ರಸಗೊಬ್ಬರಗಳ ಪೂರೈಕೆಯಲ್ಲಿಯೂ ಯಾವುದೇ ಕೊರತೆ ಇಲ್ಲದಂತೆ ಯೂರಿಯಾ, ಡಿಎಪಿ, ಎನ್‌ಪಿಕೆ ಸೇರಿದಂತೆ ಅಗತ್ಯ ಗೊಬ್ಬರಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಲಾಗಿದ್ದು, ಬೇಡಿಕೆಗೆ ಅನುಗುಣವಾಗಿ ಸರಬರಾಜು ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಈಗಾಗಲೇ ಯೂರಿಯಾ 13456 ಮೆ.ಟನ್, ಡಿಎಪಿ 5954 ಮೆ.ಟನ್, ಕಾಂಪ್ಲೆಕ್ಸ್ 14202 ಮೆ.ಟನ್, ಎಂ.ಓ.ಪಿ 3183 ಮೆ.ಟನ್, ಎಸ್.ಎಸ್.ಪಿ 1747 ಮೆ.ಟನ್ ಸೇರಿ ಒಟ್ಟು 38742 ಮೆ.ಟನ್ ದಾಸ್ತಾನು ಲಭ್ಯವಿರುವುದಾಗಿ ತಿಳಿಸಿದರು.