ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಿ

ಮುಧೋಳ ನಗರದ ರನ್ನ ಗ್ರಂಥಾಲಯ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಮುಧೋಳ ಮತ್ತು ಜಮಖಂಡಿ ತಾಲೂಕಿನ ಶೌರ್ಯ ತಂಡದ ಕೋರ್ ಕಮಿಟಿ ಸಭೆಯನ್ನು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ನಿರ್ದೇಶಕ ಚೆನ್ನಕೇಶವ ಉದ್ಘಾಟಿಸಿದರು. ಕಿಶೋರ್ ಕುಮಾರ್, ಕ್ಷೇತ್ರ ಯೋಜನಾಽಕಾರಿಗಳಾದ ರಾಜು ಕೆ., ನಿಂಗಪ್ಪ ಎನ್. ಇತರರಿದ್ದರು.
ಮುಧೋಳ ನಗರದ ರನ್ನ ಗ್ರಂಥಾಲಯ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಮುಧೋಳ ಮತ್ತು ಜಮಖಂಡಿ ತಾಲೂಕಿನ ಶೌರ್ಯ ತಂಡದ ಕೋರ್ ಕಮಿಟಿ ಸಭೆಯನ್ನು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ನಿರ್ದೇಶಕ ಚೆನ್ನಕೇಶವ ಉದ್ಘಾಟಿಸಿದರು. ಕಿಶೋರ್ ಕುಮಾರ್, ಕ್ಷೇತ್ರ ಯೋಜನಾಽಕಾರಿಗಳಾದ ರಾಜು ಕೆ., ನಿಂಗಪ್ಪ ಎನ್. ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ನಿರ್ದೇಶಕ ಚೆನ್ನಕೇಶವ ಹೇಳಿಕೆ
  • ವಿಪತ್ತು ನಿರ್ವಹಣೆಗೆ ಶೌರ್ಯ ತಂಡ ಸನ್ನದ್ಧ
ಮುಧೋಳ: ಮಳೆಗಾಲದಲ್ಲಿ ಸಂಭವಿಸಬಹುದಾದ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ತಡೆಗಟ್ಟಲು `ಶೌರ್ಯ' ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಸದಾ ಸಿದ್ಧರಾಗಿರಬೇಕು ಎಂದು ಜಿಲ್ಲಾ ನಿರ್ದೇಶಕ ಚೆನ್ನಕೇಶವ ಕರೆ ನೀಡಿದರು.
ನಗರದ ರನ್ನ ಗ್ರಂಥಾಲಯ ಸಭಾಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮುಧೋಳ ಮತ್ತು ಜಮಖಂಡಿ ತಾಲೂಕಿನ ಶೌರ್ಯ ತಂಡದ ಕೋರ್ ಕಮಿಟಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಧೋಳದಲ್ಲಿ 90 ಮತ್ತು ಜಮಖಂಡಿಯಲ್ಲಿ 95 ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದು, ಮಳೆಗಾಲದ ಅವಘಡಗಳನ್ನು ನಿರ್ವಹಿಸುವ ಕುರಿತು ತರಬೇತಿ ನೀಡಲಾಗಿದೆ. ಡಾ. ವೀರೇಂದ್ರ ಹೆಗ್ಗಡೆಯವರ ಕಲ್ಪನೆ ಮತ್ತು ಹೇಮಾವತಿ ಅಮ್ಮನವರ ಆಶಯದಂತೆ ಕಳೆದ ಐದು ವರ್ಷಗಳಿಂದ ಈ ತಂಡ ಸೇವೆ ಸಲ್ಲಿಸುತ್ತಿದೆ. ತಾಲೂಕು ಆಡಳಿತ ಮತ್ತು ಎನ್‌ಡಿಆರ್‌ಎಫ್ ನಿಂದ ತರಬೇತಿ ಪಡೆದ ಈ ತಂಡ ರಾಜ್ಯದ 91 ತಾಲೂಕುಗಳಲ್ಲಿ 10,470 ಸ್ವಯಂಸೇವಕರ ಮೂಲಕ ವಿಪತ್ತು ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದೆ. ತುರ್ತು ಪರಿಸ್ಥಿತಿಗಳಿಗಾಗಿ ಲೈಫ್ ಜಾಕೆಟ್, ಸೆಪ್ಟಿ ಹೆಲ್ಮೆಟ್, ಚೈನ್ ಶೊ, ಸ್ಟçಕ್ಚರ್, ರೋಪ್, ಮರ ಕೊಯ್ಯುವ ಯಂತ್ರ ಪರಿಕರಗಳನ್ನು ನೀಡಿದ್ದು ಅಗತ್ಯವಾಗಿ ಬಳಸಿಕೊಳ್ಳುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.
ಯಾವುದೇ ಅವಘಡಗಳು ಸಂಭವಿಸಿದಾಗ ಪೊಲೀಸ್, ಅಗ್ನಿಶಾಮಕ, ಅರಣ್ಯ ಮತ್ತು ವಿದ್ಯುತ್ ಇಲಾಖೆಗಳ ಮಾರ್ಗದರ್ಶನದೊಂದಿಗೆ ಕಾರ್ಯಾಚರಣೆ ನಡೆಸುವಂತೆ ಸ್ವಯಂ ಸೇವಕರಿಗೆ ಸೂಚಿಸಲಾಯಿತು. ಪರಿಸರ ಸಂರಕ್ಷಣೆಗಾಗಿ ಸಾಮಾಜಿಕ ಅರಣ್ಯೀಕರಣ ಹಾಗೂ ಪ್ರಾಣಿ-ಪಕ್ಷಿಗಳಿಗೆ 'ಫ್ರೂಟ್ ಜೋನ್' ಮೂಲಕ ಆಹಾರ ಒದಗಿಸುವ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಯೋಜನಾಧಿಕಾರಿ ಕಿಶೋರ್ ಕುಮಾರ್, ಕ್ಷೇತ್ರ ಯೋಜನಾಧಿಕಾರಿಗಳಾದ ರಾಜು ಕೆ., ನಿಂಗಪ್ಪ ಎನ್. ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net