ಕಬ್ಬಿಗೆ ಬೆಲೆ ನಿಗದಿ ಒತ್ತಾಯಿಸಿ ರೈತರ ಪ್ರತಿಭಟನೆ

 ಪ್ರತಿ ಟನ್ ಕಬ್ಬಿಗೆ 3500 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು ಆಗ್ರಹಿಸಿ ಜಮಖಂಡಿ ಸಮೀಪದ ಜಂಬಗಿ ಬಿ.ಕೆ. ಸೇತುವೆ ಕ್ರಾಸ್‌ನಲ್ಲ್ಲಿ ಕಬ್ಬು ಬೆಳಗಾರರು ಹೋರಾಟ ನಡೆಸಿದರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ರೈತ ಮುಖಂಡ ಬಿ.ಎಸ್. ಸಿಂಧೂರ, ಸುಶೀಲಕುಮಾರ ಬೆಳಗಲಿ ಇತರರಿದ್ದರು.
ಪ್ರತಿ ಟನ್ ಕಬ್ಬಿಗೆ 3500 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು ಆಗ್ರಹಿಸಿ ಜಮಖಂಡಿ ಸಮೀಪದ ಜಂಬಗಿ ಬಿ.ಕೆ. ಸೇತುವೆ ಕ್ರಾಸ್‌ನಲ್ಲ್ಲಿ ಕಬ್ಬು ಬೆಳಗಾರರು ಹೋರಾಟ ನಡೆಸಿದರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ರೈತ ಮುಖಂಡ ಬಿ.ಎಸ್. ಸಿಂಧೂರ, ಸುಶೀಲಕುಮಾರ ಬೆಳಗಲಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಿ ಟನ್ ಕಬ್ಬಿಗೆ 3500 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು.
  • ಹಳೆಯ ಬಾಕಿ ಹಣ ಬಿಡುಗಡೆಗೊಳಿಸಿ
  • ಜಂಬಗಿ ಬಿ.ಕೆ. ಸೇತುವೆ ಹತ್ತಿರದ ಕ್ರಾಸ್‌ದಲ್ಲಿ ಬೃಹತ್ ಪ್ರತಿಭಟನೆ
ಜಮಖಂಡಿ: ಪ್ರತಿ ಟನ್ ಕಬ್ಬಿಗೆ 3500 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು. ಹಳೆಯ ಬಾಕಿ ಹಣ ಬಿಡುಗಡೆಗೊಳಿಸಿದ ನಂತರವೇ ಕಾರ್ಖಾನೆಗಳನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಬೇಕೆಂದು ಆಗ್ರಹಿಸಿ ರೈತರು ಸಮಿಪದ ಜಂಬಗಿ ಬಿ.ಕೆ. ಸೇತುವೆ ಹತ್ತಿರದ ಕ್ರಾಸ್‌ದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘ ಸೇರಿ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಮಠಾಧೀಶರು ನೂರಾರು ರೈತರು ಜಂಟಿಯಾಗಿ ರಸ್ತೆ ಬಂದ್‌ಮಾಡಿ ಪ್ರತಿಭಟನೆ ನಡೆಸಿದರು. ಕಾರ್ಖಾನೆಯ ಮಾಲೀಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ರೈತರು ಹೆಚ್ಚು ಕಬ್ಬು ಬೆಳೆಯುತ್ತಿದ್ದಾರೆ. ಮಹಾರಾಷ್ಟ್ರದಂತೆ ಈ ಭಾಗದ ಕಬ್ಬು ಹೆಚ್ಚು ರಿಕವರಿ ಬರುತ್ತಿದೆ. ಆದ್ದರಿಂದ 3500 ರೂ. ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು. ಮಂಡ್ಯ, ಮೈಸೂರು ಭಾಗದ ಕಬ್ಬು ರಿಕವರಿ ಕಡಿಮೆ ಇದೆ. ಆದರೂ ಅಲ್ಲಿ ಕಬ್ಬಿಗೆ ಉತ್ತಮ ಬೆಲೆ ನೀಡುತ್ತಿರುವುದು ಯಾವ ನ್ಯಾಯ. ಈಗಾಗಲೇ ಮಹಾರಾಷ್ಟ್ರದಲ್ಲಿ 3500 ರೂ. ನಿಗದಿ ಮಾಡಿದ್ದಾರೆ. ಗುಜರಾತದಲ್ಲಿ 3700 ರೂ. ಬೆಲೆ ನಿಗದಿ ಮಾಡಿದ್ದಾರೆ. ಆದ್ದರಿಂದ ಇಲ್ಲಿಯೂ 3500 ರೂ. ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ರೈತ ಮುಖಂಡ ಬಿ.ಎಸ್. ಸಿಂಧೂರ, ಸುಶೀಲಕುಮಾರ ಬೆಳಗಲಿ, ಮುತ್ತಪ್ಪ ಕೋಮಾರ, ಶ್ರೀಶೈಲ ಭೂಮಾರ, ರಾಜು ನಧಾಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net