ಆರ್‌ಎಸ್‌ಎಸ್ ಬಿಡಿ ಜನರ ಪರಿಸ್ಥಿತಿ ನೋಡಿ

ಗುಳೇದಗುಡ್ಡ ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜಿನ ಹೆಲಿಪ್ಯಾಡ್‌ನಲ್ಲಿ ಭಾನುವಾರ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಸಚಿವ ಮುರಗೇಶ ನಿರಾಣಿ, ಜಿಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಇದ್ದರು.
ಗುಳೇದಗುಡ್ಡ ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜಿನ ಹೆಲಿಪ್ಯಾಡ್‌ನಲ್ಲಿ ಭಾನುವಾರ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಸಚಿವ ಮುರಗೇಶ ನಿರಾಣಿ, ಜಿಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಇದ್ದರು.
Published on

ಬರಗಾಲದಿಂದಾಗಿ ರಾಜ್ಯದ ಜನರ ಪರಿಸ್ಥಿತಿ ಏನಾಗಿದೆ, ಮಳೆ, ಬೆಳೆ ಇಲ್ಲದೇ ಕಲಬುರ್ಗಿ, ಯಾದಗಿರಿ, ರಾಯಚೂರಿನ ಜನರು ಕೆಲಸ ಹುಡುಕಿಕೊಂಡು ಗುಳೆ ಹೊರಟಿದ್ದಾರೆ. ಅವರ ಪರಿಸ್ಥಿತಿ ಬಗ್ಗೆ ಸರ್ಕಾರ ಮೊದಲು ಚಿಂತನೆ ಮಾಡಿ, ಆರ್‌ಎಸ್‌ಎಸ್ ಬಗ್ಗೆ ಬಿಲ್ ತರೋದು ಆಮೇಲೆ ನೋಡೋಣ ಎಂದು ಕೇಂದ್ರದ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಗುಳೇದಗುಡ್ಡ ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಎಷ್ಟು ಹಳ್ಳಿಗಳಲ್ಲಿ ಬರಗಾಲದಿಂದ ಎಷ್ಟು ಕುಟುಂಬಗಳು ಮನೆಗೆ ಬೀಗ ಹಾಕಿ ಊರು ಬಿಟ್ಟು ಹೋಗುತ್ತಿದ್ದಾರೆ. ಅಲ್ಲಿನ ಶಾಲೆಗಳ ಪರಿಸ್ಥಿತಿ ಏನು, ಮಕ್ಕಳು ಶಾಲೆ ಹೋಗುತ್ತಿದ್ದಾರೆಯೇ ಎಂದು ಗೊತ್ತಿದೆಯೇ, ಕಲ್ಯಾಣ ಕರ್ನಾಟಕ ಹೆಸರಿನಲ್ಲಿ ಅಭಿವೃದ್ಧಿ ನಿಗಮಮಾಡಿಕೊಂಡಿದ್ದು, ಆ ನಿಗಮದಿಂದ ಏನು ಮಾಡುತ್ತಿದೆ ನೋಡಿ ಅಂತ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಖಾರವಾಗಿ ಪ್ರಶ್ನಿಸಿದರು.
ಮಂತ್ರಿಗಳನ್ನು ಬರಗಾಲ ವೀಕ್ಷಣೆಗೆ ಕಳಿಸಿದ್ದಾರಂತೆ, ಈ ಹೊಸಮಂತ್ರಿಗಳು ಯಾವುದೋ ಒಂದು ಹೊಲದಲ್ಲಿ ನಿಂತು ಫೋಟೊ ಹೊಡೆಸಿಕೊಂಡು ಪತ್ರಿಕೆಗೆ ಫೋಟೊ ಹಾಕಿಸಿಕೊಂಡು ಹೋದರು, ಇದನ್ನ ಬಿಟ್ಟು ಏನು ಮಾಡಿದ್ದೀರಿ ಎಂದು ಪ್ರಶ್ನೆಗಳ ಸುರಿಮಳೆಗೈದರು.
ಸಾವಿರ ಕೋಟಿ ಯಾರಪ್ಪನ ಹಣ:
ಪಂಚಾಯಿತಿ ಮಟ್ಟದಲ್ಲಿ ಭಾರತ ಜೋಡೋ ಹೆಸರಿನಲ್ಲಿ ಆರು ಸಾವಿರ ಸಂಘಗಳನ್ನು ಮಾಡಿ, ಯುವಕರನ್ನು ಸಂಘಟನೆ ಮಾಡುತ್ತೇವೆ ಎನ್ನುತ್ತಾರೆ. ಈ ಸಂಘಗಳು ಯುವಕರಿಗೆ ಜ್ಞಾನ ತುಂಬವುದಕ್ಕೂ ಅಲ್ಲ, ಅವರಿಗೆ ಉದ್ಯೋಗಕೊಡುವುದಕ್ಕೂ ಅಲ್ಲ, ಬದಲಾಗಿ ಗುಂಡಾಗಿರಿ ಬೆಳಸಲು ಭಾರತ ಜೋಡೋ ತರುತ್ತಿದ್ದಾರೆ.
ಹಿಂದೇ ಗುಂಡುರಾವ ಸರ್ಕಾರದ ಕಾಲದಲ್ಲಿ ಎಫ್.ಎಂ. ಖಾನ್ ಅಂತಾ ಒಬ್ಬರು ಇದೇ ರೀತಿ ಮಾಡಿದ್ದರು. ಆ ಗುಂಡಾಗಿರಿ ಸಂಸ್ಕೃತಿಯನ್ನು ಮತ್ತೇ ಈ ನಾಡಿನಲ್ಲಿ ತರಲು ಭಾರತ ಜೋಡೋ ಹೆಸರಿನಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಹಣ ನೀಡುತ್ತಾರಂತೆ. ಒಂದು ಸಾವಿರ ಕೋಟಿ ರೂಪಾಯಿ ಯಾರಪ್ಪನ ಹಣ… ಸಾರ್ವಜನಿಕರ ತೆರಿಗೆ ಹಣದಲ್ಲಿ ಗುಂಡಾಗಿರಿ ಬೆಳಸಲು ಈ ಸರ್ಕಾರ ಹೊರಟಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಈ ಸಂದರ್ಭದಲ್ಲಿ ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಸಚಿವ ಮುರಗೇಶ ನಿರಾಣಿ, ಜಿಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net