ಬಾಗಲಕೋಟೆಯಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗ ಯೋಜನೆ ಅಡಿ 21 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಶಾಸಕ ಉಮೇಶ ಮೇಟಿ ವಿತರಿಸಿದರು. ನಿಗಮದ ಜಿಲ್ಲಾ ವ್ಯವಸ್ಥಾಪಕ ಜೀವನ್ ಪ್ರಸಾದ್, ತಾಲೂಕು ಸಹಾಯಕ ಅಧಿಕಾರಿ ರಂಜಾನಬಿ ವಾಲಿಕಾರ ಮತ್ತಿತರರಿದ್ದರು.
ಬಾಗಲಕೋಟೆ : ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಹೊಲಿಗೆ ಯಂತ್ರಗಳು ಸಹಕಾರಿಯಾಗಲಿವೆ ಎಂದು ಶಾಸಕ ಉಮೇಶ ಮೇಟಿ ಹೇಳಿದರು.
ನವನಗರದ ತಮ್ಮ ಶಾಸಕರ ಕಚೇರಿಯಲ್ಲಿ ಸೋಮವಾರ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2024-25ನೇ ಸಾಲಿನ ಸ್ವಯಂ ಉದ್ಯೋಗ ಯೋಜನೆಯಡಿ 21 ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸಿ ಮಾತನಾಡಿದರು.
ಮಹಿಳೆಯರು ಕುಟುಂಬದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಹೊಲಿಗೆ ತರಬೇತಿ ಹಾಗೂ ಯಂತ್ರಗಳ ನೆರವಿನಿಂದ ಸ್ವಂತ ಉದ್ಯೋಗ ಆರಂಭಿಸಿ ಆದಾಯ ಗಳಿಸಬಹುದಾಗಿದೆ ಎಂದರು.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಜೀವನ್ ಪ್ರಸಾದ್, ತಾಲೂಕು ಸಹಾಯಕ ಅಭಿವೃದ್ಧಿ ಅಧಿಕಾರಿ ರಂಜಾನಬಿ ವಾಲಿಕಾರ, ಮುಖಂಡರಾದ ಎಸ್.ಎನ್. ರಾಂಪುರ, ದ್ಯಾಮಣ್ಣ ಗಾಳಿ, ಸಂಗಣ್ಣ ಹಂಡಿ ಮತ್ತಿತರರು ಇದ್ದರು.