ಪಾಠದೊಂದಿಗೆ ಪರಿಸರ ಜಾಗೃತಿಯೂ ಅಗತ್ಯ

ಲೋಕಾಪುರ ಪಟ್ಟಣದ ಬಿ.ವಿ.ವಿ.ಎಸ್ ಮಹಿಳಾ ಪದವಿ ಪೂರ್ವ ಕಾಲೇಜು ವತಿಯಿಂದ ಲಕ್ಷಾನಟ್ಟಿ ಗ್ರಾಮದ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ಆಯೋಜಿಸಿದ್ದ ವನಮಹೋತ್ಸವ ಹಾಗೂ ವನಭೋಜನ ಕಾರ್ಯಕ್ರಮದಲ್ಲಿ ಹಿರೇಮಠದ ಡಾ. ಸಿ.ಎಸ್. ಹಿರೇಮಠ ಸ್ವಾಮೀಜಿ, ಪ್ರಾಚಾರ್ಯ ಎಸ್.ಎಂ. ಹುದ್ದಾರ, ಉಪನ್ಯಾಸಕ ಎಚ್.ಪಿ. ಶೇಬನ್ನವರ, ಪ್ರವಾಸ ಮುಖ್ಯಸ್ಥ ಎಸ್.ವೈ. ನರಸಾಪುರ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎಂ.ಎಲ್. ನಾಯಕ ವಿದ್ಯಾರ್ಥಿನಿಯರು ಸೇರಿ ಮತ್ತಿತರರಿದ್ದರು.
ಲೋಕಾಪುರ ಪಟ್ಟಣದ ಬಿ.ವಿ.ವಿ.ಎಸ್ ಮಹಿಳಾ ಪದವಿ ಪೂರ್ವ ಕಾಲೇಜು ವತಿಯಿಂದ ಲಕ್ಷಾನಟ್ಟಿ ಗ್ರಾಮದ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ಆಯೋಜಿಸಿದ್ದ ವನಮಹೋತ್ಸವ ಹಾಗೂ ವನಭೋಜನ ಕಾರ್ಯಕ್ರಮದಲ್ಲಿ ಹಿರೇಮಠದ ಡಾ. ಸಿ.ಎಸ್. ಹಿರೇಮಠ ಸ್ವಾಮೀಜಿ, ಪ್ರಾಚಾರ್ಯ ಎಸ್.ಎಂ. ಹುದ್ದಾರ, ಉಪನ್ಯಾಸಕ ಎಚ್.ಪಿ. ಶೇಬನ್ನವರ, ಪ್ರವಾಸ ಮುಖ್ಯಸ್ಥ ಎಸ್.ವೈ. ನರಸಾಪುರ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎಂ.ಎಲ್. ನಾಯಕ ವಿದ್ಯಾರ್ಥಿನಿಯರು ಸೇರಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಸಿ.ಎಸ್. ಹಿರೇಮಠ ಸ್ವಾಮೀಜಿ ಹೇಳಿಕೆ
  • ವನಮಹೋತ್ಸವ ಕಾರ್ಯಕ್ರಮ

ಲೋಕಾಪುರ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜ್ಞಾನದ ಜತೆಗೆ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವುದು ಅಗತ್ಯ. ಯುವಜನತೆ ಪರಿಸರ ಕಾಳಜಿಯನ್ನು ಜೀವನದ ಭಾಗವಾಗಿಸಿಕೊಂಡಾಗ ಮಾತ್ರ ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯ ಕಲ್ಪಿಸಲು ಸಾಧ್ಯ ಎಂದು ಹಿರೇಮಠದ ಡಾ. ಸಿ.ಎಸ್. ಹಿರೇಮಠ ಸ್ವಾಮೀಜಿ ಹೇಳಿದರು.

ಪಟ್ಟಣದ ಬಿ.ವಿ.ವಿ.ಎಸ್ ಮಹಿಳಾ ಪದವಿ ಪೂರ್ವ ಕಾಲೇಜು ವತಿಯಿಂದ ಲಕ್ಷಾನಟ್ಟಿ ಗ್ರಾಮದ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ಆಯೋಜಿಸಿದ್ದ ವನಮಹೋತ್ಸವ ಹಾಗೂ ವನಭೋಜನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯಲ್ಲಿ ಯುವಕರ ಪಾತ್ರ ನಿರ್ಣಾಯಕವಾಗಿದೆ. ಮರಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ವಿದ್ಯಾರ್ಥಿಗಳು ಸಕ್ರಿಯವಾಗಿ ಕೈಜೋಡಿಸಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಎಸ್.ಎಂ. ಹುದ್ದಾರ ಮಾತನಾಡಿ, ಸಾಲುಮರದ ತಿಮ್ಮಕ್ಕ ಅವರ ಪರಿಸರ ಸೇವೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಮರಗಳನ್ನು ಮಕ್ಕಳಂತೆ ಪೋಷಿಸಿದ ಅವರ ಬದುಕಿನ ಸಂದೇಶವನ್ನು ಯುವಜನತೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಇತಿಹಾಸ ಉಪನ್ಯಾಸಕ ಎಚ್.ಪಿ. ಶೇಬನ್ನವರ ಮಾತನಾಡಿ, ಉದ್ಯಾನವನದಲ್ಲಿರುವ ವಿವಿಧ ಸಸ್ಯಗಳ ಮಹತ್ವ, ಮರಗಳ ಸಂರಕ್ಷಣೆ ಹಾಗೂ ಪರಿಸರ ಸಮತೋಲನದಲ್ಲಿ ಅವುಗಳ ಕೊಡುಗೆ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.
ವಿದ್ಯಾರ್ಥಿನಿಯರು ಸಸಿಗಳನ್ನು ನೆಟ್ಟು, ಅವುಗಳನ್ನು ನಿರಂತರವಾಗಿ ಬೆಳೆಸಿ ಸಂರಕ್ಷಿಸುವ ಸಂಕಲ್ಪ ಕೈಗೊಂಡರು. ಎನ್‌ಎಸ್‌ಎಸ್ ಕಾರ್ಯಕ್ರಮಾಽಕಾರಿ ಎಂ.ಎಲ್. ನಾಯಕ ಅವರು ಮರ ಬೆಳೆಸಿ, ಪರಿಸರ ಉಳಿಸಿ; ಹಸಿರು ಉಳಿದರೆ ಭವಿಷ್ಯ ಉಳಿಯುತ್ತದೆ ಎಂಬ ಸಂದೇಶ ನೀಡಿದರು.
ಪ್ರವಾಸ ಮುಖ್ಯಸ್ಥ ಎಸ್.ವೈ. ನರಸಾಪುರ ಮಾತನಾಡಿ, ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಯ ಜತೆಗೆ ಸಹಕಾರ, ಸ್ನೇಹ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ನಂತರ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಪ್ರಕೃತಿಯ ಮಡಿಲಿನಲ್ಲಿ ವನಭೋಜನದಲ್ಲಿ ಪಾಲ್ಗೊಂಡರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಕು. ವಾಯ್.ಐ. ಜಂಬಗಿ, ಉಪನ್ಯಾಸಕರಾದ ಜಿ.ಎಸ್. ಮಠದ, ಎ.ಸಿ. ಗಣಾಚಾರಿ, ಶಿವಯ್ಯ ಸರಕಾರ ಸೇರಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net