ಸಕಾಲಕ್ಕೆ ಬಸ್ ಓಡಿಸಿ

ಹುನಗುಂದ ಬಸ್ ನಿಲ್ದಾಣ ಎದುರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿದರು. ಕರವೇ ತಾಲೂಕು ಘಟಕದ ಅಧ್ಯಕ್ಷ ರೋಹಿತ ಬಾರಕೇರ, ಪ್ರಧಾನ ಕಾರ್ಯದರ್ಶಿ ಜಹೀರ ಸಂಗಮಕರ, ಉಪಾಧ್ಯಕ್ಷ ಹುಸೇನ ಸಂದಿಮನಿ ಇತರರಿದ್ದರು.
ಹುನಗುಂದ ಬಸ್ ನಿಲ್ದಾಣ ಎದುರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿದರು. ಕರವೇ ತಾಲೂಕು ಘಟಕದ ಅಧ್ಯಕ್ಷ ರೋಹಿತ ಬಾರಕೇರ, ಪ್ರಧಾನ ಕಾರ್ಯದರ್ಶಿ ಜಹೀರ ಸಂಗಮಕರ, ಉಪಾಧ್ಯಕ್ಷ ಹುಸೇನ ಸಂದಿಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರವೇ ನೇತೃತ್ವದಲ್ಲಿ ಪ್ರತಿಭಟನೆ
  • ಅಂತರ ರಾಜ್ಯಕ್ಕೆ ಬಸ್‌ಗಳ ಸೇವೆ ಒದಗಿಸಿ
ಹುನಗುಂದ: ಬಸ್ ಘಟಕದಿಂದ ಸಾರಿಗೆ ಬಸ್‌ಗಳು ಸಮರ್ಪಕವಾಗಿ ಪೂರೈಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಬಸ್ ಘಟಕ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಕರವೇ ಅಧ್ಯಕ್ಷ ರೋಹಿತ ಬಾರಕೇರ ಮಾತನಾಡಿ, ವಿಜಯಪುರ-ಗಂಗಾವತಿಯ ಘಟಕದ ಸಾರಿಗೆ ಬಸ್‌ಗಳು ಹುನಗುಂದ ಬಸ್ ನಿಲ್ದಾಣದ ಒಳಗಡೆ ಬಾರದೆ (ರಾಷ್ಟ್ರೀಯ ಹೆದ್ದಾರಿ) ಬೈಪಾಸ್‌ನಲ್ಲಿ ಹೋಗುತ್ತಿವೆ. ಪ್ರಯಾಣಿಕರನ್ನು ಬೈಪಾಸ್ ರಸ್ತೆಯಲ್ಲಿಯೇ ಇಳಿಸಿ ಹೋಗುತ್ತಿವೆ. ಹುನಗುಂದ-ಲಿಂಗಸಗೂರ-ಕೋಡಿಹಾಳ ಮಾರ್ಗವಾಗಿ, ಹುನಗುಂದ-ಗೂಡೂರ ಬಾದಾಮಿ ಮಾರ್ಗವಾಗಿ ಹೆಚ್ಚಿನ ಬಸ್‌ಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಹುನಗುಂದದಿಂದ ಹುಬ್ಬಳ್ಳಿ, ಕಾಡಗಿಹಳ್ಳ, ರಾಯಚೂರು, ಗಜೇಂದ್ರಗಡ, ಗದಗ, ಹುಸ್ಮನಾಬಾದ, ಪಂಢರಾಪುರ, ನಾಸಿಕ, ಸಾತಾರಾ, ಅಕ್ಕಲಕೋಟ, ಗುಡ್ಡಾಪೂರ, ತುಳಜಾಪೂರ, ಕೋಲ್ಲಾಪೂರ ಸೇರಿ ರಾಜ್ಯ ಮತ್ತು ಅಂತ ರಾಜ್ಯಕ್ಕೆ ಬಸ್‌ಗಳ ಸಂಪರ್ಕ ದ್ವಿಗುಣಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು. ಜಹೀರ ಸಂಗಮಕರ ಮಾತನಾಡಿ, ಹುನಗುಂದ ಬಸ್ ನಿಲ್ದಾಣದಲ್ಲಿ ಮೂರು ಜನ ಸಾರಿಗೆ ನಿಯಂತ್ರಕರನ್ನು ನಿಯೋಜಿಸಬೇಕು. ಆದರೆ ಇಲ್ಲಿ ಓರ್ವ ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ಮಾಹಿತಿ ನೀಡಲು, ಬಸ್ ಎಂಟ್ರಿ ಮಾಡಿಕೊಳ್ಳಲು ತೊಂದರೆಯಾಗುತ್ತಿದೆ.
ಪಕ್ಕದ ಇಳಕಲ್ಲ ಬಸ್ ನಿಲ್ದಾಣದಲ್ಲಿ ನಾಲ್ಕು ಸಿಬ್ಬಂದಿ ಇದ್ದಾರೆ. ಪ್ರಯಾಣಿಕರಿಗೆ ಸಮಯಕ್ಕೆ ಸರಿಯಾಗಿ ಬಸ್ ಲಭಿಸುತ್ತಿಲ್ಲ. ಹೊಸ ಮಾರ್ಗದ ಬಸ್ ಸರಿಯಾಗಿ ಓಡುತ್ತಿಲ್ಲ, ಬಸ್ ನಿಲ್ದಾಣದ ಮುಂದೆ ಬೈಕ್ ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ಪಾರ್ಕಿಂಗ್ ಸಮಸ್ಯೆಯಾಗದಂತೆ ಸಾರಿಗೆ ಅಽಕಾರಿಗಳು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಕರವೇ ಇಳಕಲ್ಲ ಘಟಕದ ಅಧ್ಯಕ್ಷ ಅಶೋಕ ಪೂಜಾರಿ, ಕರವೇ ಉಪಾಧ್ಯಕ್ಷ ಹುಸೇನ ಸಂದಿಮನಿ, ಹಸನ ಕಲಕಬಂಡಿ, ಮಹ್ಮದ ನಧಾಫ, ಪ್ರವೀಣ ವಾಲಿಕಾರ, ಮೆಹಬೂಬ ಅಳೋಳ್ಳಿ, ಮಹೇಶ ಗಂಗೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net