ಹಂಗಾಮು ಮುಗಿದರೂ ತೀರದ ಕಬ್ಬಿನ ಬಾಕಿ !

ಕಬ್ಬು ನುರಿಸಿದ ೧೪ ಸಕ್ಕರೆ ಕಾರ್ಖಾನೆಗಳು
ಕಬ್ಬು ನುರಿಸಿದ ೧೪ ಸಕ್ಕರೆ ಕಾರ್ಖಾನೆಗಳು
Published on
ಅಶೋಕ ಶೆಟ್ಟರ, ಬಾಗಲಕೋಟೆ:
ಜಿಲ್ಲೆಯಲ್ಲಿ ೨೦೨೫-೨೬ನೇ ಸಾಲಿನಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಕ್ರಷಿಂಗ್ ಆಗಿದ್ದು, ಒಬ್ಬು ಪೂರೈಕೆ ಮಾಡಿದ ರೈತರಿಗೆ ಇನ್ನೂ ೯೧೧ ಕೋಟಿ ರೂ. ಹಣ ಪಾವತಿಸುವುದನ್ನು ಬಾಕಿ ಉಳಿಸಿಕೊಂಡಿವೆ.
ಪ್ರಸಕ್ತ ಹಂಗಾಮಿನಲ್ಲಿ ಜಿಲ್ಲೆಯಲ್ಲಿ ೧೪ ಸಕ್ಕರೆ ಕಾರ್ಖಾನೆಗಳು ಸೇರಿ ಒಟ್ಟು ೧,೬೭,೦೯,೫೫೬ ಮೆಟ್ರಿಕ್ ಟನ್ ಕಬ್ಬು ನುರಿಸಿವೆ. ಇದರಿಂದ ರೈತರಿಗೆ ಒಟ್ಟು ೬೯೪೮.೬೬ ಕೋಟಿ ರೂ. ಪಾವತಿಸಬೇಕಿದ್ದು, ಈ ಪೈಕಿ ಇನ್ನೂ ೯೧೧ ಕೋಟಿ ರೂ. ಪಾವತಿಸಬೇಕಾಗಿದೆ.
ಇದರ ಜೊತೆಗೆ ಸರ್ಕಾರ ಘೋಷಣೆ ಮಾಡಿದ್ದ ಒಂದು ಮೆ.ಟನ್.ಗೆ ೫೦ ರೂ. ಸರ್ಕಾರ ಮತ್ತು ೫೦ ರೂ. ಕಾರ್ಖಾನೆಗಳು ಪಾವತಿಸಬೇಕು ಎನ್ನುವ ಆದೇಶದಂತೆ ಜಿಲ್ಲೆಯಲ್ಲಿ ಸರ್ಕಾರದಿಂದ ಮೊದಲ ಕಂತಿನಲ್ಲಿ ೬೯ ಕೋಟಿ ರೂ. ಬಿಡುಗಡೆ ಆಗಿದ್ದು, ಜಿಲ್ಲಾಡಳಿತದ ಮೂಲಕ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ತಮ್ಮದು ೫೦ ರೂ. ಸೇರಿಸಿ ಪಾವತಿಸುವಂತೆ ಹಣ ಬಿಡುಗಡೆ ಮಾಡಲಾಗಿತ್ತು. ಸದ್ಯ ಸರ್ಕಾರ ಮತ್ತೆ ೧೬.೮೦ ಕೋಟಿ ರೂ.ಗಳನ್ನು ಜಿಲ್ಲಾಽಕಾರಿಗಳಿಗೆ ಬಿಡುಗಡೆ ಮಾಡಿದ್ದು, ಇದೀಗ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಮೇ ೬ ರಂದು ಆ ಹಣವನ್ನು ಕಾರ್ಖಾನೆಗಳಿಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಅಽಕಾರಿಗಳು ತಿಳಿಸಿದ್ದಾರೆ. ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಮಾತ್ರ ಸರ್ಕಾರದ ಮತ್ತು ತಮ್ಮ ಪಾಲಿನದ್ದು ಸೇರಿ ಒಟ್ಟು ೧೦೦ ರೂ. ಪಾವತಿಸಿದ್ದು, ಉಳಿದ ಕಾರ್ಖಾನೆಗಳು ಸರ್ಕಾರದ ೫೦ ರೂ. ಪಾವತಿಸಿದ್ದು, ತಮ್ಮ ಪಾಲಿನ ೫೦ ರೂ.ಗಳನ್ನು ರೈತರಿಗೆ ಖಾತೆಗೆ ಜಮಾ ಮಾಡಬೇಕಿದೆ. ಸದ್ಯ ಪಾವತಿಸಬೇಕಾದ ಹಣವನ್ನು ಕೊಟ್ಟ ಬಳಿಕ ಅಂತಿಮವಾಗಿ ೫೦ ರೂ. ಗಳನ್ನು ರೈತರಿಗೆ ಕೊಡುವುದಾಗಿ ಅಽಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದರಲ್ಲಿ ಜಿಲ್ಲೆಯ ಒಂದು ಕಾರ್ಖಾನೆ ಮಾತ್ರ ಸರ್ಕಾರ ನೀಡಿದ ಹಣವನ್ನು ಸಹ ಇನ್ನೂ ರೈತರಿಗೆ ಪಾವತಿಸಲಿಲ್ಲ ಎಂದು ತಿಳಿದು ಬಂದಿದೆ.
