ದುರ್ಗಾದೇವಿ ದೇವಸ್ಥಾನ ಕಳ್ಳತನ ಪ್ರಕರಣ ಭೇದನೆ

ಮುಧೋಳ ತಾಲೂಕಿನ ಬಿದರಿ ದುರ್ಗಾದೇವಿ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಸಿಕ್ಕ ಅಭರಣಗಳೊಂದಿಗೆ ಸಿಪಿಐ ಎಂ. ನಾಗರೆಡ್ಡಿ, ಪಿಎಸ್‌ಐ ಅಜೀತಕುಮಾರ ಹೊಸಮನಿ, ಕ್ರೈಂ ಪಿಎಸ್ ಪಿ.ಎಸ್. ಮುರನಾಳ, ಪ್ರೋಬೆಸನರಿ ಪಿಎಸ್ ರಮೇಶ್ ಬಿಳಗುಂಡಿ ಹಾಗೂ ಪೊಲೀಸರ ತಂಡ.
ಮುಧೋಳ ತಾಲೂಕಿನ ಬಿದರಿ ದುರ್ಗಾದೇವಿ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಸಿಕ್ಕ ಅಭರಣಗಳೊಂದಿಗೆ ಸಿಪಿಐ ಎಂ. ನಾಗರೆಡ್ಡಿ, ಪಿಎಸ್‌ಐ ಅಜೀತಕುಮಾರ ಹೊಸಮನಿ, ಕ್ರೈಂ ಪಿಎಸ್ ಪಿ.ಎಸ್. ಮುರನಾಳ, ಪ್ರೋಬೆಸನರಿ ಪಿಎಸ್ ರಮೇಶ್ ಬಿಳಗುಂಡಿ ಹಾಗೂ ಪೊಲೀಸರ ತಂಡ.
Published on

ಪ್ರಮುಖ ಮುಖ್ಯಾಂಶಗಳು

  • ಆರೋಪಿ ಬಂಧನ
  • ದುರ್ಗಾದೇವಿ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ ಬಯಲಾಗಿದೆ
  • ದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ
ಮುಧೋಳ: ನಗರದ ಶಿವಾಜಿ ವತ್ತದ ಬಳಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತಾಲೂಕಿನ ಬಿದರಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ ಬಯಲಾಗಿದೆ.
ಬಿದರಿ ಗ್ರಾಮದ ನಿವಾಸಿ ವಸಂತ ಮಾದರ (37) ಎಂಬಾತನೇ ಈ ಕತ್ಯ ಎಸಗಿದ ಆರೋಪಿಯಾಗಿದ್ದು, ಈತ ದೇವಸ್ಥಾನದ ಗರ್ಭಗುಡಿಯ ಬೀಗ ಮುರಿದು ಒಳನುಗ್ಗಿ, ದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಆರೋಪಿಯ ಹೇಳಿಕೆ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, 4.64 ಲಕ್ಷ ರೂ. ವೆಚ್ಚದ ಒಟ್ಟು 32 ಗ್ರಾಂ ತೂಕದ ಚಿನ್ನದ ಆಭರಣಗಳು, 1.42 ಲಕ್ಷ ರೂ. ವೆಚ್ಚದ 500 ಗ್ರಾಂ ಬೆಳ್ಳಿಯ ಆಭರಣಗಳು, ಮೂರು ಸಾವಿರ ರೂ.ಗಳ ತಾಮ್ರದ ಕೊಡ ಸೇರಿ ಒಟ್ಟು 6.09 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಎಸ್.ಪಿ. ಮತ್ತು ಡಿ.ಎಸ್.ಪಿ. ಅವರ ಮಾರ್ಗದರ್ಶನದಲ್ಲಿ ಸಿಪಿಐ ಎಂ.ನಾಗರಡ್ಡಿ ಹಾಗೂ ಪಿಎಸ್‌ಐ ಅಜೀತಕುಮಾರ ಹೊಸಮನಿ ನೇತತ್ವದ ತಂಡ ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದೆ. ಈ ಕಳ್ಳತನ ಪ್ರಕರಣದ ತನಿಖೆಯಲ್ಲಿ ತೊಡಗಿದ್ದ ಕ್ರೈಂ ಪಿಎಸ್‌ಐ ಪಿ.ಎಸ್. ಮುರನಾಳ, ಪ್ರೋಬೆಸನರಿ ಪಿಎಸ್‌ಐ ರಮೇಶ್ ಬಿಳಗುಂಡಿ, ಆರ್.ಬಿ. ಕಟಗೇರಿ, ಬಿ.ಡಿ. ಕುರಿ, ದಾದಾಪೀರ್ ಅತ್ತಾರ, ಎಚ್.ಜೆ. ಮಾದರ, ಎಂ.ಬಿ. ದಳವಾಯಿ ಹಾಗೂ ಎಂ.ಎಲ್. ಒಡೆಯರ ಸೇರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಸಿಬ್ಬಂದಿಯ ಕಾರ್ಯವೈಖರಿಯನ್ನು ಎಸ್.ಪಿ. ಶ್ಲಾಸಿದ್ದು, ಅವರಿಗೆ ಸೂಕ್ತ ಬಹುಮಾನ ಘೋಷಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net