ಬೇಸಿಗೆ ಕಾರಣ ಜನ ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಜಿಎಲ್‌ಬಿಸಿ ಕಾಲುವೆ ಮೂಲಕ ಪ್ರತಿದಿನ 24 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದ್ದು, ನೀರು ಗ್ರಾಮದ ಕಾಲುವೆ ತಲುಪುತ್ತಿದ್ದಂತೆ ಕುಡಚಿ, ಹಾರೂಗೇರಿ ಭಾಗದ ರೈತರು ಇಲ್ಲಿನ ಜಮಖಂಡಿ ಕಾಲುವೆಯ ನಾಲ್ಕೂ ಗೇಟ್‌ಗಳನ್ನು ಬಂದ್ ಮಾಡಿ, ತಮ್ಮ ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುವಂತೆ ನೋಡಿಕೊಂಡಿದ್ದರು.