ರೈತರು ರೋಗ ನಿರೋಧಕ ಬಿತ್ತನೆ ಬೀಜ ಬಿತ್ತಿರಿ

ಹುನಗುಂದ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಅಂಟರದಾನಿ ಮತ್ತು ಕೃಷಿ ಸಮಾಜದ ಅಧ್ಯಕ್ಷ ಸಂಜೀವ ಜೋಷಿ, ನಿರ್ದೇಶಕರಾದ ಬಸವರಾಜ ಹೊಸಮನಿ, ಪ್ರಭು ಇದ್ದಲಗಿ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಿದರು.
ಹುನಗುಂದ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಅಂಟರದಾನಿ ಮತ್ತು ಕೃಷಿ ಸಮಾಜದ ಅಧ್ಯಕ್ಷ ಸಂಜೀವ ಜೋಷಿ, ನಿರ್ದೇಶಕರಾದ ಬಸವರಾಜ ಹೊಸಮನಿ, ಪ್ರಭು ಇದ್ದಲಗಿ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸೋಮಲಿಂಗಪ್ಪ ಅಂಟರದಾನಿ ಹೇಳಿಕೆ
  • ಮುಂಗಾರು ಹಂಗಾಮಿಗೆ ಗೊಬ್ಬರ ದಾಸ್ತಾನು
ಹುನಗುಂದ: ಹವಾಮಾನ ಇಲಾಖೆ ಮಾಹಿತಿಯಂತೆ ಮತ್ತು ವಾಡಕೆಗಿಂತ ಮಳೆ ಕಡಿಮೆಯಾಗುವ ಸಂಭವವಿದ್ದು, ರೋಗ ನಿರೋಧಕ ಬೆಳೆಗಳನ್ನು ಬಿತ್ತಿದರೆ ಮಾತ್ರ ಅಲ್ಪ ಮಳೆಗೂ ಬೆಳೆ ಬರಬಹುದೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಅಂಟರದಾನಿ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿಕ ಸಮಾಜ ನೇತೃತ್ವದಲ್ಲಿ ನಡೆಸಿದ ರೈತರಿಗೆ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಿಸಿ ಮಾತನಾಡಿದ ಅವರು, ಈಗಾಗಲೇ ಮುಂಗಾರು ಎರಡು ಮಳೆಗಳು ಆಗದೆ ಬಿತ್ತನೆ ನಡೆಸದೆ ರೈತರು ಆಕಾಶ ನೋಡುತ್ತ ಕುಳಿತಿದ್ದಾರೆ. ಈ ವರ್ಷ ಮಳೆ ಆಶಾದಾಯಕವಾಗಿಲ್ಲದಿದ್ದರೂ, ಇಲಾಖೆ ಬಿತ್ತನೆ ಬೀಜ ಮತ್ತು ಗೊಬ್ಬರ ವಿತರಣೆ ತಡಮಾಡಲಾಗಿದೆ. ರೈತರು ಆತಂಕ ಪಡಬೇಕಿಲ್ಲ. ಮುಂಗಾರು ಹಂಗಾಮಿಗೆ ಬೇಕಾಗುವಷ್ಟು ಇಲಾಖೆ ಬೀಜ ಮತ್ತು ಗೊಬ್ಬರ ದಾಸ್ತಾನು ಮಾಡಿದೆ. ಕೇಂದ್ರ ಸರ್ಕಾರದ ಮುನ್ಸೂಚನೆಯಂತೆ ಶೇ.೪೦ರಷ್ಟು ಮಾತ್ರ ರಸಾಯನಿಕ ಗೊಬ್ಬರ ಬಳಸಬೇಕು, ಶೇ.೬೦ರಷ್ಟು ಗೊಬ್ಬರವನ್ನು ಸಾವಯವದಿಂದ ಗೊಬ್ಬರ ತಯಾರಿಕೆ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸಬೇಕು.
