ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಸಂಸ್ಕಾರ ತಿಳಿಸಿ

ಗುಳೇದಗುಡ್ಡದ ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾಭಾರತಿ ಸಂಸ್ಥೆಯ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮದಲ್ಲಿ ವಿದ್ಯಾಭಾರತಿ ಪ್ರಾಂತ ಸಹಕಾರ್ಯದರ್ಶಿ ಮಹಿಪಾಲರರಡ್ಡಿ ಪಾಟೀಲ ಮಾತನಾಡಿದರು. ಸಿ.ಎಚ್. ಗೌಡರ, ಮಲ್ಲಿಕಾರ್ಜುನ ತಾಂಡೂರ, ಸಂಗಣ್ಣ ಹುನಗುಂದ ಇತರರಿದ್ದರು.
ಗುಳೇದಗುಡ್ಡದ ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾಭಾರತಿ ಸಂಸ್ಥೆಯ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮದಲ್ಲಿ ವಿದ್ಯಾಭಾರತಿ ಪ್ರಾಂತ ಸಹಕಾರ್ಯದರ್ಶಿ ಮಹಿಪಾಲರರಡ್ಡಿ ಪಾಟೀಲ ಮಾತನಾಡಿದರು. ಸಿ.ಎಚ್. ಗೌಡರ, ಮಲ್ಲಿಕಾರ್ಜುನ ತಾಂಡೂರ, ಸಂಗಣ್ಣ ಹುನಗುಂದ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾಭಾರತಿ ಪ್ರಾಂತ ಸಹಕಾರ್ಯದರ್ಶಿ ಮಹಿಪಾಲರಡ್ಡಿ ಪಾಟೀಲ ಹೇಳಿಕೆ
  • ಜಿಲ್ಲಾ ಶೈಕ್ಷಣಿಕ ಸಹಮಿಲನ
ಗುಳೇದಗುಡ್ಡ: ಮಕ್ಕಳು ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಬೆಳೆಯಲು ಮಕ್ಕಳಿಗೆ ಯೋಗ ಹಾಗೂ ಸಂಗೀತ ಶಿಕ್ಷಣ ನೀಡಬೇಕು. ಮಕ್ಕಳು ನೈತಿಕವಾಗಿ ಬೆಳೆಯಲು ಆಧ್ಯಾತ್ಮಿಕ ಚಿಂತನೆ, ಸಂಸ್ಕೃತ ಭಾಷೆ ಕಲಿಸಬೇಕು ಎಂದು ವಿದ್ಯಾಭಾರತಿ ಪ್ರಾಂತ ಸಹಕಾರ್ಯದರ್ಶಿ ಮಹಿಪಾಲರಡ್ಡಿ ಪಾಟೀಲ ಹೇಳಿದರು.
ಪಟ್ಟಣದ ಸರಸ್ವತಿ ವಿದ್ಯಾಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾಭಾರತಿ ಜಿಲ್ಲಾ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮದಲ್ಲಿ ಮುಖ್ಯವಕ್ತರರಾಗಿ ಮಾತನಾಡಿದ ಅವರು, ನಮ್ಮ ಭಾರತೀಯ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಮಕ್ಕಳಿಗೆ ಕಲಿಸಬೇಕು. ಹಬ್ಬ ಹರಿದಿನಗಳ ಸಂಪ್ರದಾಯ ಆಚರಣೆ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದರು.
ಸ್ವಾತಂತ್ರ‍್ಯ ಪೂರ್ವದಲ್ಲಿ ನಮ್ಮ ಮಕ್ಕಳಿಗೆ ನೀಡುತ್ತಿದ್ದ ಶಿಕ್ಷಣ ಮತ್ತೇ ಪ್ರಾರಂಭಿಸಬೇಕು. ಮಕ್ಕಳಲ್ಲಿ ದೇಶಭಕ್ತಿ, ದೇಶಪ್ರೇಮ ಬೆಳೆಸುವಲ್ಲಿ ವಿದ್ಯಾಭಾರತಿ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾಭಾರತಿ ಪಂಚಮುಖಿ ಶಿಕ್ಷಣ ನೀಡುತ್ತಿದೆ ಎಂದರು.
ವಿದ್ಯಾಭಾರತಿ ಜಿಲ್ಲಾ ಕಾರ್ಯದರ್ಶಿ ಸಿ.ಎಚ್. ಗೌಡರ ಮಾತನಾಡಿದರು.
ಸಂಸ್ಥೆ ಕಾರ್ಯದರ್ಶಿ ಮಲ್ಲಿಕಾರ್ಜುನ ತಾಂಡೂರ, ಸಂಗಣ್ಣ ಹುನಗುಂದ, ರವಿ ಶೇಬಿನಕಟ್ಟಿ, ಮುಖ್ಯೊಧ್ಯಾಯ ಎಂ.ಎಸ್. ಹಿರೇಮಠ, ಎನ್.ವಿ. ದೊಡಮನಿ, ಎಂ.ಎಸ್. ನೀಲೂರ, ಎಸ್.ಎಸ್.ಶಿಪ್ರಿ, ಎ.ವೈ. ಪಾಟೀಲ. ಕೆ.ಎಸ್. ರಂಜಣಗಿ. ಕುಮಾರ ರಾಠೋಡ, ಶ್ರೀಕಾಂತ ರಾಠೋಡ, ಗೌರಮ್ಮ ಏಳಮಗ್ಗದ, ಅಶ್ವೀನಿ ಮೂಲಿಮನಿ, ಎಸ್.ಎ. ಶೇಖಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net