ಸದ್ಯ ಹಿಂಗಾರು ಹಂಗಾಮಿನ ಕಡಲೆ, ಜೋಳ, ಗೋಽ ರಾಶಿ ಭರಪೂರ ನಡೆದಿದೆ. ಮಂಗಳವಾರ ಸಂಜೆ ಬೀಸಿದ ಭಾರಿ ಗಾಳಿ, ಮಳೆ ಮತ್ತು ಅಪಾರ ಪ್ರಮಾಣದ ಆಲಿಕಲ್ಲು ಬಿದ್ದು ಬೆಳೆಗಳು ಸಂಪೂರ್ಣ ಹಾಳಾಗಿವೆ. ಜಾನುವಾರುಗಳಿಗೆ ವರ್ಷಗಟ್ಟಲೇ ಮೇಯಿಸುವ ಹೊಟ್ಟು ಮತ್ತು ಜೋಳದ ಕಣಿಕೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಈ ಬಗ್ಗೆ ಸರ್ಕಾರ ಕೂಡಲೇ ಗಮನ ಹರಿಸಬೇಕು. ಬೆಳೆ ಹಾಗೂ ಮೇವು ಹಾನಿಯ ಬಗ್ಗೆ ತಕ್ಷಣವೇ ಸರ್ವೆ ಮಾಡಿಸಿ, ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಕೊಡಬೇಕು. ಹಾಗೂ ಜಾನುವಾರುಗಳಿಗೆ ಮೇವಿನ ಪೂರೈಕೆ ಮಾಡಬೇಕು.