ಡಿಎಪಿ ಮತ್ತು ಯೂರಿಯಾ ರಸಾಯನಿಕ ಗೊಬ್ಬರ ವಷÀ ಕ್ಕಿಂತ ಈಗ ಕಡಿಮೆಯಾಗುವ ಸಾಧ್ಯತೆ ಇದೆ. ಮಳೆ ಕಡಿಮೆಯಾಗುವ ಮನ್ಸೂಚನೆ ಇರುವದರಿಂದ ಇಳಿಜಾರಿಗೆ ಅಡ್ಡಲಾಗಿ ಬಿತ್ತನೆ ನಡೆಸಿ ೪ ಸಾಲಿಗೊಂದರಂತೆ ಮಡಿಕೆ ಸಾಲು ನಿರ್ಮಿಸಿ ತೊಗರಿ, ನೆವಣಿ, ಸಜ್ಜಿ ಮತ್ತು ಸೂರ್ಯಕಾಂತಿ ಬೀಜ ಬಿತ್ತನೆ ಮಾಡಬೇಕೆಂದು ತಿಳಿಸಿದರು.
ಕೃಷಿಕ ಸಮಾಜದ ಅಧ್ಯಕ್ಷ ಸಂಜೀವ ಜೋಶಿ ಮಾತನಾಡಿ, ರೈತರು ಎಫ್‌ಐಡಿಯಿಂದ ನೇರವಾಗಿ ರೈತ ಸಂಪರ್ಕ ಕೇಂದ್ರದಿಂದ ಅಽಕೃತ ಬಿತ್ತನೆ ಬೀಜ ಮತ್ತು ಗೊಬ್ಬರ ಪಡೆಯಬೇಕು. ಖಾಸಗಿ ಅಂಗಡಿಗಳಲ್ಲಿ ಇವುಗಳನ್ನು ಪಡೆದರೆ ಕಡ್ಡಾಯ ರಶೀದಿ ಪಡೆಯಬೇಕು. ತಾಂತ್ರಿಕ ವ್ಯವಸ್ಥೆಯಲ್ಲಿ ಸಾಕಷ್ಟು ಕಂಪನಿಗಳ ಗೊಬ್ಬರಗಳು ಮಾರುಕಟ್ಟೆಗೆ ಬರುವುದರಿಂದ ದರದಲ್ಲಿ ಏರುಪೇರು ಇವೆ. ಆದರೆ ಯಾವುದಕ್ಕೂ ಬಿತ್ತನೆ ಬೀಜ ಮತ್ತು ಗೊಬ್ಬರ ಪಡೆದಲ್ಲಿ ಅಂಗಡಿಯಿಂದ ರಶೀದಿ ಪಡೆಯಬೇಕು ಹಾಗೂ ರೈತ ಸಂಪರ್ಕ ಕೇಂದ್ರದಿಂದ ಬರುವ ಮಾಹಿತಿಯನ್ನು ಪಡೆಯಬೇಕು ಎಂದರು.
ಕೃಷಿಕ ಸಮಾಜದ ಕಾರ್ಯದರ್ಶಿ ಕೃಷ್ಣಾ ಜಾಲಿಹಾಳ, ಜಿಲ್ಲಾಪ್ರತಿನಿಧಿ ಪ್ರಭು ಇದ್ದಲಗಿ, ನಿರ್ದೇಶಕರಾದ ಬಸವರಾಜ ಹೊಸಮನಿ, ಶರಪ್ಪಗೌಡ ಅರಶೀಬಿಡಿ, ಶರಣು ಗೋಲಪ್ಪನವರ, ಮಹೇಶ ಕಟಗೇರಿ, ಆತ್ಮ ಯೋಜನೆ ಸಂಯೋಜಕ ಸಂಗಣ್ಣ ಸಜ್ಜನ, ಅರುಣಕುಮಾರ ಚವ್ಹಾಣ, ಶಂಭಯ್ಯ ಹಿರೇಮಠ, ಶೇಖಣ್ಣ ನಾಗೂರ ಸೇರಿ ರೈತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net