ಈಗಾಗಲೇ ಹೋಳಿ ಹಬ್ಬದ ಸಿದ್ಧತೆಗಳು ಮಾಡಿಕೊಳ್ಳಲಾಗುತ್ತಿದ್ದು, ಬಾಗಲಕೋಟೆ ನಗರ, ವಿದ್ಯಾಗಿರಿ ಹಾಗೂ ನವನಗರ ಭಾಗಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ಒಟ್ಟು 10 ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ. ಅಲ್ಲೆಲ್ಲ ಅರವಟಿಗೆಗಳ ಮೂಲಕ ಶುದ್ಧ ಕುಡಿಯುವ ನೀರು ಹಾಗೂ ಉಚಿತವಾಗಿ ಬಣ್ಣಗಳನ್ನು ವಿತರಣೆ ಮಾಡಲಾಗುವುದು. ಕಿಲ್ಲಾ ಪ್ರದೇಶ, ಬಸವೇಶ್ವರ ವೃತ್ತ, ವಿದ್ಯಾಗಿರಿ ವೃತ್ತ, ಇಂಜಿನಿಯರಿಂಗ್ ಕಾಲೇಜ್ ವೃತ್ತ, ಜಿಲ್ಲಾ ಆಸ್ಪತ್ರೆ ಸರ್ಕಲ್ ಬಳಿ ಸೇರಿ ವಿವಿಧ ಸ್ಥಳಗಳಲ್ಲಿ ಕೌಂಟರ್‌ಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.