ಮಾಜಿ ಸಚಿವ ಆರ್.ಬಿ. ತಿಮ್ಮಾಪೂರ, ಜಿಲ್ಲಾಧಿಕಾರಿ, ಎಸ್‌ಪಿ ಮಧ್ಯಸ್ಥಿಕೆ ಸಫಲ
ಮುಧೋಳ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿದ್ದ ಹೋರಾಟವು ಇದೀಗ ಸುಖಾಂತ್ಯ ಕಂಡಿದೆ.
ಜಿಲ್ಲಾಧಿಕಾರಿ ಎಂ. ಸಂಗಪ್ಪ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಅವರ ನೇತತ್ವದಲ್ಲಿ ನಡೆದ ಮಾತುಕತೆ ಮತ್ತು ಶಾಸಕ ಆರ್.ಬಿ. ತಿಮ್ಮಾಪೂರ ಅವರ ಸಕಾಲಿಕ ಮಧ್ಯಸ್ಥಿಕೆಯಿಂದಾಗಿ ಪ್ರತಿಭಟನೆ ಮುಕ್ತಾಯಗೊಂಡಿದೆ.
ಪರಿಹಾರಗಳ ವಿವರ
ತಾತ್ಕಾಲಿಕ ಪರಿಹಾರವಾಗಿ ಪ್ರತಿ ಎಕರೆಗೆ 15,000 ರೂ. ಗಳನ್ನು ನೀಡುವ ಕುರಿತು ಮತ್ತು ಶಾಶ್ವತ ಪರಿಹಾರದ ವಿಷಯವಾಗಿ ಸುದೀರ್ಘ ಚರ್ಚೆಗಳು ನಡೆದವು. ಶಾಶ್ವತ ಪರಿಹಾರಕ್ಕೆ ಸಂಬಂಧಿಸಿದಂತೆ ಕರಡು ರಚನಾ ಕಾರ್ಯ ನಡೆಯುತ್ತಿದ್ದು, ಆಡಳಿತ ಮಂಡಳಿಯು ಸರ್ಕಾರದ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ ಎಂದು ರೈತ ಮುಖಂಡ ಸುರೇಶ ಕಿವಡಿ ತಿಳಿಸಿದ್ದಾರೆ.
ಮಧ್ಯಸ್ಥಿಕೆ ಮತ್ತು ಅಭಿನಂದನೆ
ಶುಕ್ರವಾರ ಬೆಳಗ್ಗೆ ಶಾಸಕ ಆರ್.ಬಿ. ತಿಮ್ಮಾಪೂರ ಅವರು ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ನಡೆಸಿದ ಮಾತುಕತೆ, ಸಮಸ್ಯೆಯ ಇತ್ಯರ್ಥಕ್ಕೆ ದಾರಿ ಮಾಡಿಕೊಟ್ಟಿತು. ಈ ಇಡೀ ಪ್ರಕ್ರಿಯೆಯು ಜಿಲ್ಲಾಡಳಿತದ ಸಹಕಾರದೊಂದಿಗೆ ಸುಗಮವಾಗಿ ಮುಕ್ತಾಯಗೊಂಡಿದೆ.
ರೈತರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕ ಆರ್.ಬಿ. ತಿಮ್ಮಾಪೂರ ಅವರಿಗೆ ಹಾಗೂ ಸಂಪೂರ್ಣ ಸಹಕಾರ ನೀಡಿದ ಜಿಲ್ಲಾಡಳಿತಕ್ಕೆ ರೈತ ಮುಖಂಡ ಸುರೇಶ ಕಿವಡಿ ಕತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಸಭೆ ನಿರ್ಧಾರದಂತೆ, ರೈತ ಸಂಘದ ಮುಖಂಡರು ತಮ್ಮ ಹೋರಾಟವನ್ನು ಹಿಂಪಡೆದಿದ್ದಾರೆ. ಎಸಿ ಶ್ವೇತಾ ಬೀಡಿಕರ, ಡಿವೈಎಸ್ಪಿ ಸೈಯದ ರೋಷನ್ ಜಮೀರ, ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಿಕ ಇತರರಿದ್ದರು.