ಅತಿಯಾದ ಮೊಬೈಲ್ ಬಳಕೆ ಮನೋವಿಕಾಸಕ್ಕೆ ಮಾರಕ

ಗುಳೇದಗುಡ್ಡದ ತೋಗುಣಶಿ ಕ್ರಾಸ್ ಹತ್ತಿರದ ಬಿವಿವಿಎಸ್ ಸಂಘದ ಬಸವೇಶ್ವರ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಾರ್ಷಿಕ ಸ್ನೇಹ ಸಮ್ಮೇಳನ ಕಲಾಸಿಂಚನವನ್ನು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ ವಿಶ್ರಾಂತ ಉಪ ಕುಲಪತಿ ಮೀನಾ ಚಂದಾವರಕರ ಉದ್ಘಾಟಿಸಿದರು. ಪ್ರಾಚಾರ್ಯ ರಾಜಶೇಖರ ಬಿಂಗೊಳ್ಳಿ, ಸುರೇಶ ಹೆಗಡೆ ಇದ್ದಾರೆ.

Published on

ಪ್ರಮುಖ ಮುಖ್ಯಾಂಶಗಳು

  • ವಿಶ್ರಾಂತ ಉಪಕುಲಪತಿ ಮೀನಾ ಚಂದಾವರಕರ ಅಭಿಮತ
  • ವಾರ್ಷಿಕ ಸ್ನೇಹ ಸಮ್ಮೇಳನ ಕಲಾಸಿಂಚನ ಆಯೋಜನೆ
  • ಡಿಜಿಟಲ್ ಯುಗದಲ್ಲಿ ಮೊಬೈಲ್‌ನ ಅತಿಯಾದ ಅವಲಂಬನೆ ಮಕ್ಕಳ ಮನೋವಿಕಾಸಕ್ಕೆ ಅಡ್ಡಿಯಾಗುತ್ತಿದೆ
ಗುಳೇದಗುಡ್ಡ: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್‌ನ ಅತಿಯಾದ ಅವಲಂಬನೆ ಮಕ್ಕಳ ಮನೋವಿಕಾಸಕ್ಕೆ ಅಡ್ಡಿಯಾಗುತ್ತಿದೆ. ಹಿಂದೆ ಗುರುಕುಲದಲ್ಲಿ 64 ಕಲೆಗಳನ್ನು ಕಲಿಸುತ್ತಿದ್ದರು. ಇಂದು ಮಗುವನ್ನು ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿವಿ ವಿಶ್ರಾಂತ ಉಪ ಕುಲಪತಿ ಮೀನಾ ಚಂದಾವರಕರ ಹೇಳಿದರು.
ತೋಗುಣಶಿ ಕ್ರಾಸ್ ಹತ್ತಿರದ ಬಿವಿವಿಎಸ್ ಸಂಘದ ಬಸವೇಶ್ವರ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ‘ಕಲಾಸಿಂಚನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ಒತ್ತಡವಿಲ್ಲದೇ ನಗುನಗುತ್ತ ಕಲಿಯಬೇಕು. ಪ್ರತಿಯೊಂದು ಮಗು ಓದಿನಲ್ಲೇ ನೈಪುಣ್ಯತೆ ಇರಬೇಕೆಂದಿಲ್ಲ. ಕಲೆ, ಕ್ರೀಡೆಯಲ್ಲಿ ಕ್ರಿಯಾಶೀಲತೆ ಹೊಂದಿರಬೇಕು. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ ಅಗತ್ಯ. ಶಿಕ್ಷಣದೊಂದಿಗೆ ಕೌಶಲವಿರಬೇಕು. ಈ ನಿಟ್ಟಿನಲ್ಲಿ ಶಿಕ್ಷಕರಷ್ಟೆ ಪಾಲಕರು ಜವಾಬ್ದಾರಿ ಹೊಂದಿದ್ದಾರೆ ಎಂದು ತಿಳಿಸಿದರು.
ಬಾಗಲಕೋಟೆ ಬಿಪ್ಸ್ ಸ್ಕೂಲ್‌ನ ಪ್ರಾಚಾರ್ಯ ಸುರೇಶ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ್ರಾಚಾರ್ಯ ರಾಜಶೇಖರ ಬಿಂಗೊಳ್ಳಿ, ಶಿಕ್ಷಕರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net