ಇಳಕಲ್ಲ ನಗರದ ಕಂಠಿ ವೃತ್ತದಲ್ಲಿ ರಸ್ತೆ ಬಂದ್‌ಮಾಡಿ ಖಾಲಿ ಕೊಡ ಹಿಡಿದು ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಸಿದರು. ಬಸನಗೌಡ ಪಾಟೀಲ, ಪರಶುರಾಮ ಬಿಸಿಲದಿನ್ನಿ, ಮಹೇಶ ಪಾಟೀಲ, ಸಿದ್ದಪ್ಪ ಹೆಮ್ಮವಾಡಗಿ, ಸಿದ್ದಣ್ಣ ಘಂಟಿ, ಈರಯ್ಯ ಕೂಡಲಗಿಮಠ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಂಠಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ
ಖಾಲಿ ಕೊಡಗಳ ಪ್ರದರ್ಶನ
ಟಯರ್ ಸುಟ್ಟು ಆಕ್ರೋಶ
ಇಳಕಲ್ಲ:ಕಳೆದ 10 ದಿನಗಳಿಂದ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ. ರಾತ್ರಿ 12 ಗಂಟೆಗೆ ಕಡಿಮೆ ಪ್ರಮಾಣದಲ್ಲಿ ನೀರು ಬಿಡುತ್ತಾರೆ. ಕುಡಿಯಲು ಹಾಗೂ ದನಕರುಗಳಿಗೆ ನೀರು ಇಲ್ಲದಂತಾಗಿದೆ ಎಂದು ಮಹಿಳೆಯರು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕಂಠಿ ವೃತ್ತದಲ್ಲಿ ಕುಡಿಯುವ ನೀರಿಗಾಗಿ ಶನಿವಾರ ಕಿಲ್ಲಾ ಓಣಿ ಸೇರಿ ವಿವಿಧ ವಾರ್ಡಿನ ನಿವಾಸಿಗಳು ರಸ್ತೆ ಬಂದ್ ಮಾಡಿ, ಖಾಲಿ ಕೊಡಗಳನ್ನು ಹಿಡಿದು, ಮಾನವ ಸರಪಳಿ ನಿರ್ಮಿಸಿ, ಟಯರ್‌ಗೆ ಬೆಂಕಿ ಹಚ್ಚಿ ಬೃಹತ್ ಪ್ರತಿಭಟನೆ ನಡೆಸಿದರು.
ನೀರು ಸರಬರಾಜುದಾರರಿಗೆ -ಫೋ ನ್ ಮಾಡಿದರೆ, ಜಾಕ್‌ವೆಲ್ ಸಮಸ್ಯೆ ಇದೆ, ಪೈಪ್ ಲೀಕೆಜ್ ಆಗಿದೆ ಎಂದು ಸಬೂಬು ಹೇಳುತ್ತಿದ್ದಾರೆ. ಹಳೇಯ ಮೋಟಾರ್ ತೆಗೆದು ಹೊಸ ಮೋಟಾರ್ ಅಳವಡಿಸಿ, ನಗರಸಭೆಯಲ್ಲಿ ಅನುದಾನ ಇಲ್ಲದಿದ್ದರೆ, ನಗರದ ತುಂಬೆಲ್ಲ ಭಿಕ್ಷೆ ಬೇಡಿ ಹಣ ನೀಡುತ್ತೇವೆ ಎಂದು ರೈತ ಬಸನಗೌಡ ಪಾಟೀಲ ಆಕ್ರೋಶ ಹೊರ ಹಾಕಿದರು.
ಪರಶುರಾಮ ಬಿಸಿಲದಿನ್ನಿ, ಮಹೇಶ ಪಾಟೀಲ ಮಾತನಾಡಿ, ನಗರದಲ್ಲಿ 24/7 ಕುಡಿಯುವ ನೀರು ಸರಿಯಾಗಿ ಪೂರೈಕೆ ಮಾಡದಿದ್ದರೆ, ನಗರವನ್ನು ಬಂದ್ ಮಾಡಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡಲಾಗುವುದು. ಸರಿಯಾಗಿ ನೀರು ಪೂರೈಸದಿದ್ದರೆ, ನಗರಸಭೆಗೆ ಬೀಗ ಜಡಿಯತ್ತೆವೆ ಎಂದು ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ನಗರಸಭೆ ಅಽಕಾರಿ ಪರಶುರಾಮ ನಾರಾಯಣಿ ಆಗಮಿಸಿ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಿದ್ದು ಸಂಜೆಯೊಳಗೆ ನೀರಿನ ವ್ಯವಸ್ಥೆಯನ್ನು ಸರಿಪಡಿಸಲಾಗುವುದು ಎಂದು ಹೇಳಿದರು.
ಮೂರು ದಿನಕ್ಕೊಮ್ಮೆಯಾದರೂ ಬೆಳಗ್ಗೆಯಿಂದ ಸಂಜೆಯವರೆಗೆ ಸಮರ್ಪಕವಾಗಿ ನೀರು ಪೂರೈಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಶಹರ ಪೋಲಿಸ್ ಠಾಣೆ ಪಿಎಸ್‌ಐ ಮಂಜುನಾಥ ಪಾಟೀಲ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಮುಟುಕುಗೊಳಿಸಿದರು.