ಶಿಕ್ಷಣದಿಂದಲೇ ವ್ಯಕ್ತಿಯ ವಿಕಾಸ ಸಾಧ್ಯ

ಮುಧೋಳದ ವಿಜಯ ಅಂತಾರಾಷ್ಟ್ರೀಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಂ.ಆರ್.ಎನ್. ಜ್ಞಾನ ಸಂಜೀವಿನಿ ಶೈಕ್ಷಣಿಕ ದತ್ತು ಯೋಜನೆಯಡಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಸಂಗಮೇಶ ನಿರಾಣಿ, ಕೆ. ಮಠದ, ಪಿ. ಎನ್. ಪಾಟೀಲ, ಸಿ. ಪಿ. ಜನವಾಡ, ಡಿ. ಎಂ. ದಾಸರ, ಭೀಮಶಿ ಮಗದುಮ್ಮ, ರಾಜು ಟಂಕಸಾಲಿ ಇತರರಿದ್ದರು.
ಮುಧೋಳದ ವಿಜಯ ಅಂತಾರಾಷ್ಟ್ರೀಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಂ.ಆರ್.ಎನ್. ಜ್ಞಾನ ಸಂಜೀವಿನಿ ಶೈಕ್ಷಣಿಕ ದತ್ತು ಯೋಜನೆಯಡಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಸಂಗಮೇಶ ನಿರಾಣಿ, ಕೆ. ಮಠದ, ಪಿ. ಎನ್. ಪಾಟೀಲ, ಸಿ. ಪಿ. ಜನವಾಡ, ಡಿ. ಎಂ. ದಾಸರ, ಭೀಮಶಿ ಮಗದುಮ್ಮ, ರಾಜು ಟಂಕಸಾಲಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಪಿ ಸಿದ್ಧಾರ್ಥ ಗೋಯಲ್ ಹೇಳಿಕೆ
  • ಎಂ.ಆರ್.ಎನ್. ಜ್ಞಾನ ಸಂಜೀವಿನಿ ಶೈಕ್ಷಣಿಕ ದತ್ತು ಯೋಜನೆಗೆ ಚಾಲನೆ
  • 2030ರ ವೇಳೆಗೆ 5 ಸಾವಿರ ಮಕ್ಕಳಿಗೆ ಆಸರೆಯ ಗುರಿ
ಮುಧೋಳ: ಶಿಕ್ಷಣವೇ ವ್ಯಕ್ತಿಯ ಸಮಗ್ರ ವಿಕಾಸಕ್ಕೆ ಮೂಲಾಧಾರವಾಗಿದ್ದು, ಜೀವನದಲ್ಲಿ ಸಾಧನೆ ಮಾಡಲು ಅತ್ಯಂತ ಶಕ್ತಿಯುತ ಸಾಧನವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಹೇಳಿದರು.
ನಗರದ ವಿಜಯ ಅಂತಾರಾಷ್ಟ್ರೀಯ ಶಾಲೆಯಲ್ಲಿ ಎಂ.ಆರ್.ಎನ್. (ನಿರಾಣಿ) ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಜ್ಞಾನ ಸಂಜೀವಿನಿ ಶೈಕ್ಷಣಿಕ ದತ್ತು ಯೋಜನೆಯ 2ನೇ ವರ್ಷದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ಮಗು ದೇಶದ ಅಮೂಲ್ಯ ಸಂಪತ್ತಾಗಿದ್ದು, ಅವರ ಬೆಳವಣಿಗೆಗೆ ಕುಟುಂಬದ ಜೊತೆಗೆ ಸಮಾಜವೂ ಹೊಣೆಗಾರಿಕೆಯಿಂದ ಬೆಂಬಲಿಸಬೇಕು. ಈ ನಿಟ್ಟಿನಲ್ಲಿ ೌಂಡೇಶನ್ ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಡಿಡಿಪಿಐ ಅಜಿತ ಮನ್ನಿಕೇರಿ ಮಾತನಾಡಿ, ಬಡತನವು ಶಿಕ್ಷಣಕ್ಕೆ ಅಡ್ಡಿಯಾಗಬಾರದು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯ ಎಂದರು. ಗ್ರಾಮೀಣ ಮಕ್ಕಳಿಗೂ ಸಮಾನ ಅವಕಾಶ ಸಿಗಬೇಕು ಎಂಬ ಉದ್ದೇಶ ಶ್ಲಾಘನೀಯವಾಗಿದೆ ಎಂದರು.
ಫೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದತ್ತ ಪ್ರೇರೇಪಿಸುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ಕಳೆದ ವರ್ಷ 150 ವಿದ್ಯಾರ್ಥಿಗಳನ್ನು ದತ್ತು ಪಡೆದಿದ್ದು, ಈ ವರ್ಷ ಮತ್ತಷ್ಟು 150 ವಿದ್ಯಾರ್ಥಿಗಳನ್ನು ಸೇರಿಸಲಾಗಿದೆ. 2030ರೊಳಗೆ 5,000 ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಿಸಲಾಯಿತು. ಜಿ. ಕೆ. ಮಠದ, ಪಿ. ಎನ್. ಪಾಟೀಲ, ಸಿ. ಪಿ. ಜನವಾಡ, ಡಿ. ಎಂ. ದಾಸರ, ಭೀಮಶಿ ಮಗದುಮ್ಮ, ರಾಜು ಟಂಕಸಾಲಿ, ರಾಜು ಬಿಸರಡ್ಡಿ, ಶ್ರೀಶೈಲ ದಬಾಡಿ, ಸುರೇಶ ಕೊಲ್ದಾರ, ಬಿ.ಆರ್.ಸಿ ಎನ್.ಆರ್.ಅವಟಿ, ಐ.ಜಿ. ನ್ಯಾಮಗೌಡ್ರ, ಏನ್.ಜಿ.ದಾಸರೆಡ್ಡಿ, ವೆಂಕಣ್ಣ ಗಿಡ್ಡಪ್ಪನವರ . ಐ.ಜಿ. ನ್ಯಾಮಗೌಡ್ರ , ಪವನ ಕುಲಕರ್ಣಿ, ವೆಂಕಟೇಶ ಜಂಬಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net