ಬಾಗಲಕೋಟೆಯ ಅಶಾಂತಿಗೆ ಕಾರಣವಾಗುತ್ತಿರುವ ಆ ಮಸೀದಿಯನ್ನು ತಕ್ಷಣ ಜಿಲ್ಲಾಡಳಿತ ಬಂದ್ ಮಾಡಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ, ನೂರಾರು ಪೊಲೀಸರಿದ್ದಾಗ ಕಲ್ಲು, ಚಪ್ಪಲಿ ಎಸೆತದ ಪ್ರಕರಣ ನಡೆದಿದೆ. ಚಪ್ಪಲಿ ಎಸೆದವರನ್ನು ಬಿಟ್ಟು, ಮೆರವಣಿಗೆಯಲ್ಲಿದ್ದವರ ಮೇಲೆ ಲಾಠಿ ಬೀಸುವ ಕೆಲಸ ಮಾಡಿದ್ದಾರೆ. ರಾಜಕಾರಣಿಗಳು ಹೇಗೆ ಮುಸ್ಲಿಮರನ್ನು ತುಷ್ಟೀಕರಣ ಮಾಡುತ್ತಾರೋ, ಹಾಗೆಯೇ ಎಸ್‌ಪಿ ಅವರೂ ತುಷ್ಟೀಕರಣ ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ದೂರಿದರು.