ಉತ್ತಮ ಸಮಾಜ ನಿರ್ಮಾಣಕ್ಕೆ ಒತ್ತು

ಮುಧೋಳದಲ್ಲಿ ಜರುಗಿದ ಮಡಿವಾಳ ಮಾಚಿದೇವ ಜಯಂತ್ಯುತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಮಡಿವಾಳ ಮಾಚಿದೇವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಚಿವ ಆರ್.ಬಿ. ತಿಮ್ಮಾಪೂರ, ಗವಿಮಠದ ಬಸವಲಿಂಗ ಶ್ರೀಗಳು, ಉಪನ್ಯಾಸಕಿ ಅನೀತಾ ಪಾಟೀಲ, ವೀರೇಶ ಮಡಿವಾಳ ಇತರರಿದ್ದರು.
ಮುಧೋಳದಲ್ಲಿ ಜರುಗಿದ ಮಡಿವಾಳ ಮಾಚಿದೇವ ಜಯಂತ್ಯುತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಮಡಿವಾಳ ಮಾಚಿದೇವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಚಿವ ಆರ್.ಬಿ. ತಿಮ್ಮಾಪೂರ, ಗವಿಮಠದ ಬಸವಲಿಂಗ ಶ್ರೀಗಳು, ಉಪನ್ಯಾಸಕಿ ಅನೀತಾ ಪಾಟೀಲ, ವೀರೇಶ ಮಡಿವಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಆರ್.ಬಿ. ತಿಮ್ಮಾಪೂರ ಅಭಿಮತ
  • ಜಾತಿ ವ್ಯವಸ್ಥೆ ಕರಾಳ ಛಾಯೆ
  • ಸಮಾಜದ ಬೆಳವಣಿಗೆಗೆ ಮಾರಕ
ಮುಧೋಳ: ಇಂದಿನ ಜಾತಿ ವ್ಯವಸ್ಥೆಯಲ್ಲಿ ಆವರಿಸಿರುವ ಕರಾಳ ಛಾಯೆ ಸಮಾಜದ ಆರೋಗ್ಯಕರ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಆತಂಕ ವ್ಯಕ್ತಪಡಿಸಿದರು.
ನಗರದ ಅಗಸರ ಕೆರೆ ಆವರಣದಲ್ಲಿ ತಾಲೂಕು ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಹಾಗೂ ಮಡಿವಾಳ ಮಾಚಿದೇವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೂ ಧರ್ಮದಲ್ಲಿ ಶ್ರಮಿಕ ವರ್ಗಗಳನ್ನು ಸಣ್ಣ ಸಣ್ಣ ಜಾತಿಗಳ ಹೆಸರಿನಲ್ಲಿ ವಿಭಜಿಸುವ ಪ್ರವೃತ್ತಿ ಇಂದಿಗೂ ಮುಂದುವರಿದಿರುವುದು ವಿಷಾದನೀಯ. 12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಯ ಆದರ್ಶ ಸಮಾಜದ ಕನಸು ಕಂಡಿದ್ದರು. ಆದರೆ ಆ ಕನಸು ಸಂಪೂರ್ಣವಾಗಿ ಸಾಕಾರವಾಗಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಆಶಯದಂತೆ ಪ್ರತಿಯೊಬ್ಬರೂ ಸಮಾನ ಗೌರವದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಬೇಕಾಗಿದೆ ಎಂದರು.
ಸಣ್ಣ ಸಮುದಾಯದವರನ್ನು ದೇವಸ್ಥಾನ ಪ್ರವೇಶದಿಂದ ವಂಚಿಸುವಂತಹ ಘಟನೆಗಳು ಇನ್ನೂ ನಡೆಯುತ್ತಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಸಚಿವರು ಪ್ರಶ್ನಿಸಿದರು.
ಮಡಿವಾಳ ಸಮುದಾಯದ ಪ್ರಮುಖ ಬೇಡಿಕೆಯಾದ ಧೋಬಿಘಾಟ್ ನಿರ್ಮಾಣಕ್ಕಾಗಿ 25 ಲಕ್ಷ ರೂ. ಅನುದಾನವನ್ನು ಏಪ್ರಿಲ್‌ ತಿಂಗಳೊಳಗೆ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಆರ್‌ಎಂಜಿ ಕಾಲೇಜಿನ ಉಪನ್ಯಾಸಕಿ ಅನೀತಾ ಪಾಟೀಲ ಮಾತನಾಡಿ, ಮಾಚಿದೇವರ ವಚನಗಳು ಇಂದಿನ ಸಮಾಜಕ್ಕೆ ದಿಕ್ಕು ತೋರುವಂತಿವೆ ಎಂದು ಅಭಿಪ್ರಾಯಪಟ್ಟರು.
ವೀರೇಶ ಮಡಿವಾಳ ಮಾತನಾಡಿದರು. ಗವಿಮಠದ ಬಸವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕಲ್ಲಪ್ಪ ಸಬರದ, ಚಂದ್ರಶೇಖರ ದೇಸಾಯಿ, ಡಾ. ಶಿವಾನಂದ ಕುಬಸದ, ಪ್ರಕಾಶ ವಸöದ, ಉಮೇಶ ಬಾಡಗಿ, ರಾಮಜಿ ಘೋರ್ಪಡೆ, ವಿ.ಎಸ್. ಮುನವಳ್ಳಿ ಹಾಗೂ ಡಾ. ವೆಂಕಟೇಶ ಗುಡೆಪ್ಪನವರಿಗೆ ಮಡಿವಾಳ ಮಾಚಿದೇವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅನಂತರಾವ ಘೋರ್ಪಡೆ, ಶಾಂತಾ ಮಡಿವಾಳರ, ಸಂಕಪ್ಪ ಮಡಿವಾಳರ, ಗೋಪಿ ಮಡಿವಾಳರ, ಪೌರಾಯುಕ್ತ ಗೋಪಾಲ ಕಾಸೆ, ಸಂಘದ ಅಧ್ಯಕ್ಷ ಪರಶುರಾಮ ಪರೀಟ್ ಸೇರಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net