ಹುನಗುಂದ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಕಾಲೇಜ್ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿಜಯ ಮಹಾಂತೇಶ ಗದ್ದನಕೇರಿ ಉದ್ಘಾಟಿಸಿದರು. ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ ಪ್ರಶಸ್ತಿ ಪುರಸ್ಕೃತೆ ಡಾ. ಭುವನೇಶ್ವರಿ ಕಾಂಬಳೆ, ರಾಣಿ ತೋಪಲಕಟ್ಟಿ, ಸಾವಿತ್ರಿ ತಪೇಲಿ, ಸಿ.ಜಿ. ಹವಾಲದಾರ, ಎಸ್.ಜಿ. ಎಮ್ಮಿ, ದೇವು ಡಂಬಳ, ಬಸವರಾಜ್ ಹೊಸಮನಿ, ಬಿ.ವೈ. ಕೊಡಗಾನೂರ ಇತರರಿದ್ದರು.
Published on:
Copied
Follow Us
ಹುನಗುಂದ:ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾದಾಗ ಮಾತ್ರ ಹೆಚ್ಚು ಸಬಲಳಾಗುತ್ತಾಳೆ. ಅದರಿಂದಲೇ ಸಾಮಾಜಿಕ ಸಬಲೀಕರಣವೂ ಸಹಜವಾಗಿ ಸಾಧ್ಯವಾಗುತ್ತದೆ ಎಂದು ವಿಜಯಪುರ ಜಿ¯್ಲೆಯ ಬಬಲಾದಿ ಗ್ರಾಮದ ಒಡಲ ಧ್ವನಿ ಮಹಿಳಾ ಒಕ್ಕೂಟದ ಸಂಸ್ಥಾಪಕಿ ಹಾಗೂ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ ಪ್ರಶಸ್ತಿ ಪುರಸ್ಕೃತೆ ಡಾ. ಭುವನೇಶ್ವರಿ ಕಾಂಬಳೆ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತಾರಾಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಗ್ರಾಮೀಣ ಮಹಿಳೆಯರ ಪ್ರಮುಖ ಸಮಸ್ಯೆಯಾದ ವಲಸೆಯನ್ನು ತಡೆಯಲು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ತಮ್ಮ ಒಡಲ ಧ್ವನಿ ಸಂಘಟನೆಯ ಮೂಲಕ ಕೈಗೊಂಡ ಕಾರ್ಯಗಳ ಬಗ್ಗೆ ವಿವರಿಸಿದರು. ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಮುಂತಾದ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿಜಯ ಮಹಾಂತೇಶ ಗದ್ದನಕೇರಿ ಮಾತನಾಡಿ, ಮಹಿಳೆಯರಿಗೆ ಕೇವಲ ಭಾವನಾತ್ಮಕ ಗೌರವವಲ್ಲ, ಅವರ ಶಕ್ತಿಸಾಮರ್ಥ್ಯಗಳಿಗೆ ಅವಕಾಶ ನೀಡುವುದು ಮುಖ್ಯ. ಅಂತಹ ಅವಕಾಶಗಳು ದೊರೆತಾಗಲೇ ಒಡಲ ಧ್ವನಿ ಸಂಘಟನೆಗಳು ಮೂಡಿಬರುತ್ತವೆ. ಗ್ರಾಮೀಣ ಮಹಿಳೆಯರ ವಲಸೆ ತಡೆಯುವಲ್ಲಿ ಡಾ. ಭುವನೇಶ್ವರಿ ಕಾಂಬಳೆ ಅವರ ಪ್ರಯತ್ನ ಶ್ಲಾಘನೀಯ ಎಂದರು.
ಪ್ರಾಚಾರ್ಯ ಸಿಕಂದರ ಧನ್ನೂರ ಮಾತನಾಡಿ, ಮಹಿಳೆ ಅಪಾರ ಸಾಮರ್ಥ್ಯ ಹೊಂದಿರುವ ಸಂಪನ್ಮೂಲಗಳ ಆಗರವಾಗಿದ್ದು, ಇಂತಹ ಸಾಧಕರ ಬದುಕು ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಕಾಲೇಜ್ ಅಭಿವೃದ್ಧಿ ಸಮಿತಿಯ ಸದಸ್ಯರಾದ ರಾಣಿ ತೋಪಲಕಟ್ಟಿ, ಸಾವಿತ್ರಿ ತಪೇಲಿ, ಸಿ.ಜಿ. ಹವಾಲದಾರ, ಎಸ್.ಜಿ. ಎಮ್ಮಿ, ದೇವು ಡಂಬಳ, ಬಸವರಾಜ್ ಹೊಸಮನಿ, ಬಿ.ವೈ. ಕೊಡಗಾನೂರ ಹಾಗೂ ಪ್ರೊ. ದಾನಮ್ಮ ಮಠದ ಉಪಸ್ಥಿತರಿದ್ದರು. ಉಪನ್ಯಾಸಕಿ ಸನಾ ಸಿರಸಂಗಿ ನಿರೂಪಿಸಿ, ನಾಗವೇಣಿ ಗರಡಿ ವಂದಿಸಿದರು.