ತೇರದಾಳದ ಡಾ. ಸಿದ್ಧಾಂತ ದಾನಿಗೊಂಡ್ ಶಾಲೆಗೆ ಕಿರೀಟ

 ಮಹಾಲಿಂಗಪುರದಲ್ಲಿ ರಡ್ಡಿ ಕ್ರಿಕೆಟ್ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಹೇಮರೆಡ್ಡಿ ಮಲ್ಲಮ್ಮ ಅಂಡರ್-15 ಅಂತರ್ ಶಾಲಾ ಕ್ರಿಕೆಟ್ ಟೂರ್ನಮೆಂಟ್-2026ರ ಪಂದ್ಯದ ಫೈನಲ್‌ ಪಂದ್ಯದಲ್ಲಿ ಡಾ. ಸಿದ್ಧಾಂತ ದಾನಿಗೊಂಡ್ ಸೆಂಟ್ರಲ್ ಸ್ಕೂಲ್ ತೇರದಾಳ ತಂಡ ಜಯಭೇರಿ ಬಾರಿಸಿತು. ಬಸವರಾಜ ಮುಗಳಖೋಡ, ಎಸ್.ಎಂ.ಗುಜ್ಜರ, ಮಹಾದೇವ ಕಡಬಲ್ಲವರ ಇತರರಿದ್ದರು.
ಮಹಾಲಿಂಗಪುರದಲ್ಲಿ ರಡ್ಡಿ ಕ್ರಿಕೆಟ್ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಹೇಮರೆಡ್ಡಿ ಮಲ್ಲಮ್ಮ ಅಂಡರ್-15 ಅಂತರ್ ಶಾಲಾ ಕ್ರಿಕೆಟ್ ಟೂರ್ನಮೆಂಟ್-2026ರ ಪಂದ್ಯದ ಫೈನಲ್‌ ಪಂದ್ಯದಲ್ಲಿ ಡಾ. ಸಿದ್ಧಾಂತ ದಾನಿಗೊಂಡ್ ಸೆಂಟ್ರಲ್ ಸ್ಕೂಲ್ ತೇರದಾಳ ತಂಡ ಜಯಭೇರಿ ಬಾರಿಸಿತು. ಬಸವರಾಜ ಮುಗಳಖೋಡ, ಎಸ್.ಎಂ.ಗುಜ್ಜರ, ಮಹಾದೇವ ಕಡಬಲ್ಲವರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೇಮರೆಡ್ಡಿ ಮಲ್ಲಮ್ಮ ಅಂಡರ್ 15 ಅಂತರ್ ಶಾಲಾ ಕ್ರಿಕೆಟ್ ಟೂರ್ನಮೆಂಟ್-2026
  • ಡಾ. ಸಿದ್ಧಾಂತ ದಾನಿಗೊಂಡ್ ಸೆಂಟ್ರಲ್ ಸ್ಕೂಲ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
  • ಪಥ್ವಿ ಪಟ್ಟಣಕುಡೆ ಅವರಿಗೆ ಅತ್ಯುತ್ತಮ ಬ್ಯಾಟ್ಸ್ಮ್‌ನ್ ಹಾಗೂ ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿ
ಮಹಾಲಿಂಗಪುರ:

ರಡ್ಡಿ ಕ್ರಿಕೆಟ್ ಅಕಾಡೆಮಿ ಆಯೋಜಿಸಿದ್ದ ಹೇಮರೆಡ್ಡಿ ಮಲ್ಲಮ್ಮ ಅಂಡರ್ 15 ಅಂತರ್ ಶಾಲಾ ಕ್ರಿಕೆಟ್ ಟೂರ್ನಮೆಂಟ್-2026ರಲ್ಲಿ ತೇರದಾಳದ ಡಾ. ಸಿದ್ಧಾಂತ ದಾನಿಗೊಂಡ್ ಸೆಂಟ್ರಲ್ ಸ್ಕೂಲ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಪಟ್ಟಣದ ಕೋಳಿಗುಡ್ಡ ಮೈದಾನದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಜಮಖಂಡಿ ಸಿಸಿ ತಂಡವನ್ನು 60 ರನ್‌ಗಳಿಂದ ಮಣಿಸಿದ ತೇರದಾಳ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡಾ. ಸಿದ್ಧಾಂತ ದಾನಿಗೊಂಡ್ ಸೆಂಟ್ರಲ್ ಸ್ಕೂಲ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 114 ರನ್ ಗಳಿಸಿತು. ಪಥ್ವಿ ಪಟ್ಟಣಕುಡೆ 50 ಎಸೆತಗಳಲ್ಲಿ 50 ರನ್ ಸಿಡಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
115 ರನ್‌ಗಳ ಗುರಿ ಬೆನ್ನಟ್ಟಿದ ಜಮಖಂಡಿ ಸಿಸಿ ತಂಡ ತೇರದಾಳದ ಬೌಲರ್‌ಗಳ ದಾಳಿಗೆ ತತ್ತರಿಸಿ 12.5 ಓವರ್‌ಗಳಲ್ಲಿ ಕೇವಲ 54 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ತೇರದಾಳ ತಂಡ 60 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಟ್ರೋಫಿ ಎತ್ತಿಹಿಡಿಯಿತು.

ವೈಯಕ್ತಿಕ ಪ್ರಶಸ್ತಿಗಳು

ಪಥ್ವಿ ಪಟ್ಟಣಕುಡೆ ಅವರಿಗೆ ಅತ್ಯುತ್ತಮ ಬ್ಯಾಟ್ಸ್ಮ್‌ನ್ ಹಾಗೂ ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಲಭಿಸಿದರೆ, ಲಕ್ಷ್ಮಣ ಚಿಕ್ಕಟ್ಟಿ ಅತ್ಯುತ್ತಮ ಬೌಲರ್ ಪ್ರಶಸ್ತಿ ಪಡೆದರು. ಜೇಸೀ ಶಾಲೆಯ ದಿಶಾ ಶಿರೋಳ ಅತ್ಯುತ್ತಮ ವಿಕೆಟ್ ಕೀಪರ್ ಹಾಗೂ ಜಮಖಂಡಿ ಸಿಸಿಯ ರುದ್ರ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿಗೆ ಭಾಜನರಾದರು.
ಕೆಎಸ್‌ಸಿಎ ಜಿಲ್ಲಾ ಅಂಡರ್-16 ಆಯ್ಕೆ ಸಮಿತಿ ಸದಸ್ಯ ಬಸವರಾಜ ಮುಗಳಖೋಡ, ಹಿರಿಯ ಕ್ರಿಕೆಟಿಗರಾದ ಎಸ್.ಎಂ. ಗುಜ್ಜರ್, ಪಣಸಲ್ಕರ್, ಮಹಾದೇವ ಕಡಬಲ್ಲವರ, ಜೇಸೀ ಶಾಲೆಯ ನಾರನಗೌಡ ಉತ್ತಂಗಿ, ಜಮಖಂಡಿ ಸಿಸಿ ಕೋಚ್ ಭೀಮಶಂಕರ ಕುಲಕರ್ಣಿ, ಶ್ರೀನಿವಾಸ ಅಪರಂಜಿ ಹಾಗೂ ರಡ್ಡಿ ಕ್ರಿಕೆಟ್ ಅಕಾಡೆಮಿ ಕೋಚ್ ಮಹೇಶ ರಡ್ಡಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net