ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಸ್ವೀಪ್ ಅಧ್ಯಕ್ಷ, ಜಿ.ಪಂ. ಸಿಇಒ ಶಶಿಧರ ಕುರೇರ ಹಾಗೂ ಎಸ್ಪಿ ಸಿದ್ಧಾರ್ಥ ಗೋಯಲ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಉಪ ಚುನಾವಣೆಗೆ 1,26,999 ಪುರುಷ ಮತ್ತು 1,32,775 ಮಹಿಳಾ ಮತದಾರರು ಹಾಗೂ 23 ಇತರೆ ಸೇರಿ ಒಟ್ಟು 2,59,797 ಮತದಾರರಿದ್ದಾರೆ. 385 ಸೇವಾ ಮತದಾರರು, 170 ಅಂಚೆ ಮತಪತ್ರಗಳು 90 ಪಿಡಬ್ಲುೃಡಿ ಮತದಾರರಿದ್ದಾರೆ. ಉಪ ಚುನಾವಣೆಗೆ ಒಟ್ಟು 322 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನವನಗರದ ಸೆಕ್ಟರ್ ನಂ.43 ರಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕೇಂದ್ರ ಸ್ಥಾಪಿಸಲಾಗಿದೆ ಎಂದರು.