ಕಳೆದ ಮೂರೂ ತಿಂಗಳಿಂದ ಕೃಷ್ಣಾ ನದಿಯು ಸಂಪೂರ್ಣವಾಗಿ ಬತ್ತಿ ಹೋಗಿತ್ತು. ನದಿಯ ಪಾತ್ರದಲ್ಲಿ ನೀರಿಗಿಂತ ಹೆಚ್ಚಾಗಿ ಮರಳು ಮತ್ತು ಕಲ್ಲುಗಳೇ ಎದ್ದು ಕಾಣುತ್ತಿದ್ದವು. ಮಳೆ ಬಾರದೆ, ಬಿತ್ತನೆ ಕಾರ್ಯವನ್ನು ಮಾಡಲಾಗದೆ ಕಂಗಾಲಾಗಿದ್ದ ರೈತರು, ತಮ್ಮ ಜೀವನೋಪಾಯದ ಬಗ್ಗೆ ತೀವ್ರ ಆತಂಕದಲ್ಲಿದ್ದರು. ಜಮೀನುಗಳು ಬಿರುಕು ಬಿಟ್ಟಿದ್ದವು ಮತ್ತು ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಭೀತಿ ಎದುರಾಗಿತ್ತು. ಈಗ ರೈತರು ನಿರಾಳರಾಗಿದ್ದು, ಪ್ರವಾಹ ಸ್ಥಿತಿ ಬರದಿರಲಿ ಎಂದು ಆಶಿಸುತ್ತಿದ್ದಾರೆ.