ವಿದೇಶಿ ಪ್ರವಾಸಿಗ ತೀವ್ರ ಅಸ್ವಸ್ಥೃ

ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಝಾಕ್ ಗೋಲ್ಡ್‌ಬರ್ಗ್.
ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಝಾಕ್ ಗೋಲ್ಡ್‌ಬರ್ಗ್.
Published on

ಪ್ರಮುಖ ಮುಖ್ಯಾಂಶಗಳು

  • ಬಾದಾಮಿಗೆ ಬಂದಿದ್ದ ಫ್ರೆಂಚ್ ದೇಶದ ಪ್ರವಾಸಿಗ
  • ಪಾರ್ಶ್ವವಾಯುನಿಂದ ಅಸ್ವಸ್ಥೃ
  • ಜಿಲ್ಲಾಡಳಿತದಿಂದ ವಿದೇಶಿ ರಾಯಬಾರಿ ಕಚೇರಿಗೆ ಮಾಹಿತಿ ರವಾನೆ
ಬಾಗಲಕೋಟೆ: ಜಿಲ್ಲೆಯ ಪ್ರವಾಸಕ್ಕಾಗಿ ಆಗಮಿಸಿದ್ದ ವಿದೇಶಿ ಪ್ರವಾಸಿಗರೊಬ್ಬರಿಗೆ ಪಾರ್ಶ್ವವಾಯು ಹೊಡೆದು ಅಸ್ವಸ್ಥೃಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ತಕ್ಷಣ ಸ್ಪಂದನೆ ದೊರೆತಿದೆ. ಪ್ರವಾಸಿಗನ ಆರೋಗ್ಯ ಸ್ಥಿತಿಯನ್ನು ಗಮನಿಸಿದ ಅಧಿಕಾರಿಗಳು ತ್ವರಿತವಾಗಿ ಅವರನ್ನು ಬಾದಾಮಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ಒದಗಿಸಿದ್ದಾರೆ.
ಬಾದಾಮಿಗೆ ಆಗಮಿಸಿದ ಫ್ರೆಂಚ್ ದೇಶದ ಇಝಾಕ್ ಗೋಲ್ಡಬರ್ಗ್ ಎಂಬ ಪ್ರವಾಸಿಗರಿಗೆ ಪಾರ್ಶ್ವ ಹೊಡೆದು ಅಸ್ವಸ್ಥರಾಗಿದ್ದರು. ವಿಷಯ ತಿಳಿದ ಜಿಲ್ಲಾಡಳಿತವು ಸೂಕ್ತ ಚಿಕಿತ್ಸೆಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ಸ್ಥಳಾಂತರ ಮಾಡಿ, ಸಿಟಿ ಸ್ಕಾೃನ್, ಎಂ.ಆರ್.ಐ ಸ್ಕಾೃನ್ ಮಾಡಿಸಿ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿದೆ.
ಸದ್ಯ ವಿದೇಶಿ ಪ್ರವಾಸಿಗ ಇಝಾಕ್ ಗೋಲ್ಡಬರ್ಗ್ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ಡಿ.ಎನ್. ತಿಳಿಸಿದ್ದಾರೆ.
ಪ್ರವಾಸಿಗನನ್ನು 24 ಗಂಟೆಗಳ ಕಾಲ ಆಬ್ಜರವೇಶನ್‌ದಲ್ಲಿ ಇಡಲಾಗಿದೆ. ಪ್ರವಾಸಿಗನ ಬಗ್ಗೆ ವಿದೇಶಿ ರಾಯಬಾರಿ ಕಚೇರಿ ಬೆಂಗಳೂರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಸಂಗಪ್ಪ ಅವರು ಪ್ರವಾಸಿಗನಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net