ಜಮಖಂಡಿ ನಗರದ ತಾಲೂಕಾಡಳಿತ ಸೌಧದ ದ್ವಾರದ ಮುಂದೆ ಕಷ್ಣಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು. ಮುಖಂಡ ಸುರೇಶ ಹಂಚಿನಾಳ, ಮುಖಂಡರಾದ ಗುಡುಸಾಬ ಹೊನವಾಡ, ಯಾಕುಬ ನದ್ಾ, ಸದಾಶಿವ ಕಲೂತಿ ಇತರರಿದ್ದರು.
ವಿವಿಧ ರೈತ ಸಂಘಟನೆಗಳಿಂದ ಕೃಷ್ಣಾ ನದಿಗೆ ನೀರು ಹರಿಸಲು ಆಗ್ರಹ
ಉಸ್ತುವಾರಿ ಸಚಿವ, ಶಾಸಕರ ನಿರ್ಲಕ್ಷೃಕ್ಕೆ ಅಸಮಾಧಾನ
ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ
ಜಮಖಂಡಿ : ತಾಲೂಕಿನ ಕಷ್ಣಾ ನದಿಗೆ ತಕ್ಷಣವೇ ನೀರು ಹರಿಸುವಂತೆ ಒತ್ತಾಯಿಸಿ ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ನದಿ ತೀರದ ರೈತರು ಸೋಮವಾರ ತಾಲೂಕಾಡಳಿತ ಸೌಧದ ಮುಂಭಾಗದಲ್ಲಿ ಬಹತ್ ಪ್ರತಿಭಟನೆ ನಡೆಸಿದರು. ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು.
ಮುಖಂಡ ಸುರೇಶ ಹಂಚಿನಾಳ ಮಾತನಾಡಿ, ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಸ್ಥಳೀಯ ಶಾಸಕ ಜಗದೀಶ ಗುಡಗುಂಟಿ ಅವರು ಹೋರಾಟಕ್ಕೆ ಮುಂದಾಗಿಲ್ಲವೇಕೆ? ಎಂದು ಪ್ರಶ್ನಿಸಿದರು. ಅವರು ತಮ್ಮ ಕರ್ತವ್ಯ ಪ್ರಜ್ಞೆ ತೋರಿಸಿ ನೀರು ಬಿಡಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ರಾಜು ನದಾಫ್ ಮಾತನಾಡಿ, ಕಷ್ಣಾ ನದಿ ಕಳೆದ ಒಂದೂವರೆ ತಿಂಗಳಿಂದ ಬತ್ತಿಹೋಗಿದ್ದು, ಜನಪ್ರತಿನಿಧಿಗಳು ರೈತರ ಸಮಸ್ಯೆ ಪರಿಹರಿಸುವಲ್ಲಿ ವಿಲರಾಗಿದ್ದಾರೆ ಎಂದು ಆರೋಪಿಸಿದರು. ಶಾಸಕರು ಹೋರಾಟಕ್ಕೆ ಇಳಿದರೆ ಎಲ್ಲ ರೈತರೂ ಬೆಂಬಲ ನೀಡಲು ಸಿದ್ಧವಿರುವುದಾಗಿ ಹೇಳಿದರು.
ನದಿ ಬತ್ತಿಹೋಗಿರುವುದರಿಂದ ಪಶುಗಳಿಗೆ ಕಲುಷಿತ ನೀರು ಕುಡಿಯಬೇಕಾದ ಸ್ಥಿತಿ ಉಂಟಾಗಿ ರೋಗಗಳ ಭೀತಿ ಹೆಚ್ಚಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಕೇವಲ ಮುಧೋಳ ತಾಲೂಕಿಗೆ ಮಾತ್ರ ಸೀಮಿತವಾಗಿದ್ದಾರೆ. ಜಮಖಂಡಿ ಭಾಗದ ರೈತರು ಅನುಭವಿಸುತ್ತಿರುವ ನೋವು ಅವರಿಗೆ ಕಾಣಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಹಿಪ್ಪರಗಿ ಬ್ಯಾರೇಜ್ ನಿರ್ಮಾಣದಿಂದ ನೀರಿನ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಿರೀಕ್ಷೆ ಇದ್ದರೂ, ಮುಂಜಾಗ್ರತೆ ಕ್ರಮಗಳ ಕೊರತೆಯಿಂದ ಇದೀಗ ಪರಿಸ್ಥಿತಿ ಗಂಭೀರವಾಗಿದೆ. ನಾಲ್ಕು ತಿಂಗಳ ಹಿಂದೆಯೇ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ರೈತರು ಆರೋಪಿಸಿದರು.
ಕಷ್ಣಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಮಂಗಳವಾರ ಬೆಳಗ್ಗೆ 10 ಗಂಟೆಗೆ ಆಲಗೂರ ಗೌಡರ ಗಡ್ಡೆ ಹತ್ತಿರ ವಿಜಯಪುರ ಧಾರವಾಡ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾ ನಿರತ ರೈತರು ತಿಳಿಸಿದರು.
ಮುಖಂಡರಾದ ಗುಡುಸಾಬ ಹೊನವಾಡ, ಯಾಕುಬ ನದಾಫ್, ಸದಾಶಿವ ಕಲೂತಿ ಮಾತನಾಡಿದರು. ಶ್ರೀಶೈಲ ಭೂಮಾರ, ಕಲ್ಲಪ್ಪ ಬಿರಾದಾರ, ಪೈಗಂಬರ ಮೋಮಿನ, ಧರೆಪ್ಪ ದಾನಗೌಡ, ಧರೆಪ್ಪ ಎಣ್ಣಿ, ಮಹೇಶ ತೇಲಿ, ಶಿವಪ್ಪ ತುಬಚಿ, ಸಿದ್ದಪ್ಪ ಬನಜನವರ ಸೇರಿ ನೂರಾರು ರೈತರು ಇದ್ದರು.