದ ಗುರುಪಾದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ತೇರದಾಳ ಶಾಸಕ ಸಿದ್ದು ಸವದಿ ಉದ್ಘಾಟಿಸುವರು. ಜಮಖಂಡಿ ಶಾಸಕ ಜಗದೀಶ ಗುಡುಗುಂಟಿ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಕುಲಪತಿ ಡಾ. ವಿಷ್ಣುವರ್ಧನ ಅಧ್ಯಕ್ಷತೆ ವಹಿಸಲಿದ್ದಾರೆ.
ಡಾ. ತಮ್ಮಯ್ಯ ಎನ್., ಜಂಟಿ ಕೃಷಿ ನಿರ್ದೇಶಕ ಡಾ. ರುದ್ರೇಶಪ್ಪ, ಡಾ. ರವೀಂದ್ರ ಹಕಾಟಿ, ವಿಜ್ಞಾನಿಗಳಾದ ಡಾ. ಸತೀಶ ಪಾಟೀಲ, ಡಾ. ಸತೀಶ ಡಿ., ಡಾ. ಯಾಧವ ಸಿ., ಜೆ. ಡಾ. ವಿಜಯ ಹೊಸಮನಿ, ಡಾ. ರಾಘವೇಂಧ್ರ, ಅಡಿವೆಪ್ಪ ಕಿತ್ತೂರ, ಸದಾಶಿವ ಬಂಗಿ, ಬಸವರಾಜ ಮಗದುಮ್, ದಾನಪ್ಪ ಅಸಂಗಿ, ಮಂಜುನಾಥ ಯಲಗುದರಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net