ಇಲಾಖೆ ಚಿರತೆ ಕಂಡ ರೈತ ‘ಕಂಗಾಲು’

 ನಾಗರಾಳ ಗ್ರಾಮದಲ್ಲಿ ಚಿರತೆ ಸೆರೆ ಹಿಡಿಯಲು ಅಳವಡಿಸಿರುವ ಬೋನು.
ನಾಗರಾಳ ಗ್ರಾಮದಲ್ಲಿ ಚಿರತೆ ಸೆರೆ ಹಿಡಿಯಲು ಅಳವಡಿಸಿರುವ ಬೋನು.
Published on

ಪ್ರಮುಖ ಮುಖ್ಯಾಂಶಗಳು

  • ನಾಗರಾಳ ಗ್ರಾಮದ ತೋಟದಲ್ಲಿ ಕಳೆದ ಶುಕ್ರವಾರ ನಡೆದಿದ್ದ ಘಟನೆ
  • ಸೆರೆ ಹಿಡಿಯಲು ಬೋನು ಇಟ್ಟ ಅರಣ್ಯ ಇಲಾಖೆ
  • ಕೂಗಳತೆಯಲ್ಲಿದ್ದ ಚಿರತೆ ದಾಳಿಯಿಂದ ತಪ್ಪಿಸಿಕ್ಕೊಂಡು ‘ಸಾವಿನ ದವಡೆಯಿಂದ ಪಾರಾಗಿ ಮರುಹುಟ್ಟು ಪಡೆದಿದ್ದೇನೆ.
ಮಹಾಲಿಂಗಪುರ: ಸಮೀಪದ ನಾಗರಾಳ ಗ್ರಾಮದ ತೋಟದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕೂಗಳತೆಯಲ್ಲಿದ್ದ ಚಿರತೆ ದಾಳಿಯಿಂದ ತಪ್ಪಿಸಿಕ್ಕೊಂಡು ‘ಸಾವಿನ ದವಡೆಯಿಂದ ಪಾರಾಗಿ ಮರುಹುಟ್ಟು ಪಡೆದಿದ್ದೇನೆ’ ಎಂದು ರೈತ ಸಿದ್ದಪ್ಪ ಕಲ್ಲಪ್ಪ ಮಾಯಪ್ಪಗೋಳ ತಿಳಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಕ್ರವಾರ ಸಂಜೆ 4-15 ವೇಳೆಗೆ ಎಂದಿನಂತೆ ನಾನು ವೀರಭದ್ರೇಶ್ವರ ದೇವಸ್ಥಾನ ಹತ್ತಿರದ ತೋಟದಲ್ಲಿ ದನ-ಕರುಗಳಿಗೆ ಮೇವು ತರಲು ಹೋಗಿದ್ದೆ. ಸಮೀಪದಲ್ಲಿ 4-5 ಅಡಿ ಎತ್ತರದ ಚಿರತೆ ನಿಂತಿದೆ. ಗಾಬರಿ ಬಿದ್ದು ಓಡಿ ಹೋದೆ. ಬಳಿಕ 500 ಮೀಟರ್ ಓಡಿದ ಬಳಿಕ ರಸ್ತೆ ತಲುಪಿ ಸಾರ್ವಜನಿಕರಿಗೆ ತಿಳಿಸಿದೆ. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಕಾರ್ಯಾಚರಣೆ ಆರಂಭವಾಗಿದೆ ಎಂದು ತಿಳಿಸಿದರು.
ಶುಕ್ರವಾರ ಚಿರತೆ ಪ್ರತ್ಯಕ್ಷವಾದ ಬಳಿಕ 3-4 ದಿನಗಳಿಂದ ಮತ್ತೆ ಕಾಣಿಸಿಕೊಂಡಿಲ್ಲ. ಹೆಜ್ಜೆಯ ಗುರುತುಗಳ ಪರಿಶೀಲನೆಯಂತೆ ಗಂಡು ಚಿರತೆ ಎಂದು ಅಂದಾಜಿಸಲಾಗಿದೆ. 15 ದಿನಗಳ ಆಸುಪಾಸಿನಲ್ಲಿ ಚಿರತೆ ಈ ಭಾಗಕ್ಕೆ ಲಗ್ಗೆ ಇಟ್ಟಿರಬಹುದು. ನಾಯಿ, ಮೇಕೆಗಳ ದಾಳಿ ಮಾಡಿರುವ ಶಂಕೆ ಇದೆ. ಬೋನು ಇರಿಸಿ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಸಂಜೆ ಹಾಗೂ ಬೆಳಗ್ಗೆ ಬೋನಿನ ಸುತ್ತಮುತ್ತ ಸಾರ್ವಜನಿಕರು ಓಡಾಡಬಾರದು ಅಂತ ಅರಣ್ಯ ಇಲಾಖೆ ಮನವಿ ಮಾಡಿದೆ.
"

ಶುಕ್ರವಾರ ಸಂಜೆಯಿಂದ ಕಾರ್ಯಾಚರಣೆ ನಡೆದರೂ ಚಿರತೆ ಸುಳಿವು ಸಿಕ್ಕಿಲ್ಲ. 8-9 ವರ್ಷದ ಗಂಡು ಚಿರತೆ ಇರಬಹುದು. ಆಹಾರಕ್ಕಾಗಿ 60 ರಿಂದ 70 ಮೀಟರ್ ವರೆಗೆ ಸಂಚಾರ ಮಾಡುತ್ತದೆ. ಅಲ್ಲಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಸಾರ್ವಜನಿಕರು ಚಿರತೆ ಹಾಗೂ ಅದರ ಇರುವಿಕೆ ಕುರುಹು ಕಂಡು ಬಂದಲ್ಲಿ ತಕ್ಷಣಕ್ಕೆ ಮಾಹಿತಿ ನೀಡಬೇಕು. ಸಾರ್ವಜನಿಕರು ವಿನಾಕಾರಣ ಭಯ ಪಡುವ ಅಗತ್ಯವಿಲ್ಲ. ಅರಣ್ಯ ಸಿಬ್ಬಂದಿ ಅಹೋರಾತ್ರಿ ತಮ್ಮ ಜೊತೆ ಇರುತ್ತಾರೆ.
-ಆರ್.ಎಚ್. ಡೋಣಿ ಅರಣ್ಯಾಧಿಕಾರಿ ಮುಧೋಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net