ಎಸ್.ಆರ್. ಮನಹಳ್ಳಿ ಮಾತನಾಡಿ, ಅರ್ಜಿ ಸಲ್ಲಿಸಲು ಫೆ.12 ರಿಂದ ಮಾ. 10 ರವರೆಗೆ ಅವಕಾಶ ಇದ್ದು, ಪ್ರವೇಶ ಪರೀಕ್ಷೆಯೂ ಕನ್ನಡ ಭಾಷೆ ಸೇರಿ 13 ಭಾಷೆಗಳಲ್ಲಿ ನಡೆಯುತ್ತದೆ. 180 ನಿಮಿಷಗಳ ಪರೀಕ್ಷಾ ಅವಽಯಲ್ಲಿ 181 ಪ್ರಶ್ನೆಗಳು ಇದ್ದು, ಕನಿಷ್ಠ 160 ಅಂಕ ಪಡೆದರೆ ಮಾತ್ರ ಕೋರ್ಸ್ಗೆ ಅರ್ಹರಾಗುತ್ತಾರೆ. ಈ ಕೋರ್ಸ್ನಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಸಮರ್ಥ ಶಿಕ್ಷಕರು ಹೊರಬರಬೇಕು ಎನ್ನುವ ಉದ್ದೇಶ ಇದೆ. ದೇಶದಲ್ಲಿ ಈ ವರ್ಷ 223 ಕಾಲೇಜುಗಳಿಗೆ ಪ್ರವೇಶಾತಿ ಅವಕಾಶ ಇದ್ದು, ಇವುಗಳ ಪೈಕಿ ಬಿವಿವಿ ಸಂಘದ ಮೂರು ಕಾಲೇಜುಗಳಿಗೆ ಅವಕಾಶ ದೊರೆತಿದೆ ಎಂದು ವಿವರಿಸಿದರು.