ಪ್ರತಿಯೊಬ್ಬರು ಸಸಿಗಳನ್ನು ಬೆಳೆಸುವ ಕಾರ್ಯ ಕೈಗೊಳ್ಳಿ

 ಮಹಾಲಿಂಗಪುರದ ಪಟ್ಟಣದ 7ನೇ ವಾರ್ಡ್ ಉದ್ಯಾನವನದಲ್ಲಿ ಪುರಸಭೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡಲಾಯಿತು. ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ, ಅಧಿಕಾರಿ ಎಸ್.ಎನ್.ಪಾಟೀಲ, ಪಿ.ವೈ.ಸೊನ್ನದ ಇತರರಿದ್ದರು.
ಮಹಾಲಿಂಗಪುರದ ಪಟ್ಟಣದ 7ನೇ ವಾರ್ಡ್ ಉದ್ಯಾನವನದಲ್ಲಿ ಪುರಸಭೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡಲಾಯಿತು. ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ, ಅಧಿಕಾರಿ ಎಸ್.ಎನ್.ಪಾಟೀಲ, ಪಿ.ವೈ.ಸೊನ್ನದ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಾಮದೇವ ಲಮಾಣಿ ಹೇಳಿಕೆ
  • ವಿಶ್ವ ಪರಿಸರ ದಿನಾಚರಣೆ
  • ಉತ್ತಮ ಆರೋಗ್ಯ ಮತ್ತು ಸುಖೀ ಜೀವನಕ್ಕೆ ಪರಿಸರ ಸಂರಕ್ಷಣೆ ಅತ್ಯವಶ್ಯಕ
ಮಹಾಲಿಂಗಪುರ: ಉತ್ತಮ ಆರೋಗ್ಯ ಮತ್ತು ಸುಖೀ ಜೀವನಕ್ಕೆ ಪರಿಸರ ಸಂರಕ್ಷಣೆ ಅತ್ಯವಶ್ಯಕ ಎಂದು ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ ಹೇಳಿದರು.
ಪಟ್ಟಣದ 7ನೇ ವಾರ್ಡ್ ಉದ್ಯಾನವನದಲ್ಲಿ ಪುರಸಭೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಹಾಗೂ ಪರಿಸರ ಜಾಗತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರ ಮಾಲಿನ್ಯ ಹಾಗೂ ಹವಾಮಾನ ವೈಪರೀತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದರು.
ಪುರಸಭೆ ಅಧಿಕಾರಿ ಎಸ್.ಎಂ. ಪಾಟೀಲ ಮಾತನಾಡಿ, ನಗರ ಪ್ರದೇಶಗಳಲ್ಲಿ ಹಸಿರು ವಲಯ ಕಡಿಮೆಯಾಗುತ್ತಿರುವುದನ್ನು ಗಮನಿಸಿ, ಮನೆ, ಶಾಲೆ ಹಾಗೂ ಕಚೇರಿ ಆವರಣದಲ್ಲಿ ಗಿಡಗಳನ್ನು ಬೆಳೆಸುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.
ರವಿ ಹಲಸಪ್ಪಗೋಳ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಪ್ರತಿದಿನದ ಜಾಗತಿಯ ಅಗತ್ಯವಿದ್ದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ನೀರು ಉಳಿಸುವುದು ಮತ್ತು ಸ್ವಚ್ಛತೆಯನ್ನು ಕಾಪಾಡುವುದು ಮುಖ್ಯ ಎಂದು ಹೇಳಿದರು.
ಪಿ.ವೈ. ಸೊನ್ನದ, ಎಂ.ಎಂ.ಮುಗಳಖೋಡ, ಸಿ.ಎಸ್.ಮಠಪತಿ, ರಾಜು ಹೂಗಾರ, ಮನೋಜ ಹಂಚಾಟೆ, ಸುನೀಲ ಬಬಲೇಶ್ವರ, ಎ.ಆರ್.ಸಣ್ಣಕ್ಕಿ, ಪಿ.ಡಿ.ನಾಗನೂರ, ವಿ.ಸಿ.ಹವಾಲ್ದಾರ, ಮಹಾಲಿಂಗ ಗಸ್ತಿ, ರಾಮು ಮಾಂಗ, ರಾಜೇಶ್ವರಿ ಸೋರಗಾಂವಿ, ಪ್ರೀತಿ ಹುಲಕುಂದ, ಮಂಜುಳಾ ಬಂಡಿವಡ್ಡರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net