ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅಗತ್ಯ

ಲೋಕಾಪುರ ಸಮೀಪದ ಮುದ್ದಾಪೂರ ಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮಿಲನ-2026 ಕಾರ್ಯಕ್ರಮವನ್ನು ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀಗಳು ಉದ್ಘಾಟಿಸಿದರು. ಗದಗಯ್ಯ ಬಸನಿಂಗಯ್ಯ ಹಿರೇಮಠ ಸ್ವಾಮೀಜಿ, ಎಸ್‌ಡಿಎಂಸಿ ಅಧ್ಯಕ್ಷ ದ್ಯಾವಪ್ಪ ಎಲ್‌. ನಾಯಕ, ಡಾ. ಸಿದ್ದಣ್ಣ ಬಾಡಗಿ, ಮಾರುತಿ ಕರೆನ್ನವರ, ಅಶೋಕ ಪಟ್ಟಣಶೆಟ್ಟಿ, ಸದಾಶಿವ ಮಾಳಿ, ಅಶೋಕ ಪೂಜಾರ, ಪರಶುರಾಮ ಹಂಚಾಟೆ, ಬಸವರಾಜ ನಾಯಕ, ವೀರಭದ್ರಯ್ಯಾ ಜಂಬಗಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಬ್ರಹ್ಮಾನಂದ ಶ್ರೀಗಳ ಹೇಳಿಕೆ
  • ನೈತಿಕ ಮೌಲ್ಯವನ್ನು ಬಾಲ್ಯದಲ್ಲಿಯೇ ಬೆಳೆಸಿ
ಲೋಕಾಪುರ: ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಸತತ ಅಧ್ಯಯನದ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಬೇಕು ಎಂದು ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀಗಳು ಹೇಳಿದರು.
ಸಮೀಪದ ಮುದ್ದಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಆರ್‌ಎಮ್‌ಎಸ್‌ಎ) ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಲ್ಸಕ್ರಿ ವಾರ್ಷಿಕ ಸ್ನೇಹ ಸಮ್ಮಿಲನ-2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪಾಲಕರು ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದೆಂದು ತಿಳಿಸಿದ ಅವರು, ರಾಷ್ಟ್ರೀಯ, ಕೌಟುಂಬಿಕ ಹಾಗೂ ನೈತಿಕ ಮೌಲ್ಯಗಳನ್ನು ಬಾಲ್ಯದಲ್ಲಿಯೇ ಬೆಳೆಸುವ ಅಗತ್ಯವಿದೆ. ಶಾಲೆಯಲ್ಲಿ ಕಲ್ಸಕ್ರಿ ಎಂಬ ವಿನೂತನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ ಕಾರ್ಯವೆಂದು ಪ್ರಶಂಸಿಸಿದರು.
ಪದನಿಮಿತ್ಯ ಸದಸ್ಯ ಕಾರ್ಯದರ್ಶಿ ಡಾ. ಸಿದ್ದಣ್ಣ ಬಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಸಮಿತಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.
ಎಸ್‌ಡಿಎಂಸಿ ಪದಾಧಿಕಾರಿಗಳು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ದೇಣಿಗಾದಾರರು ಹಾಗೂ ಶಿಕ್ಷಕರಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಿಕ್ಷಕವೃಂದವನ್ನು ವಿಶೇಷವಾಗಿ ಗೌರವಿಸಲಾಯಿತು.
ವಿದ್ಯಾರ್ಥಿಗಳು ನೃತ್ಯ, ಜಾನಪದ ಕಲೆ ಹಾಗೂ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಮುದ್ದಾಪೂರ ಗ್ರಾಮದ ಗದಗಯ್ಯ ಬಸನಿಂಗಯ್ಯ ಹಿರೇಮಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ದ್ಯಾವಪ್ಪ (ಮಂಜುನಾಥ) ಎಲ್‌. ನಾಯಕ ಅಧ್ಯಕ್ಷತೆ ವಹಿಸಿದ್ದರು.
ಮಾರುತಿ ಕರೆನ್ನವರ, ಅಶೋಕ ಪಟ್ಟಣಶೆಟ್ಟಿ, ಸದಾಶಿವ ಮಾಳಿ, ಅಶೋಕ ಪೂಜಾರ, ಪರಶುರಾಮ ಹಂಚಾಟೆ, ಬಸವರಾಜ ನಾಯಕ, ವೀರಭದ್ರಯ್ಯಾ ಜಂಬಗಿ, ರಾಜೇಸಾಬ ಯಡಹಳ್ಳಿ, ರುದ್ರಪ್ಪ ಜಾಡರ, ಪ್ರಕಾಶ ಶಿರಸಂಗಿ, ವಿಜಯಕುಮಾರ ಕಮತಗಿ, ಸೈದುಸಾಬ ಯಡಹಳ್ಳಿ, ವಿಶ್ವನಾಥ ಗುಡಗೇರಿ, ನಾಗಪ್ಪ ತೇಲಿ, ಸೈಯದಸಾಬ ಸರಕಾವಸ್, ಸೈದುಸಾಬ ಹಾಜಬಾಯಿ, ಶ್ರೀಕಾಂತ ಶಿಂಧೆ, ವಿವಿಧ ಗಣ್ಯರು, ಸಮಿತಿ ಸದಸ್ಯರು, ಶಿಕ್ಷಕರು, ಪಾಲಕರು ಹಾಗೂ ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net