ಇನ್ನು ಕಾರ್ಖಾನೆಗಳ ಪೈಕಿ ಗೋಧಾವರಿ ಸಕ್ಕರೆ ಕಾರ್ಖಾನೆ ೨೫,೧೮,೮೦೫ ಮೆ.ಟನ್ ಕಬ್ಬು ನುರಿಸಿದ್ದು, ಇದು ಕಾರ್ಖಾನೆಯೊಂದು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಬ್ಬು ನುರಿಸಿದ್ದು, ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಅಽಕಾರಿಗಳು ಹೇಳುತ್ತಾರೆ. ಜಿಲ್ಲೆಯಲ್ಲಿ ಐಸಿಪಿಎಲ್ ಕಾರ್ಖಾನೆ ೨೪,೧೫,೩೫೪ ಮೆ.ಟನ್ ಕಬ್ಬು ನುರಿಸಿದ್ದರೆ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆ ೨೨,೦೪,೫೨೫ ಮೆ.ಟನ್, ಸಾಯಿಪ್ರಿಯಾ ೧೮,೨೫,೧೯೨ ಮೆ.ಟನ್ ಮತ್ತು ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ೧೭,೦೯,೧೨೨ ಮೆ.ಟನ್ ಕಬ್ಬು ನುರಿಸುವ ಮೂಲಕ ಜಿಲ್ಲೆಯ ಅತಿಹೆಚ್ಚು ಕಬ್ಬು ನುರಿಸಿದ ಕಾರ್ಖಾನೆಗಳಾಗಿವೆ.
ಬಾಕಿ ಹಣ ಪಾವತಿಗೆ ಈ ತಿಂಗಳು ಡೆಡ್‌ಲೈನ್ :
ಅಽಕಾರಿಗಳು ಹೇಳುವಂತೆ ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಒಟ್ಟು ೧೪ ಸಕ್ಕರೆ ಕಾರ್ಖಾನೆಗಳು ಕಬ್ಬು ಕ್ರಷಿಂಗ್ ಮತ್ತು ಹಣ ಪಾವತಿಸುವಲ್ಲಿ ಉತ್ತಮ ಸ್ಥಿತಿಯಲ್ಲಿವೆ. ಈಗಾಗಲೇ ಶೇ. ೮೫ಕ್ಕೂ ಅಽಕ ಹಣ ಪಾವತಿಸಿದ್ದು, ಉಳಿದ ಹಣವನ್ನು ಕೂಡಲೇ ಪಾವತಿಸುವಂತೆ ಸಂಬAಧಪಟ್ಟ ಕಾರ್ಖಾನೆಗಳಿಗೆ ನಿರಂತರವಾಗಿ ಸೂಚನೆ ನೀಡುತ್ತಲೇ ಇದ್ದೇವೆ. ಜೊತೆಗೆ ಸಕ್ಕರೆ ಆಯುಕ್ತರು ಮತ್ತು ಜಿಲ್ಲಾಡಳಿತವೂ ಏಪ್ರಿಲ್ ತಿಂಗಳ ಅಂತ್ಯಕ್ಕೆ ಡೆಡ್‌ಲೈನ್ ನೀಡಿದೆ. ಅಷ್ಟರಲ್ಲಿ ಎಲ್ಲ ಕಾರ್ಖಾನೆಗಳು ಬಾಕಿ ಉಳಿಸಿಕೊಂಡುರುವ ಹಣವನ್ನು ಪಾವತಿಸಬೇಕು. ಜೊತೆಗೆ ಸರ್ಕಾರದ ೫೦ ರೂ.ಗಳ ಜೊತೆಗೆ ತಮ್ಮ ಪಾಲಿನ ೫೦ ರೂ.ಗಳನ್ನು ಪಾವತಿಸುವಂತೆ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ ಎಂದು ಹಿರಿಯ ಅಽಕಾರಿಯೊಬ್ಬರು ಹೇಳಿದರು.
ಎಂಆರ್‌ಎನ್ ಸಮೂಹದಿಂದ ೬೭.೪೦ ಲಕ್ಷ ಮೆ.ಟನ್ ಕ್ರಷಿಂಗ್:
ಇನ್ನು ಜಿಲ್ಲೆಯ ಎಂಆರ್‌ಎನ್(ನಿರಾಣಿ) ಉದ್ಯಮ ಸಮೂಹ ಸಂಸ್ಥೆಯ ಅಡಿಯಲ್ಲಿ ಜಿಲ್ಲೆಯಲ್ಲಿ ಇರುವ ೫ ಸಕ್ಕರೆ ಕಾರ್ಖಾನೆ ಹಾಗೂ ಮಂಡ್ಯ, ಪುಣೆ ಮತ್ತು ಬಿಹಾರ ಸೇರಿ ಒಟ್ಟು ೮ ಸಕ್ಕರೆ ಕಾರ್ಖಾನೆಗಳಿಂದ ೬೭,೪೦,೦೫೬ ಮೆಟ್ರಿಕ್ ಟನ್ ಕಬ್ಬು ಕ್ರಷಿಂಗ್ ಮಾಡಿವೆ. ಇದರಿಂದ ೫೪.೨೦ ಲಕ್ಷ ಕ್ವಿಂಟಾಲ್ ಸಕ್ಕರೆ, ೨೧ ಕೋಟಿ ಲೀಟರ್ ಇಥೇನಾಲ್ ಉತ್ಪಾದಿಸಿ ಹೊಸ ಮೈಲುಗಲ್ಲು ಸಾಽಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net